Document

Turuvekere: ಸ್ವಚ್ಛತೆ ಎಂಬ ಪದಕ್ಕೆ ಅರ್ಥವೇ ಗೊತ್ತಿಲ್ಲವೇ?

Turuvekere: ಸ್ವಚ್ಛತೆಯಿಂದ ದೂರ ಉಳಿದ ಮುನಿಯೂರು ಗ್ರಾಮ ಪಂಚಾಯ್ತಿ

ತುರುವೇಕೆರೆ: ತಾಲೂಕಿನ ಕಸಬಾ ಹೋಬಳಿ ಮುನಿಯೂರು ಗ್ರಾಮದಲ್ಲಿ ಅಲ್ಲಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಸ್ವಚ್ಛತೆ ಪದದ ಅರ್ಥವೇ ಗೊತ್ತಿಲ್ಲದ ಹಾಗೆ ಸಾರ್ವಜನಿಕರ ಜೀವದ ಜೊತೆ ಆಟವಾಡುತ್ತಿದ್ದಾರೆ. ಇನ್ನು ಇದೇ ಗ್ರಾಮದ ತುರುವೇಕೆರೆ ತಾಲೂಕಿನ ಮಾಜಿ ಶಾಸಕ ಎಂ ಡಿ ಲಕ್ಷ್ಮೀನಾರಾಯಣ್ ಅವರು ಕೂಡ ಇದೇ ಗ್ರಾಮದವರು.

Turuvekere: Muniyur village panchayat is far from cleanliness.

ಆದರೂ ಮಾಜಿ ಶಾಸಕರ ತವರೂರಲ್ಲೇ ಗ್ರಾಮ ಪಂಚಾಯಿತಿಯಿಂದ ಸ್ವಚ್ಛತೆಗೆ ಗಮನಹರಿಸದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗೆ ನಾಚಿಕೆಗೇಡಿನ ಸಂಗತಿ.ಈಗಾಗಲೇ ಮುನಿಯೂರಿನ ಗ್ರಾಮಸ್ಥರು ಮೂಲಸೌಕರ್ಯದ ಬಗ್ಗೆ ಅದೆಷ್ಟೋ ಬಾರಿ ಮನವಿ ಸಲ್ಲಿಸಿದರು ಕೂಡ ಸ್ವಚ್ಛತೆಯ ಬಗ್ಗೆ ಕಾಳಜಿ ಇಲ್ಲದೆ ಅಧಿಕಾರದ ಗುಂಗಿನಲ್ಲೇ ಕಾಲ ಕಳೆಯುತ್ತಿದ್ದಾರ ಅಧಿಕಾರಿಗಳು, ಮತ್ತು ಜನಪ್ರತಿನಿಧಿಗಳು. ಮುನಿಯೂರು ಗ್ರಾಮದ ಚರಂಡಿಯನ್ನು ನೋಡಿದರೆ ಖಂಡಿತ ಈ ಗ್ರಾಮದಲ್ಲಿ ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ.

ಹಾಗಾದರೆ ತಾಲೂಕು ಕಾರ್ಯನಿರ್ವಾಹಣಾಧಿಕಾರಿಗಳು ಇದಕ್ಕೆ ಸಂಬಂಧಪಟ್ಟಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸರಿಯಾಗಿ ಪಾಠ ಮಾಡಿಲ್ಲವೇ ? ಅಥವಾ ನಿಮ್ಮ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಯಾವುದೇ ಕಾರಣಕ್ಕೂ ಮೂಲ ಸೌಕರ್ಯದ ಬಗ್ಗೆ ಚಿಂತಿಸಬೇಡಿ ಸುಮ್ಮನೆ ಕುಳಿತುಕೊಂಡು ಸಂಬಳ ತೆಗೆದುಕೊಳ್ಳಿ ಎಂದು ಇವರೇ ಹೇಳಿಕೊಟ್ಟಿದ್ದಾರಾ?

ಒಟ್ಟಾರೆ ಈ ಗ್ರಾಮದಲ್ಲಿ ಯಾವುದೇ ವ್ಯಕ್ತಿಗಳಾಗಲಿ ಪುಟ್ಟ ಮಕ್ಕಳಾಗಲಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದರೆ, ಅದಕ್ಕೆ ಮುಖ್ಯ ಕಾರಣ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಇವರೇ ನೇರ ಹೊಣೆ ಹೊರಬೇಕಾಗುತ್ತದೆ.

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://www.janataa24.com/pendrive-mp-prajwal-revanna-expelled-from-jds/

https://www.facebook.com/share/p/qegCjZoXAKmYdWWj/?mibextid=qi2Omg

Document

Leave a Reply

Your email address will not be published. Required fields are marked *