Document

Tumkur: KSRTC ಬಸ್ ಮತ್ತು ಕಾರಿನ ನಡುವೆ ಬೀಕರ ರಸ್ತೆ ಅಪಘಾತ.

Janataa24 NEWS DESK

Tumkur: KSRTC ಬಸ್ ಮತ್ತು ಕಾರಿನ ನಡುವೆ ಬೀಕರ ರಸ್ತೆ ಅಪಘಾತ.

 

 

ಜೋಡುಗೆಟ್ಟೆ ಸಮೀಪ ಭೀಕರ ರಸ್ತೆ ಅಪಘಾತ, ಇನ್ನೋವಾ ಕಾರು ಮತ್ತು KSRTC ಬಸ್ ಡಿಕ್ಕಿ.
Tumkur,ksrtc,accident

 

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ ವ್ಯಾಪ್ತಿಗೆ ಬರುವ ಜೋಡುಗಟ್ಟೆ ಗ್ರಾಮದ ಬಳಿ ಹಾದು ಹೋಗಿರುವ 150 ಎ ಪಾಂಡವಪುರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಸರಿಸುಮಾರು ಮಧ್ಯಾನ 1:00 ಗಂಟೆ ಸಮಯದಲ್ಲಿ ತುರುವೇಕೆರೆ ಕಡೆಯಿಂದ ಮೈಸೂರಿನ ಕಡೆಗೆ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಮತ್ತು ಮೈಸೂರಿನಿಂದ ತಿಪಟೂರಿನ ಕಡೆಗೆ ಸಾಗುತ್ತಿದ್ದ ಇನ್ನೊವಾ ಕಾರ್ ಮುಖಾಮುಖಿ ಡಿಕ್ಕಿ ಆದ ಪರಿಣಾಮ ಎರಡು ವಾಹನಗಳು ಜಕಮ್ ಆಗಿದ್ದು,

ಇನ್ನೋವಾ ಕಾರಿನಲ್ಲಿ ಮೈಸೂರಿನ ಕಡೆಗೆ ಸುಮಾರು ಎಂಟು ಜನರು ಇದ್ದರು ಎಂದು ತಿಳಿದು ಬಂದಿದ್ದು ಇಬ್ಬರಿಗೆ ಬಸ್ ಗುದ್ದಿರುವ ಪರಿಣಾಮ ಹೆಚ್ಚು ರಕ್ತಸ್ರಾವದ ಕಾರಣ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ.

 

ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳದಲ್ಲಿ ಯಾವುದೇ ಪ್ರಾಣಾಪಾಯ ಇಲ್ಲ, ಅಪಘಾತ ನಡೆದ ಸ್ಥಳದಲ್ಲಿ ಸಾರ್ವಜನಿಕರು ಕೆಲ ಸಮಯ ರಸ್ತೆಗೆ ಅಡ್ಡಲಾಗಿ ನಿಂತು ಇದಕ್ಕೆ ಸಂಬಂಧಪಟ್ಟ ಕೆಎಸ್ಆರ್‌ಟಿಸಿ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಬೇಕೆಂದು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/bengaluru-action-to-solve-parking-parameshwar/

Document

Leave a Reply

Your email address will not be published. Required fields are marked *