ಪಾವಗಡ: ಇಮ್ರಾನ್ ಉಲ್ಲಾ
ಇತ್ತಿಚೆಗೆ ವಿವಿಧ ಪಕ್ಷಗಳು ಸಾಲ ಮನ್ನಾ ಎಂಬ ತಮ್ಮ ತಮ್ಮ ಪ್ರಣಾಳಿಕೆಗಳಲ್ಲಿ ಬಳಸುತ್ತಿರುವುದರಿಂದ ಬ್ಯಾಂಕುಗಳು ದಿವಾಳಿ ಆಗುವ ಸಾಧ್ಯತೆ ಹೆಚ್ಚು ಮಾಜಿ ಸಚಿವ ಹಾಲಿ ಶಾಸಕ ವೆಂಕಟರವಣಪ್ಪ.

ಪಾವಗಡ ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಮಳಿಗೆಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಬ್ಯಾಂಕುಗಳಲ್ಲಿ ಸಾರ್ವಜನಿಕರು ಪ್ರತಿಯೊಬ್ಬರು ಪಡೆದಂತಹ ಸಾಲ ಕಾಲಕಾಲಕ್ಕೆ ಮರುಪಾವತಿಸಿದರೆ ಯಾವುದೇ ಬ್ಯಾಂಕುಗಳು ದಿವಾಳಿ ಆಗಲು ಸಾಧ್ಯವಿಲ್ಲ ಇಲ್ಲದಿದ್ದರೆ ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೂ ಸಹ ಸಂಬಳ ಕೊಡೋದು ಕಷ್ಟಕರವಾಗಿದೆ. ಇತ್ತೀಚೆಗೆ ಸಾರ್ವಜನಿಕರು ಬ್ಯಾಂಕುಗಳು ಠೇವಣಿ ಇಡುವ ಸಂಖ್ಯೆ ಕಡಿಮೆಯಾಗಿದೆ.
ನಂತರ ಮಾಜಿ ಶಾಸಕರಾದ ತಿಮ್ಮರಾಯಪ್ಪ ಮಾತನಾಡಿ ಈಗಿರುವ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಮಳಿಗೆ ಕಟ್ಟಡ ಬಹಳ ಹಳೆಯದಾಗಿದ್ದು ಈ ಕಟ್ಟಡವನ್ನು ತೆರವುಗೊಳಿಸಿ ನೂತನವಾಗಿ ವಾಣಿಜ್ಯ ಮಳಿಗೆಗಳು ರೀತಿಯಲ್ಲಿ ಅಡ ನಿರ್ಮಾಣ ಮಾಡಬೇಕು. ರೈತರಿಗೆ ಹೆಚ್ಚಿನ ಬ್ಯಾಂಕಿನಲ್ಲಿ ಆದ್ಯತೆ ನೀಡಿ ಆ ಸವಲಂಬನೆ ಜೀವನಕ್ಕೆ ಆದ್ಯತೆ ನೀಡುವ ಕೆಲಸ ಬ್ಯಾಂಕಿನವರು ಮಾಡಬೇಕಾಗಿದೆ.
ಈ ವೇಳೆ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷ ಅಶ್ವಥ್ ನಾರಾಯಣ ಮಾತನಾಡಿ ನನ್ನ ಅವಧಿಯಲ್ಲಿ ಎಲ್ಲಾ ಪಕ್ಷದ ಮುಖಂಡರಿಗೆ ಗೂಡಿಸಿಕೊಂಡ ಹೋಗಿ ಅಭಿವೃದ್ಧಿ ದೆಸೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.
ದೇಶದ ಬೆನ್ನೆಲುಬು ರೈತ ಕೃಷಿ ಚಟುವಟಿಕೆಗಳಿಗೆ ನಮ್ಮ ಬ್ಯಾಂಕಿನ ಸವಲತ್ತುಗಳನ್ನು ಬಳಸಿಕೊಂಡು ಅತಿ ಹೆಚ್ಚು ಕೃಷಿ ಏತರ ಚಟುವಟಿಕೆಗಳಲ್ಲಿ ಹೆಚ್ಚಿನ ಆದ್ಯತೆ ಕೊಡಬೇಕು.
ನನ್ನ ಅವಧಿಯಲ್ಲಿ ನೀಡಿದಂತಹ ಸಾಲ ಶೇಕಡವಾರು 95% ಮರು ಬ್ಯಾಂಕಿಗೆ ಕಟ್ಟಿಸುವಂತಹ ಕೆಲಸ ಮಾಡಿದ್ದೇನೆ.
ಈಗ ನನ್ನ ಅವಧಿಯಲ್ಲಿ ಶಾಸಕರ ನೇತೃತ್ವದಲ್ಲಿ 15 ಲಕ್ಷದ ಮೂರು ಮಳಿಗೆಗಳಿಗೆ ಶಂಕುಸ್ಥಾಪನೆ ಸಹ ನೆರವೇರಿಸಲಾಗಿದೆ.
ಈ ವೇಳೆ ಡಿಸಿ ಬ್ಯಾಂಕ್ ನ ಜಿಲ್ಲಾ ನಿರ್ದೇಶಕರಾದಂತಹ ತಾಳೆಮರದ ನರಸಿಂಹಯ್ಯ .ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ವಕೀಲ ನಾಗೇಂದ್ರಪ್ಪ. ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಚೆನ್ನಮಲ್ಲಪ್ಪ. ಎಲ್ ಡಿ ಬ್ಯಾಂಕ್ ನ ಮಾಜಿ ಅಧ್ಯಕ್ಷ ಕೆಂಚಗನಹಳ್ಳಿ ಗೋವಿಂದಪ್ಪ. ಪಿ ಎಲ್ ಡಿ ಬ್ಯಾಂಕ್ ನ ಮಾಜಿ ಅಧ್ಯಕ್ಷರಾದಂತಹ ಶೇಷಗಿರಿ. ಪ್ರಮೋದ್ ಕುಮಾರ್. ಹಾಗೂ ಪುರಸಭೆ ಸದಸ್ಯರುಗಳು ಇದ್ದರು.

