JANATAA24 NEWS DESK
Turuvekere: ಚೀನಾದ ಬೀಜಿಂಗ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಕನ್ನಡಿಗ ಅಭಿಷೇಕ್ ಎಚ್.

ತುರುವೇಕೆರೆ: ಮಾಯಸಂದ್ರ ಹೋಬಳಿ ಟಿ ಬಿ ಕ್ರಾಸ್ ನಲ್ಲಿರುವ ಎಸ್ಬಿಜಿ ಹಿರಿಯ ವಿದ್ಯಾರ್ಥಿ ಅಭಿಷೇಕ್ ಹೆಚ್ ರವರು ಜೂನಿಯರ್ ಏಷ್ಯನ್ 19ನೇ ವಿಭಾಗದ ಹ್ಯಾಂಡ್ ಬಾಲ್ ಕ್ರೀಡೆಯಲ್ಲಿ ಕರ್ನಾಟಕದಿಂದ ಏಕೈಕ ವಿದ್ಯಾರ್ಥಿ ಅಭಿಷೇಕ್ ಎಚ್ ಭಾರತ ತಂಡವನ್ನು ಪ್ರತಿನಿಧಿಸಿ ಹಿಂತಿರುಗಿದ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಶಾಖ ಮಠವಾದ ಎಸ್ ಬಿ ಜಿ ವಿದ್ಯಾಲಯದ ಸಾವಿರಾರು ವಿದ್ಯಾರ್ಥಿಗಳು ಶಾಖ ಮಠದ ಪೂಜ್ಯರು ಶಾಲಾ ಕಾಲೇಜುಗಳ ಪ್ರಾಂಶುಪಾಲರು ತರಬೇತಿದಾರರು ಸಹ ಶಿಕ್ಷಕರ ತಂಡ ಅಭಿಷೇಕ್ ರವರಿಗೆ ಅತ್ಯದ್ಭುತ ಭವ್ಯ ಸ್ವಾಗತವನ್ನು ಕೋರಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಅಭಿಷೇಕ್ ರವರು ತನ್ನ ಹುಟ್ಟೂರಾದ ಹಾಸನದಲ್ಲಿ ಒಂದನೇ ತರಗತಿಯಿಂದ 5ನೇ ತರಗತಿಯವರಿಗೆ ವ್ಯಾಸಂಗ ಮುಗಿಸಿ ತದನಂತರ ಐದನೇ ತರಗತಿಯಿಂದ ಎರಡನೇ ಪಿಯುಸಿ ಅವರಿಗೂ ಎಸ್ ಬಿಜಿ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಹ್ಯಾಂಡ್ ಬಾಲ್ ಕ್ರೀಡೆಯಲ್ಲಿ ತೊಡಗಿಸಿಕೊಂಡು ಚೀನಾದ ಬೀಜಿಂಗ್ ನಲ್ಲಿ ನಡೆದ ಏಶಿಯನ್ ಜೂನಿಯರ್ 19ನೇ ವಿಭಾಗದ ಹ್ಯಾಂಡ್ ಬಾಲ್ ಕ್ರೀಡೆಯಲ್ಲಿ ಭಾರತ ತಂಡವನ್ನು ಕರ್ನಾಟಕ ರಾಜ್ಯದಿಂದ ಏಕೈಕ ಕನ್ನಡಿಗನಾಗಿ ಪ್ರತಿನಿಧಿಸಿ ಹಿಂತಿರುಗಿದ್ದು ಆತನಿಗೆ ಭವ್ಯ ಸ್ವಾಗತವೇ ದೊರೆತಿದ್ದು ಇದೆ ವೇಳೆ ಶಾಖಾಮಠದ ಶ್ರೀಗಳು ಮತ್ತು ಪ್ರಾಂಶುಪಾಲರು ಉಪನ್ಯಾಸಕರು ಶಿಕ್ಷಕರು ಬೋಧ ಕೇತರ ವರ್ಗದ ಸಿಬ್ಬಂದಿಗಳು ಸೇರಿ ಅಭಿಷೇಕ್ ರವರಿಗೆ ಶಾಲು ಹೊದಿಸಿ ಹೂ ಮಾಲೆ ಹಾಕಿ ಅಭಿನಂದಿಸಿದರು.
ಸುಮಾರು 10 ವರ್ಷದ ಹಿಂದೆ ಈತನ ತಂದೆ ಕಾಲವಾದ ನಂತರ ತಾಯಿಯಾದ ಲಕ್ಷ್ಮಿ ರವರು ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಈತನ ಉತ್ತಮವಾದ ಶಿಕ್ಷಣಕ್ಕಾಗಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿ ಕೊನೆಗೂ ಈತ ಭಾರತ ತಂಡವನ್ನು ಪ್ರತಿನಿಧಿಸಿದ ಸಂದರ್ಭದಲ್ಲಿ ತಾಯಿಗೆ ಎಲ್ಲಿಲ್ಲದ ಸಂತಸ ಮನೆ ಮಾಡಿದೆ, ಇದೇ ಅಭಿಷೇಕ್ ಈಗ ಉಜಿರೆಯಲ್ಲಿ ಬಿಬಿಎ ವಿದ್ಯಾಭ್ಯಾಸ ಮಾಡುತ್ತಿದ್ದು ಮಾಧ್ಯಮದೊಂದಿಗೆ ಮಾತನಾಡಿದ ಅಭಿಷೇಕ್ ನನ್ನ ಈ ಸಾಧನೆಗೆ ಮಠದ ಶ್ರೀಗಳಾದ ನಿರ್ಮಲಾನಂದನಾಥ ಮಹಾಸ್ವಾಮೀಜಿ, ಪ್ರಸನ್ನನಾಥ ಸ್ವಾಮೀಜಿ ಇವರುಗಳ ಆಶೀರ್ವಾದದಿಂದ ಜೊತೆಗೆ ಉತ್ತಮವಾದ ತರಬೇತಿ ನೀಡಿ ನನ್ನನ್ನು ಭಾರತ ತಂಡದಲ್ಲಿ ಪ್ರತಿನಿಧಿಸುವಂತೆ ಎಸ್ ಬಿ ಜಿ ಶಾಲಾ ಕಾಲೇಜುಗಳ ಪ್ರಾಂಶುಪಾಲರು ಬೋಧಕೇತರ ಶಿಕ್ಷಕರು ಸಹ ಶಿಕ್ಷಕರ ಪ್ರೇರೇಪಣೆ,
ಜೀವನ ಮೌಲ್ಯಗಳು ಸ್ಪೂರ್ತಿಗೆ ಶಕ್ತಿಯಾಗಿದ್ದು ನನಗೆ ಸಹಕಾರಿಯಾಗಿ ಈ ಉನ್ನತ ಮಟ್ಟದಲ್ಲಿ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದಂತಾಗಿದೆ ಬಾಲ್ಯದಿಂದಲೇ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು ತದನಂತರ ಹ್ಯಾಂಡ್ ಬಾಲ್ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿಯಿಂದಾಗಿ ಈ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದು ಭಾರತ ತಂಡ ಪ್ರತಿನಿಧಿಸಲು ನನಗೆ ಸಿಕ್ಕಂತ ಸುವರ್ಣ ಅವಕಾಶ ಇದಾಗಿದೆ ಮುಂದಿನ ದಿನಗಳಲ್ಲಿ ನನ್ನ ಮುಂದಿನ ಭವಿಷ್ಯಕ್ಕಾಗಿ ಸ್ಪೋರ್ಟ್ಸ್ ಕೋಟದಲ್ಲಿ ಸರ್ಕಾರದಿಂದ ಅವಕಾಶ ಸಿಕ್ಕರೆ ಕಾರ್ಯ ನಿರ್ವಹಿಸುತ್ತೇನೆ ಈ ಸಾಧನೆಗೆ ಬೆಂಬಲವಾಗಿ ನಿಂತ ನನ್ನ ತಾಯಿ ಹಾಗೂ ಶಾಖ ಮಠದ ಪೂಜ್ಯರು ಎಸ್ ಬಿಜಿ ಶಾಲಾ ಕಾಲೇಜುಗಳ ಪ್ರಾಂಶುಪಾಲರು ತರಬೇತುದಾರರು ಮುಖ್ಯ ಶಿಕ್ಷಕರು ಉಪನ್ಯಾಸಕರು ಸಹ ಶಿಕ್ಷಕರು ಬೋಧಕೇತರ ವರ್ಗದ ಸಿಬ್ಬಂದಿಗಳು ಇವರೆಲ್ಲರಿಗೂ ಪತ್ರಿಕಾ ಮಾಧ್ಯಮದ ಮೂಲಕ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
https://www.janataa24.com/operation-sindor-pok-9-terrorist/