Document

Turuvekere: ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಅಜ್ಜನಳ್ಳಿಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಅದ್ದೂರಿ ಕಾರ್ಯಕ್ರಮ

JANATAA24 NEWS DESK

 

Turuvekere: ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಅಜ್ಜನಳ್ಳಿಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಅದ್ದೂರಿ ಕಾರ್ಯಕ್ರಮ

ಇಂದು ತುರುವೇಕೆರೆ ತಾಲೂಕಿನ ಅಜ್ಜನಹಳ್ಳಿಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ಮತ್ತು ಸಾರ್ವಜನಿಕರ ಮತ್ತು ರೈತರ ಸಮ್ಮುಖದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು ಈ ಕಾರ್ಯಕ್ರಮದ ಉದ್ಘಾಟನೆಯನ್ನು ತಿಪಟೂರು ವಿಭಾಗದ ಉಪವಿಬಾಧಿಕಾರಿ ಶ್ರೀಮತಿ ಕಲ್ಪಶ್ರೀ ತಾಲೂಕಿನ ಶಾಸಕರಾದ ಮಸಾಲ ಜಯರಾಮ್ ತಾಲೂಕು ಮುಖ್ಯ ಕಾರ್ಯಾ ನಿರ್ವಹಣಾ ಅಧಿಕಾರಿ ಸತೀಶ್ ಹಾಗೂ ತಾಲೂಕು ತಹಸೀಲ್ದಾರ್ ರೇಣು ಕುಮಾರ್ ಅವರು ಉದ್ಘಾಟನೆಯನ್ನು ನೆರೆವೇರಿಸಿದರು.

 

 

 

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ತಿಪಟೂರು ವಿಭಾಗ ಉಪವಿಬಾಧಿಕಾರಿ ಶ್ರೀಮತಿ ಕಲ್ಪ ಶ್ರೀ ಇತಿಹಾಸದಲ್ಲೇ ವಿಶೇಷ ಕಾರ್ಯಕ್ರಮ ಇದಾಗಿದ್ದು ಎಲ್ಲಾ ಅಧಿಕಾರಿಗಳು ಈ ಅಜ್ಜನಳ್ಳಿಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಸುತ್ತಿರುವುದು ಸಾರ್ವಜನಿಕರನ್ನು ಮತ್ತು ರೈತರಲ್ಲೂ ಸಂತೋಷ ವ್ಯಕ್ತವಾಗಿದೆ. ಈ ಕಾರ್ಯಕ್ರಮದಿಂದ ಹಳ್ಳಿಯ ಸಮಸ್ಯೆಗಳನ್ನು ಜೊತೆ ಅಹವಾಲುಗಳನ್ನು ಕೇಳಿ ಸಮಸ್ಯೆಗೆ ಪರಿಹಾರ ಸ್ಥಳದಲ್ಲೇ ಬಗೆಹರಿಸಲು ಈ ಕಾರ್ಯಕ್ರಮದ ಉದ್ದೇಶ ಜೊತೆಗೆ ನಿಜವಾದ ಫಲಾನುಭವಿಗಳಿಗೆ ಯಾವುದೇ ತಕರಾರ್ ಇಲ್ಲದೆ ನೇರವಾಗಿ ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲು ಈ ಕಾರ್ಯಕ್ರಮ ಬಹಳ ಅತ್ಯಮೂಲ್ಯ ದಯಮಾಡಿ ರೈತರಿಗೆ ಹೇಳುವುದು ಒಂದೇ ನಿಮ್ಮ ಮಕ್ಕಳಿಗೆ ಶಿಕ್ಷಣ ವನ್ನು ಕೊಡಿಸಿ ಆಗ ತಾನೇ ನಿಮಗೆ ಯಾರು ಕೂಡ ಮೋಸ ಮಾಡಲು ಸಾಧ್ಯವಿಲ್ಲ

 

 

ಜೊತೆಗೆ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳುವುದು ಬಹಳ ಮುಖ್ಯ ಆದುದರಿಂದ ಸರ್ಕಾರದಿಂದ ಸಾರ್ವಜನಿಕ ಆಸ್ಪತ್ರೆಯಲ್ಲಾಗಲಿ ಯಾವುದೇ ಸರಕಾರಿ ಕಚೇರಿಗಳ ಅಧಿಕಾರಿಗಳಿಂದಾಗಲಿ ಯಾವುದೇ ತರಹದ ತೊಂದರೆ ಆಗದಂತೆ ನಿಮ್ಮಗಳ ಸಮಸ್ಯೆಗೆ ಪರಿಹಾರ ಕೊಡಿಸಲು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದ್ದು ದಯಮಾಡಿ ಇದನ್ನು ಎಲ್ಲರೂ ಕೂಡ ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು ಇನ್ನು ಇದೇ ಸಂದರ್ಭದಲ್ಲಿ ಶಾಸಕ ಮಸಾಲ ಜಯರಾಮ್ ಸರ್ಕಾರಿ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಈ ಭಾಗದ ಎಲ್ಲಾ ರೈತರಿಗೆ ಸರ್ಕಾರದ ಎಲ್ಲಾ ಇಲಾಖೆಗಳು ಹಾಜರಿದ್ದು ರೈತರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಅದಕ್ಕೆ ಸಂಬಂಧಪಟ್ಟಂತೆ ಪರಿಹಾರ ಕೊಡಬೇಕು. ಇನ್ನೇನು ಕೆಲವೇ ದಿನಗಳಲ್ಲಿ 16 1/2 ಕೋಟಿ ವೆಚ್ಚದಲ್ಲಿ ಈ ಭಾಗದಲ್ಲಿ ವಿದ್ಯುತ್ ಪವರ್ ಸ್ಟೇಷನ್ ಕೂಡ ಸ್ಥಾಪನೆ ಆಗಲಿದೆ ಇನ್ನು ಮುಂದೆ ರೈತರಿಗೆ ಯಾವುದೇ ತರಹದ ಕರೆಂಟ್ ಸಮಸ್ಯೆ ಆಗಲಿ ಬರುವುದಿಲ್ಲ ಎಂದು ಹೇಳಿದರು ಹಾಗೂ ಇದೇ ವೇದಿಕೆಯಲ್ಲಿ ಮೂರು ಜನ ಮುತ್ತೈದೆಯರಿಗೆ ಸೀಮಂತ ಕಾರ್ಯವು ಕೂಡ ತಿಪಟೂರು ಉಪ ವಿಭಾಗಾಧಿಕಾರಿ ಕಲ್ಪಶ್ರೀ ಅವರ ಸಮ್ಮುಖದಲ್ಲಿ ನಡೆಯಿತು.

 

 

 

ಈ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ಯಾಮಲ ಪಂಚಾಯತಿ ಸದಸ್ಯ ಯಶೋಧರ ಬೆಸ್ಕಾಂ ಏ ಡಬಲ್ ಇ ಚಂದ್ರನಾಯಕ್ ಬಿಇಒ ಪದ್ಮನಾಭ ಜೊತೆಗೆ ಪಂಚಾಯಿತಿಯ ಎಲ್ಲಾ ಸದಸ್ಯರುಗಳು ಜೊತೆಗೆ ಸಂಖ್ಯೆಯಲ್ಲಿ ರೈತರು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv   https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en     https://youtube.com/@janataa24?si=XsFcych2GMH0O6Gv     https://www.janataa24.com/turuvekere-protesting-against-stone-mining/   https://www.janataa24.com/iasipskas-who-stood-as-the-godfather-of-the/     https://www.janataa24.com/miscreants-uprooted-40-coconut-trees-turuvekere/   https://youtu.be/ioBwxkXfLqo?si=i1AACfgQuqhFUQV0   https://www.janataa24.com/operation-sindor-pok-9-terrorist/  

Document

Leave a Reply

Your email address will not be published. Required fields are marked *