Document

Turuvekere: ಶಾಸಕ ಎಂ ಟಿ ಕೃಷ್ಣಪ್ಪ ರವರಿಂದ ತಾಲೂಕು ಜೆಡಿಎಸ್ ವಿದ್ಯಾರ್ಥಿ ಘಟಕದ ವಿದ್ಯಾರ್ಥಿಗಳೊಂದಿಗೆ ಸಂವಾದ.

Janataa24 NEWS DESK

Turuvekere: ವಿದ್ಯಾರ್ಥಿ ಮಿತ್ರ ಎಂದೇ ಹೆಸರಾಗಿರುವ ಶಾಸಕ ಎಂ ಟಿ ಕೃಷ್ಣಪ್ಪ ರವರಿಂದ ತಾಲೂಕು ಜೆಡಿಎಸ್ ವಿದ್ಯಾರ್ಥಿ ಘಟಕದ ವಿದ್ಯಾರ್ಥಿಗಳೊಂದಿಗೆ ಸಂವಾದ.

Turuvekere jds
ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಜೆಡಿಎಸ್ ವಿದ್ಯಾರ್ಥಿ ಘಟಕ ಮತ್ತು ಶಾಸಕರಾದ ಎಂಟಿ ಕೃಷ್ಣಪ್ಪ ಅವರೊಂದಿಗೆ ಸಂವಾದ ಸಭೆ.

ಶಾಸಕ ಎಂ ಟಿ ಕೃಷ್ಣಪ್ಪ ಮಾತನಾಡಿ,ಅವಕಾಶ ಸಿಕ್ಕಿದಾಗೆಲ್ಲ ಓದಿ, ಸರ್ಕಾರಿ ಕೆಲಸಗಳು ಸಿಗಬೇಕೆಂದರೆ ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು, ಸಮಯ ಸಿಕ್ಕಾಗಲೆಲ್ಲಾ ಗ್ರಂಥಾಲಯದಲ್ಲಿ ಕುಳಿತು ಓದಬೇಕು ವಿದ್ಯಾರ್ಥಿಗಳು ನ್ಯಾಯಯುತವಾದ ಹೋರಾಟ ಮಾಡುವ ಮುಂಚೂಣಿಯನ್ನು ಬೆಳೆಸಿಕೊಂಡರೆ ನಂತರ ತಾನಾಗಿಯೇ ಒಲಿದು ಬರುತ್ತದೆ ನಾಯಕತ್ವ ಎಂಬ ಕಿವಿಮಾತು ಹೇಳಿದರು, ಯಾವಾಗಲೂ ನಮ್ಮ ಉದ್ದೇಶ ನ್ಯಾಯಯುತವಾಗಿ ಇರಬೇಕು ನಮ್ಮರಾಷ್ಟ್ರದಲ್ಲಿ ಬಹಳ ನಾಯಕರು ವಿದ್ಯಾರ್ಥಿ ದೆಸೆಯಿಂದ ಬಂದಂತಹ ರಾಜಕೀಯ ಶಕ್ತಿ ಬೆಳೆಸಿಕೊಂಡಿದ್ದಾರೆ, ಹಾಗಾಗಿ ನಾನು ಕೂಡ ಬೆಳಗಾವಿ ಅಧಿವೇಶನದಲ್ಲಿ ನಮ್ಮ ತಾಲೂಕಿಗೆ ಒಂದು ಲಾ ಕಾಲೇಜು ಕೊಡಿ ಎಂದು ಈಗಾಗಲೇ ಪ್ರಸ್ತಾವನೆ ಇಟ್ಟಿದ್ದು ಸರ್ಕಾರ ಮುಂದಿನ ವರ್ಷದಲ್ಲಿ ಮಾಡುವದಾಗಿ ಭರವಸೆ ಕೂಡ ಕೊಟ್ಟಿದೆ ,ಅದನ್ನು ಒಂದು ಬಾರಿ ಕಾದು ನೋಡೋಣ ನಾನು ಯಾವುದೇ ಕಾರಣಕ್ಕೂ ನನ್ನ ಹೋರಾಟವನ್ನು ನಿಲ್ಲಿಸುವುದಿಲ್ಲ ಮಂಜೂರು ಮಾಡಿಲ್ಲ ಅಂದರು ಬಿಡುವ ಮಾತೇ ಇಲ್ಲ ವಿದ್ಯಾರ್ಥಿಗಳಾದ ನೀವುಗಳು ರೈತಪರ ನಿಲ್ಲಬೇಕು ಎಂದರು ,ಇದೆ ವೇಳೆ ಈಗಾಗಲೇ ನಮ್ಮ ತಾಲೂಕಿಗೆ ಏಳು ವರ್ಷವಾದರೂ ಒಂದು ಮನೆಯೂ ಸಹ ಕೊಟ್ಟಿಲ್ಲ ಅಂತಹ ಸರ್ಕಾರ ಇದು ಅಭಿವೃದ್ಧಿ ಎಲ್ಲಿಂದ ಮಾಡಲು ಸಾಧ್ಯ ಯಾವುದೇ ಅನುದಾನವನ್ನು ನಮ್ಮ ತಾಲೂಕಿಗೆ ಕೊಡದೆ ಇದ್ದರೆ ತಾಲೂಕು ಅಭಿವೃದ್ಧಿ ಹೇಗೆ ಕಾಣುತ್ತದೆ ಎಂದು ಆಕ್ರೋಶ ಹೊರ ಹಾಕಿದರು.
ಇದೆ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡರುಗಳಾದ ರಂಗನಾಥ್ ಪೈಂಟರ್, ಪ್ರಕಾಶ್ , ಆಕಾಶ್, ಮೂರ್ತಿ ,ಅಪ್ಪು, ಗಗನ್ ,ಹೃತಿಕ್ ಗೌಡ ,ಸಾಗರ್ ಗೌಡ ,ಪವನ್, ಮಣಿಕಂಠ, ದರ್ಶನ್, ಹೀಗೆ ನೂರಾರು ವಿದ್ಯಾರ್ಥಿಗಳು ಸಂವಾದ ಸಭೆಯಲ್ಲಿ ಪಾಲ್ಗೊಂಡಿದ್ದರು

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.


 

Document

Leave a Reply

Your email address will not be published. Required fields are marked *