Janataa24 NEWS DESK
Turuvekere: ತುರುವೇಕೆರೆಯಲ್ಲಿ ಡಾ.ಬಾಬು ಜಗಜೀವನ್ ರಾಮ್ ರವರ 117ನೇ ಜನ್ಮ ದಿನಾಚರಣೆ .

ತುರುವೇಕೆರೆ : ಪಟ್ಟಣದಲ್ಲಿರುವ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ, ಹಸಿರುಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ, ಭಾರತದ ಮಾಜಿ ಉಪ ಪ್ರಧಾನ ಮಂತ್ರಿಗಳಾದ “ಡಾ|| ಬಾಬು ಜಗಜೀವನ ರಾಂ ರವರ 117ನೇ ಜನ್ಮ ದಿನಾಚರಣೆ”
ಕಾರ್ಯಕ್ರಮವನ್ನು ಸಾರ್ವತ್ರಿಕ ಲೋಕಸಭಾ ಚುನಾವಣಿ-2024ರ ಪ್ರಯುಕ್ತ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಾಂಕೇತಿಕವಾಗಿ ತಹಶೀಲ್ದಾರ್ ವೈ ಎಮ್ ರೇಣುಕುಮಾರ್(Renukumar) ರವರ ಉಪಸ್ಥಿತಿಯಲ್ಲಿ, ತಾಲೂಕು ಕಚೇರಿ ತುರುವೇಕೆರೆ ಇಲ್ಲಿ ಡಾ|| ಬಾಬು ಜಗಜೀವನ ರಾಂ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ, ಎಲ್ಲಾ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮುಖಂಡರುಗಳು, ಸರ್ಕಾರಿ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಇನ್ನು ಇದೇ ವೇಳೆ ಪಟ್ಟಣದ ಹೃದಯ ಭಾಗದಲ್ಲಿರುವ ಅಂಬೇಡ್ಕರ್ ಭವನದಲ್ಲಿ, ದಲಿತ ಮುಖಂಡರುಗಳಾದ ದಂಡಿನಶಿವರ ಕುಮಾರ್, ಮಲ್ಲೂರು ತಿಮ್ಮೇಶ್, ಬೋರಪ್ಪ, ಬಿಗಿನೇಹಳ್ಳಿ ಪುಟ್ಟರಾಜು, ಇನ್ನು ಅನೇಕ ಮುಖಂಡರುಗಳು ಬಾಬು ಜಗಜೀವನ್ ರಾಂ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸರಳವಾಗಿ 117 ನೇ ಜನ್ಮದಿನಾಚರಣೆಯನ್ನು ಆಚರಿಸಿದರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
Bagalakote : ಕಾಂಗ್ರೆಸ್ ಆಕಾಂಕ್ಷಿ ವೀಣಾ ಕಾಶಪ್ಪನವರ ಸೈಲೆಂಟ್ ಹಿಂದಿನ ಮರ್ಮವೇನು..?
,