JANATAA24 NEWS DESK
Gubbi: ಶೀಘ್ರದಲ್ಲಿ ಗ್ರಾ,ಪಂ ಚುನಾವಣೆ–ಶಾಸಕ ಎಸ್ ಆರ್ ಶ್ರೀನಿವಾಸ್.

ಗುಬ್ಬಿ: ಸರ್ಕಾರ ಗ್ರಾಮ ಪಂಚಾಯತಿ ಚುನಾವಣೆಗಳನ್ನು ಶೀಘ್ರವಾಗಿ ನಡೆಸಲಿದೆ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಕೋಡಿನಾಗೇನಹಳ್ಳಿ ಅದಲಗೆರೆ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು
ರಾಜ್ಯ ಸರ್ಕಾರವು ಗ್ರಾ, ಪಂ ಚುನಾವಣೆಗಳನ್ನು ನಡೆಸಲು ಪೂರ್ವ ಸಿದ್ಧತೆ ನಡೆಸಿದ್ದು ಶೀಘ್ರದಲ್ಲಿ ಚುನಾವಣೆಗಳು ನಡೆಯಲಿವೆ ಹಾಗೂ ಮೀಸಲಾತಿಯಲ್ಲಿ ಯಾವುದೇರೀತಿಯ ನೋಟಿಫಿಕೇಶನ್ ಬದಲಾವಣೆಯಾಗುವುದಿಲ್ಲ. ಇನ್ನೂ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಿದ್ದು ಗುಬ್ಬಿಯಲ್ಲಿ 125 ಕೋಟಿ ವೆಚ್ಚದಲ್ಲಿ ರೀಸಿವಿಂಗ್ ಸೆಂಟರ್ ತೆರೆಯಲಾಗುತ್ತಿದೆ. ಹಾಗೂ 9 ವಿದ್ಯುತ್ ಉಪಸ್ಥಾವರ ಘಟಕಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದಅವರು ಇನ್ನು ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಲು ಪ್ರತಿಯೊಬ್ಬರಿಗೂ ಸಂವಿಧಾನಬದ್ಧ ಹಕ್ಕು ಇದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುವುದರಿಂದ ಉತ್ತರ ಭಾರತದವರಿಗೆ ಅನುಕೂಲವಾಗುತ್ತದೆ. ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತದೆ. ಸರ್ಕಾರವು ಪಾರದರ್ಶಕವಾಗಿ ಪರೀಕ್ಷೆಗಳನ್ನು ನಡೆಸಬೇಕು ಇದರಿಂದ ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಅದಲಗೆರೆ ಈಶ್ವರಯ್ಯ, ವಿದ್ಯಾಧರ, ನಾಗೇಂದ್ರ, ಮಹಾದೆವಯ್ಯ, ರಂಗಸ್ವಾಮಿ, ರತ್ನಮ್ಮ, ಭಾಸ್ಕರ್, ಹನುಮಂತಯ್ಯ ಗ್ರಾಮಸ್ಥರು ಹಾಜರಿದ್ದರು.
ವರದಿ :ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
https://www.janataa24.com/operation-sindor-pok-9-terrorist/