Janataa24 NEWS DESK
Turuvekere : ಚುನಾವಣೆ ನೀತಿ ಸಂಹಿತೆ ಹೊತ್ತಲ್ಲಿ ರಾತ್ರಿ ಹತ್ತಾದರು ತಾ.ಪಂ ಕಛೇರಿ ಓಪನ್…!

ತುರುವೇಕೆರೆ : ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿರುವ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ರಾತ್ರಿ ಸಮಯ 10 ಗಂಟೆಯಾದರೂ ಇನ್ನೂ ಕಚೇರಿ ಓಪನ್ ಆಗಿರುವುದು, ಸಾರ್ವಜನಿಕರಲ್ಲಿ ಕೆಲವು ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದೆ.
ಇನ್ನೂ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದರೂ ಕೂಡ ಸರ್ಕಾರಿ ಕಚೇರಿ(Govt Office)ಯಲ್ಲಿ ರಾತ್ರಿ ಸಮಯ 10 ಗಂಟೆಯಾದರೂ ಕೆಲಸ ಕಾರ್ಯನಿರ್ವಹಿಸುತ್ತಾರ ಅಥವಾ ಯಾವುದಾದರೂ ಗೋಲ್ಮಾಲ್ ಮಾಡುವ ವಿಧಾನ ಏನಾದರೂ ಕಂಡುಕೊಂಡಿದ್ದಾರಾ?,
ತಾಲೂಕು ಪಂಚಾಯಿತಿ ಅಧಿಕಾರಿಗಳು ಇದಕ್ಕೆ ಸಂಬಂಧಪಟ್ಟ ತಾಲೂಕು ಪಂಚಾಯಿತಿ ಮುಖ್ಯ ಅಧಿಕಾರಿ ಶಿವರಾಜಯ್ಯ (Shivaramaiah)ಅವರೇ ಕುಮ್ಮಕ್ಕು ಕೊಡುತ್ತಿದ್ದಾರಾ, ಇದರ ಅರ್ಥ ಏನು ಎಂಬುದು ಯಾರಿಗೂ ತಿಳಿಯುತ್ತಿಲ್ಲ,
ಹಾಗಾದರೆ ರಾತ್ರಿ ಸಮಯ 10 ಗಂಟೆಯಾದರೂ ತಾಲೂಕು ಕಚೇರಿ ಯಾತಕ್ಕಾಗಿ ಓಪನ್ ಆಗಿದೆ, ಇದರ ಗೌಪ್ಯತೆ ಏನು, ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯನ್ನು ಇವರು ಗಾಳಿಗೆ ತೂರಿತಿದ್ದಾರ? ಇದಕ್ಕೆ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳು ಇದಕ್ಕೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು, ಅಥವಾ ಇಷ್ಟು ಗಂಟೆಯಾದರೂ ಸಹ ತಾಲೂಕು ಪಂಚಾಯಿತಿ ಕಚೇರಿ ತೆರೆದಿದೆ ಅಂದರೆ ಚುನಾವಣಾ ಅಧಿಕಾರಿಗಳು ಯಾವ ಮಟ್ಟಕ್ಕೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದೇ ಪ್ರಶ್ನಾರ್ಥಕ ವಾಗಿ ಉಳಿದಿದೆ.
ವರದಿ: ಮಂಜುನಾಥ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
ACB: ಲಂಚದ ಆರೋಪ-ರೇಷ್ಮೆ ಇಲಾಖೆ ಅಧಿಕಾರಿಗೆ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ