Janataa24 NEWS DESK
ಚರಂಡಿ ಅವ್ಯವಸ್ಥೆಯಿಂದ ಎಸ್‌ಸಿ ಕಾಲೋನಿ ಗಿಲ್ಲ ಮುಕ್ತಿ.
ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿಗೆ ಛೀಮಾರಿ ಹಾಕಿದ ಬೀಚನಹಳ್ಳಿ ಎಸ್‌ಸಿ ಕಾಲೋನಿ ಜನತೆ.
ತುರುವೇಕೆರೆ: ತಾಲೂಕಿನ ದಂಡಿನ ಶಿವರ ಹೋಬಳಿ ಹುಲ್ಲೇಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬೀಚನಹಳ್ಳಿ ಎಸ್‌ಸಿ ಕಾಲೋನಿಯಲ್ಲಿ ಸುಮಾರು ತಿಂಗಳಿನಿಂದ ಚರಂಡಿ ಸ್ವಚ್ಛತೆ ಮಾಡದೆ, ಕೊಳಚೆ ನೀರು ತುಂಬಿ ಕ್ರಿಮಿ ಕೀಟಗಳು ಹೆಚ್ಚಾಗಿ ಅಲ್ಲಿ ವಾಸ ಮಾಡುವ ಜನರು ಮತ್ತು ಮಕ್ಕಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸ್ಥಿತಿ ಬಂದಿದೆ.

ಚರಂಡಿ ಸ್ವಚ್ಛತೆ ಬಗ್ಗೆ ಈಗಾಗಲೇ 8 ತಿಂಗಳುಗಳಿಂದಲೂ ಇದಕ್ಕೆ ಸಂಬಂಧಪಟ್ಟ ಹುಲ್ಲೇಕೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೇಮಂತ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವರಾಜಯ್ಯ ಅವರಿಗೂ ಸಹ ಇದರ ಬಗ್ಗೆ ಕಾಲೋನಿಯ ಜನತೆ ದೂರು ನೀಡಿದ್ದಾರೆ ಆದರೂ ಏನು ಪ್ರಯೋಜನವಾಗಿಲ್ಲ.
ಇದರ ವಿಚಾರವಾಗಿ ಎಸ್ ಸಿ ಕಾಲೋನಿಯ ಗ್ರಾಮಸ್ಥರು ಒಂದು ವರ್ಷದ ಹಿಂದೆ ಅಷ್ಟೇ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಲಾಗಿ ಅಲ್ಲೂ ಸಹ ಗ್ರಾಮಸ್ಥರುಗಳಿಗೆ ಪಿಡಿಓ ಹೇಮಂತ್ ಅವರು ಕಣ್ಣೊರೆಸುವ ಕೆಲಸ ಮಾಡಿ ಅಲ್ಲಿಂದ ಗ್ರಾಮಸ್ಥರನ್ನು ಸಾಗು ಹಾಕಿದ್ದಾರೆ, ಎಂಬ ಮಾತು ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.
ಹಾಗಾದರೆ ಈ ಕಾಲೋನಿಯ ಅವ್ಯವಸ್ಥೆಯ ಬಗ್ಗೆ ಅಧಿಕಾರಿಗಳಿಗೆ ಗ್ರಾಮಸ್ಥರು ಹಾಕುತ್ತಿರುವ ಶಾಪ ತಟ್ಟುತ್ತದೆಯೇ? ಇಲ್ಲ ಅಧಿಕಾರಿಗಳ ಈ ಬೇಜವಾಬ್ದಾರಿತನ ಗೆಲ್ಲುತ್ತಾ ನೋಡಬೇಕಾಗಿದೆ.
ಇನ್ನು ಇದಕ್ಕೆ ಸಂಬಂಧಪಟ್ಟಂತೆ ಇದೇ ಕಾಲೋನಿಯ ಜನಪ್ರತಿನಿಧಿಯಂತೂ ಕ್ಯಾರೆ ಎನ್ನದೆ , ಇತ್ತ ಕಡೆ ತಿರುಗಿಯೂ ನೋಡಿಲ್ಲ, ಇದನ್ನು ಸರಿಪಡಿಸುವ ಹೊಣೆ ಯಾರ ಮೇಲಿದೆ, ಅಧಿಕಾರಿಗಳ ಚಲ್ಲಾಟಕ್ಕೆ ಎಸ್ ಸಿ ಕಾಲೋನಿಯ ಜನತೆ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿದ್ದಾರ.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
https://www.facebook.com/profile.php?id=100064024327906&mibextid=ZbWKwL
https://www.janataa24.com/turuvekere-sbg-schools-new-mothers-dinner-program/