Janataa24 NEWS DESK
Turuvekere: ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಇತಿಶ್ರೀ ಹಾಡುತ್ತೇವೆ ಎಂಬ ಎಚ್ಚರಿಕೆ ನೀಡಿದ ಶಾಸಕ ಎಂ ಟಿ ಕೃಷ್ಣಪ್ಪ.
ತುರುವೇಕೆರೆ : ಗುಬ್ಬಿ ತಾಲೂಕಿನ ಬಳಿ ನಡೆಯುತ್ತಿರುವ ಲಿಂಕ್ ಕೆನಾಲ್ ಕಾಮಗಾರಿಯು ಅವೈಜ್ಞಾನಿಕವಾಗಿದ್ದು, ನಮ್ಮ ಜಿಲ್ಲೆಯ ರೈತರಿಗೆ ಅನ್ಯಾಯವಾಗುತ್ತಿದೆ, ಸುಮಾರು ಒಂದು ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ ಅದರ ಫಲವಾಗಿ ಒಂದು ವರ್ಷಗಳ ಕಾಲ ಕಾಮಗಾರಿ ಸ್ಥಗಿತಗೊಂಡಿತು ಎಂದು ತುರುವೇಕೆರೆ ಕ್ಷೇತ್ರದ ಶಾಸಕ ಎಂ ಟಿ ಕೃಷ್ಣಪ್ಪ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು ಸರ್ಕಾರವು ಈ ಕಾಮಗಾರಿ ಮತ್ತೆ ಮಾಡಲು ಮುಂದಾದಾಗ ರೈತರು ರೊಚ್ಚಿಗೆದ್ದು ದಿನಾಂಕ 31- 5 — 2025 ರಂದು ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ರೈತರು ಹೋರಾಟದಲ್ಲಿ ಭಾಗಿಯಾಗಿದ್ದರು ಅದಕ್ಕೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಕೂಡ ಸೇರಿಕೊಂಡು ಕಾಮಗಾರಿ ಮತ್ತೆ ನಿಲ್ಲಿಸಿದ್ದೇವೆ, ಮತ್ತೇನಾದರೂ ಕಾಮಗಾರಿ ನಡೆಸಿದರೆ ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿಕೊಂಡು ಹೋರಾಟ ಮಾಡುವ ಯೋಜನೆ ಇದೆ, ಹೋರಾಟದಲ್ಲಿ ಭಾಗವಹಿಸಿದ ರೈತ ಬಾಂಧವರಿಗೆ ಸಾರ್ವಜನಿಕರಿಗೆ ಅಭಿನಂದನೆ ಹೇಳಿ ತಾವೆಲ್ಲರೂ ಜಿಲ್ಲೆಯ ಹಿತದೃಷ್ಟಿಯಿಂದ ಭಾಗವಹಿಸಿದ್ದೀರಿ.ರಾಜ್ಯ ಸರ್ಕಾರವು ಈ ಹೋರಾಟದಲ್ಲಿ ಮುಂದಾಳತ್ವ ವಹಿಸಿದ್ದ ನಾಯಕರುಗಳ ಮೇಲೆ,ಮಠಾಧೀಶರ ಮೇಲೆ,ರೈತರ ಮೇಲೆ, ಸಾರ್ವಜನಿಕರ ಮೇಲೆ ಕೇಸು ದಾಖಲಿಸಿ ನಮ್ಮ ಶಕ್ತಿಯನ್ನು ಕುಗ್ಗಿಸುವ ವ್ಯರ್ಥ ಪ್ರಯತ್ನ ಮಾಡಿದೆ.
ಇದಕ್ಕೆಲ್ಲ ನಾವು ಹೆದರುವುದಿಲ್ಲ, ಅವಶ್ಯಕತೆ ಇಲ್ಲ, ನಮ್ಮ ರೈತರ ಜೀವದ ಜೊತೆ ಚೆಲ್ಲಾಟವಾಡುವ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ ನಮ್ಮಗಳ ವಿರುದ್ಧ ಕೇಸು ದಾಖಲಿಸಿರುವ ಕೇಸುಗಳನ್ನು ಗುಬ್ಬಿ ತಾಲೂಕಿನ ವಕೀಲರ ಸಂಘದ ಪದಾಧಿಕಾರಿಗಳ ಸಭೆ ನಡೆಸಿ ಉಚಿತವಾಗಿ ವಕಾಲತ್ತು ಹಾಕುತ್ತೇವೆ ಎಂಬ ನಿರ್ಧಾರವನ್ನು ಮಾಡಿದ್ದಾರೆ ಎಂದು ವಕೀಲರ ಸಂಘದ ಅಧ್ಯಕ್ಷ ಮೋಹನ್ ರಾಜ್ ಎಂಬುವರು ನಮ್ಮ ಹೋರಾಟಗಾರರ ಪರ ನಿಂತಿದ್ದಾರೆ ಅವರಿಗೆ ಅಭಿನಂದಿಸುತ್ತೇನೆ ಎಂದರು ಇದಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಜಿಲ್ಲೆಯ ಹಿತ ಕಾಪಾಡ ಬೇಕಾಗಿತ್ತು ಆದರೆ ಅವರಿಂದ ಈ ರೀತಿಯ ಹೇಳಿಕೆ ಬರುತ್ತೆ ಎಂದು ನಾನು ಊಹಿಸಿರಲಿಲ್ಲ ಉಲ್ಟಾ ಹೊಡೆದಿದ್ದಾರೆ,ಇದಕ್ಕೆ ಸರ್ಕಾರ ಅನುಮೋದನೆ ಕೊಡದೆ ಇನ್ನೇನು ತಾಲೂಕು ಆಡಳಿತ ಅನುಮೋದನೆ ನೀಡುತ್ತಾ ಎಂದು ಜಿಲ್ಲಾ ಸಚಿವರ ಹೇಳಿಕೆಗೆ ವ್ಯಂಗ್ಯವಾಡಿ ಈ ಕಾಮಗಾರಿ ಕಾನೂನು ಬಾಹಿರವಾಗಿದೆ ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಮುಖ್ಯಮಂತ್ರಿಗಳ ಒತ್ತಾಯಕ್ಕೆ ಮಣಿದು . ನಮ್ಮ ಜಿಲ್ಲೆಗೆ ಅನ್ಯಾಯ ಮಾಡುತ್ತಿದ್ದಾರೆ ಇದು ಬೇಜಾರು ತರುವಂತಹ ವಿಚಾರವಾಗಿದೆ ಇದನ್ನ ನಾನು ಖಂಡಿಸುತ್ತೇನೆ.
ನಮ್ಮಗಳ ಮೇಲೆ ಎಫ್ಐಆರ್ ದಾಖಲು ಮಾಡಿದ್ದೀರಿ ಅದರಲ್ಲಿ ಮೊದಲನೇ ಆರೋಪಿ ನಾನೇ ಆಗಿದ್ದೇನೆ ನಮ್ಮಗಳ ಮೇಲೆ ಸುಮಾರು ಆರು ಕೇಸುಗಳನ್ನು ಹಾಕಿದ್ದಾರೆ ನನ್ನ ಮೇಲೆ ಎಷ್ಟು ಕೇಸುಗಳನ್ನಾದರೂ ಹಾಕಿಕೊಳ್ಳಿ ಅದಕ್ಕೆ ನಾನು ಎದುರುವುದಿಲ್ಲ ರೈತರ ಮತ್ತು ಮಠಾಧೀಶರ ಮೇಲೆ ಹಾಕಿರುವುದು ಸರ್ಕಾರಕ್ಕೆ ನಾಚಿಕೆ ತರುವಂತಹ ವಿಚಾರ ಜಿಲ್ಲಾಡಳಿತಕ್ಕೆ ನಾನು ಒತ್ತಾಯ ಮಾಡುತ್ತೇನೆ ರೈತರ ಮಠಾಧೀಶರು ಮತ್ತು ಸಾರ್ವಜನಿಕರ ಮೇಲೆ ಹಾಕಿರುವ ಕೇಸನ್ನು ವಾಪಸ್ಸು ತೆಗೆದುಕೊಳ್ಳಿ ಇಲ್ಲವಾದಲ್ಲಿ ನಿಮ್ಮ ದುರಾಡಳಿತದ ವಿರುದ್ಧ ಮುಂಬರುವ ದಿನಗಳಲ್ಲಿ SP ಕಚೇರಿಯ ಮುಂದೆ ಸಾವಿರಾರು ರೈತರೊಂದಿಗೆ ಧರಣಿ ನಡೆಸಲಾಗುವುದು ಸರಕಾರ ಪೊಲೀಸ್ ಇಲಾಖೆಯನ್ನ ಬಳಸಿಕೊಂಡು ಹೋರಾಟವನ್ನು ಹತ್ತಿಕ್ಕುತ್ತಿರುವುದು ಖಂಡನೀಯ ನಾವು ಹೋರಾಟ ನಿಲ್ಲಿಸುವುದಿಲ್ಲ, ಹೋರಾಟ ಮಾಡಿಯ ತೀರುತ್ತೇವೆ ಈಗಲೂ ಈ ಯೋಜನೆಯನ್ನು ಕೈಬಿಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಸರ್ಕಾರಕ್ಕೆ ಏನಾದರೂ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಗೌರವವಿದ್ದರೆ ಕೊಡಲೇ ಕಾಮಗಾರಿ ನಿಲ್ಲಿಸಿ ಕೂಡಲೇ ಕೇಸುಗಳನ್ನು ವಾಪಸ್ಸು ತೆಗೆದುಕೊಳ್ಳಲಿ ಎಂಬುದು ನನ್ನ ಒತ್ತಾಯವಾಗಿದೆ.ಒಂದು ವಾರದ ಗಡುವನ್ನು ತಮಗೆ ನೀಡುತ್ತಿದ್ದೇವೆ.
ನಮ್ಮ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ನಾನು ಹೇಳುವುದು ಇಷ್ಟೇ ಅಧಿಕಾರ ಹೋಗುತ್ತದೆ ಬರುತ್ತದೆ ನಮ್ಮ ಜಿಲ್ಲೆಗೆ ಅನ್ಯಾಯವಾದಾಗ ತಾವೆಲ್ಲರೂ ಸಹ ಭಾಗವಹಿಸಬೇಕು. ನಾವೆಲ್ಲರೂ ಶಾಶ್ವತವಾಗಿ ನೂರಾರು ವರ್ಷ ಬದುಕುವುದಿಲ್ಲ ನೀವು ಕೂಡ ಹೋರಾಟಕ್ಕೆ ಕೈಜೋಡಿಸಿ ಸರ್ಕಾರದ ದುರಾಡಳಿತ ದುರಹಂಕಾರಕ್ಕೆ ಇತಿಶ್ರೀ ಆಡುತ್ತೇವೆ ಎಂಬ ಎಚ್ಚರಿಕೆಯ ಸಂದೇಶವನ್ನು ನೀಡಿದರು.
ಇದೇ ಸಂದರ್ಭದಲ್ಲಿ ಮುಖಂಡರುಗಳಾದ ವೆಂಕಟಪುರ ಯೋಗೇಶ್, ವಿಜಯೇಂದ್ರ, ದೇವರಾಜು, ಶಶಿಧರ್, ಕಾಂತರಾಜು, ಕುಶಾಲ್ ಕುಮಾರ್, ರಾಮು, ಇಂದ್ರಜಿತ್, ಶಾಸಕರ ಆಪ್ತ ಸಹಾಯಕ ರಾಘವೇಂದ್ರ, ಹೊನ್ನೇನಹಳ್ಳಿ ಕೃಷ್ಣಪ್ಪ, ಇನ್ನು ಹಲವರು ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.