Janataa24 NEWS DESK
Turuvekere: ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್ 2025ಕ್ಕೆ ತೇಜಸ್ ಹೆಚ್.ಎನ್ ಆಯ್ಕೆ.

ತುರುವೇಕೆರೆ: ತಾಲೂಕಿನ ಹಿರೇಡೊಂಕಿಹಳ್ಳಿ ಗ್ರಾಮದ ವಾಸಿಯಾದ ನಟರಾಜ್ ಎಂಬುವರ ಪುತ್ರ ತೇಜಸ್ ಹೆಚ್, ಏನ್, ರವರು ನವದೆಹಲಿಯಲ್ಲಿ ನಡೆಯುವ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ವತಿಯಿಂದ ಭಾರತ ಮಂಟಪ ದಲ್ಲಿ 2025 ಜನವರಿ 11-12 ರಂದು ಸ್ವಾಮಿ ವಿವೇಕಾನಂದರ ಜನ್ಮ ಜಯಂತಿಯ ಪ್ರಯುಕ್ತ ‘ ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್ 2025’ ಕಾರ್ಯಕ್ರಮವನ್ನು ಆಯೋಜಿಸಿದ್ದು.
ಈ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರಮೋದಿ ರವರು ದೇಶದ ವಿವಿಧ ರಾಜ್ಯಗಳಿಂದ ಆಯ್ಕೆ ಯಾದ ಯುವಕರ ದೂರದೃಷ್ಟಿಯ ಮಾತುಗಳನ್ನು ಆಲಿಸಲಿದ್ದಾರೆ.
ಕರ್ನಾಟಕದಿಂದ 45 ಯುವಕರನ್ನು ‘ವಿಕಸಿತ ಭಾರತ 2047’ ಕುರಿತು ತಮ್ಮ ಕಲ್ಪನೆ ಮತ್ತು ದೂರದೃಷ್ಟಿಯನ್ನು ಹಂಚಿಕೊಳ್ಳಲು ಆಯ್ಕೆ ಮಾಡಲಾಗಿದೆ,ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಂತಿಮ ವರ್ಷದ ಬಿಎಸ್ಸಿ ಕೃಷಿ ಪದವಿ ವ್ಯಾಸಂಗ ಮಾಡುತ್ತಿರುವ ತುರುವೇಕೆರೆ ತಾಲೂಕಿನ ಹಿರೇಡೊಂಕಿಹಳ್ಳಿ ಗ್ರಾಮದ ವಾಸಿಯಾದ ನಟರಾಜ್ ಅವರ ಪುತ್ರ 22 ವರ್ಷದ ಯುವಕ ತೇಜಸ್ ಹೆಚ್.ಎನ್ ರವರು ಯುವಜನ ಸಬಲೀಕರಣದ ಕುರಿತು ತಮ್ಮ ದೂರದೃಷ್ಟಿ ಯನ್ನು ಹಂಚಿಕೊಳ್ಳಲಿದ್ದಾರೆ.
ನರೇಂದ್ರ ಮೋದಿ ರವರು ಕೆಂಪು ಕೋಟೆಯಲ್ಲಿ ತಾವು ಭಾಷಣ ಮಾಡುವ ಸಂದರ್ಭದಲ್ಲಿ 1 ಲಕ್ಷ ಜನ ರಾಜಕೀಯ ಹಿನ್ನೆಲೆ ಇರದ,ಮೊದಲನೇ ತಲೆಮಾರಿನ ಯುವಕರಿಗೆ ದೇಶದ ಭವಿಷ್ಯವನ್ನು ನಿರ್ಮಾಣ ಮಾಡುವ ದೃಷ್ಟಿಯಿಂದ ರಾಜಕೀಯಕ್ಕೆ ಕರೆತರಲು ಹೆಚ್ಚು ಒತ್ತು ನೀಡುವುದಾಗಿ ಮಾತನಾಡಿದ್ದು ಅದರ ಭಾಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಇದರ ಹಿನ್ನೆಲೆಯಲ್ಲಿ ವಿವಿಧ ಹಂತಗಳ ಆಯ್ಕೆ ಪ್ರಕ್ರಿಯೆಗಳ ಮೂಲಕ ಈ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ವರದಿ:ಮಂಜುನಾಥ್ ಕೆ ಎ ತುರುವೇಕೆರೆ.
Manmohan Singh: ಮನಮೋಹನರಿಗೆ ಅಂತಿಮ ವಿದಾಯ ಸಲ್ಲಿಸಿದ ನರೇಂದ್ರ ಮೋದಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.