Janataa24 NEWS DESK
Tumkur : ಭರ್ಜರಿ ರೋಡ್ ಶೋ ಮೂಲಕ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ ಮುದ್ದಹನುಮೇಗೌಡ

ತುಮಕೂರು : ನೆನ್ನೆ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಮಾಜಿ ಮುಖ್ಯಮಂತ್ರಿಗಳು ಹಾಗೂ ಮೈತ್ರಿ ಕಾರ್ಯಕರ್ತರೊಂದಿಗೆ ಬೃಹತ್ ರೋಡ್ ಶೋ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿ ವಿರೋಧ ಪಕ್ಷಗಳಿಗೆ ತಮ್ಮ ಶಕ್ತಿ ಸಂದೇಶ ರವಾನಿಸಿದ್ದರು.
ರಾಜ್ಯದಲ್ಲಿ ಪ್ರತಿಷ್ಠಿತ ಕ್ಷೇತ್ರದಲ್ಲಿ ಒಂದಾದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಂಡು ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಶಕ್ತಿ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ.
ಇಂದು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಂಸದ ಎಸ್ ಪಿ ಮುದ್ದಹನುಮೇಗೌಡ ಅವರು ತಮ್ಮ ಶಕ್ತಿ ಪ್ರದರ್ಶನದ ಮೂಲಕ ಜಿಲ್ಲಾಧಿಕಾರಿ ಕಛೇರಿಗೆ ತಮ್ಮ ಪಕ್ಷದ ಸಚಿವರು ಗಣ್ಯರು ಹಿರಿಯರು ಹಾಗೂ ಕಾರ್ಯಕರ್ತರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ರೋಡ್ ಶೋ ಉದ್ದಗಲಕ್ಕೂ ಗೃಹ ಸಚಿವ ಪರಮೇಶ್ವರ್ ಹಾಗೂ ಸಹಕಾರ ಸಚಿವ ಕೆಎನ್ ರಾಜಣ್ಣ ಹಾಗೂ ಮಾಜಿ ಸಚಿವ ಹಾಲಿ ಶಾಸಕ ಗುಬ್ಬಿ ಶ್ರೀನಿವಾಸ್ (Gubbi Srinivas) ಅವರು ಸಾಥ್ ನೀಡಿದರು.
ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಗಾರುಡಿ ಗೊಂಬೆ ಕುಣಿತ, ನಾಸಿಕ್ ಡೋಲ್, ವೀರಗಾಸೆ ನೃತ್ಯ ಪ್ರದರ್ಶನ. ಕಲಾತಂಡಗಳು, ಸಾಂಸ್ಕ್ರತಿಕ ತಂಡಗಳು ಮೆರವಣಿಗೆಯಲ್ಲಿ ವಿಶಿಷ್ಟ ಗಮನ ಸಳೆದೆವು. ವಿಶೇಷವಾಗಿ ತುಮಕೂರು ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಮುದ್ದಹನುಮೇಗೌಡ ಅವರು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಬರುವ ಮೂಲಕ ಹಾಗೂ ನಾಮಪತ್ರ ಸಲ್ಲಿಸುವ ವೇಳೆ ಅವರು ಹೆಗಲ ಮೇಲೆ ಇದ್ದ ಹಸಿರು ಶಾಲು ರೈತಪರ ಅಭಿಮಾನಕ್ಕೆ ಸಾಕ್ಷಿಯಾಗಿತು.
ಕಳೆದ ಬಾರಿ ಮೈತ್ರಿ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಮುದ್ದಹನುಮೇಗೌಡ ಟಿಕೆಟ್ ಬಯಸಿದ್ದರು ಆದರೇ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಾದ ಕಾರಣ ತುಮಕೂರು ಕ್ಷೇತ್ರ ಜೆಡಿಎಸ್ ಪಾಲಾಗಿ ಟಿಕೆಟ್ ಕೈ ತಪ್ಪಿತು. ಟಿಕೆಟ್ ತಪ್ಪಿದ ಕಾರಣ ಪಕ್ಷದ ಚಟುವಟಿಕೆಗಳಿಂದ ಹಿಂದೆ ಸರಿದು ಕೊನೆಗೆ ಬಿಜೆಪಿ ಸೇರಿದರು.
ಬಿಜೆಪಿ ಸೇರಿ ಅದೇ ಪಕ್ಷದಲ್ಲಿ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕುಣಿಗಲ್ ಕ್ಷೇತ್ರದಿಂದ ಟಿಕೆಟ್ ಬಯಸಿದರು ಆದರೇ ಹೈಕಮಾಂಡ್ ಅಲ್ಲಿಯೂ ಟಿಕೆಟ್ ನೀಡದೇ ಬಿಜೆಪಿ ವಂಚಿಸಿತು.ಇದರಿಂದ ಬೇಸತ್ತು ಮತ್ತೆ ಮರಳಿ ಗೂಡು ಸೇರುವ ಪ್ಲಾನ್ ಮಾಡಿ ಕಾಂಗ್ರೆಸ್ ಸೇರಿ ಇಲ್ಲಿ ಸ್ಥಳೀಯ ಕಾಂಗ್ರೆಸ್ ಕಟ್ಟಾಳುಗಳಾದ ಮಾಜಿ ಡಿಸಿಎಂ ಹಾಲಿ ಗೃಹ ಸಚಿವ ಪರಮೇಶ್ವರ ಹಾಗೂ ಸಚಿವ ಕೆ.ಎನ್ ರಾಜಣ್ಣ ಮಾಜಿ ಸಚಿವ ಹಾಲಿ ಶಾಸಕ ಎಸ್ ಆರ್ ಶ್ರೀನಿವಾಸ್ ಇನ್ನೂ ಮುಂತಾದವರ ಸಹಕಾರದೊಂದಿಗೆ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡು ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಅಲ್ಲಿ ಇಲ್ಲಿ ಸುತ್ತಿ ಬಂದ ಮೇಲೆ ಜನರು ಏನು ಮಾಡುತ್ತಾರೋ. ಕೆಲಸಗಾರ ಸರಳತೆಯ ಸಾಹುಕಾರ ಸ್ಥಳೀಯ ರಾಜಕಾರಣಿ ಹಾಗೂ ಹಲವು ಕ್ಷೇತ್ರದ ಶಾಸಕರ ಬೆಂಬಲದೊಂದಿಗೆ ಗೆಲವು ಸಾಧಿಸುತ್ತಾರೋ ಕಾದು ನೋಡಬೇಕಿದೆ.
ಈ ಸಂಧರ್ಭದಲ್ಲಿ ಮಾಜಿ ಶಾಸಕ ಡಿಸಿ. ಗೌರಿ ಶಂಕರ್ , ವಿಧಾನ ಪರಿಷತ್ ಸದಸ್ಯ ರಾಜೇಂದ್ರ (Rajendra) , ಮಾಜಿ ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು, ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಸಹಸ್ರಾರು ಕಾರ್ಯಕರ್ತರು ಅಭಿಮಾನಿಗಳು ಮುಖಂಡರು ಮತ್ತಿತ್ತರು ಹಾಜರಿದ್ದರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
Chamarajanagara : ಸುನೀಲ್ ಬೋಸ್ ವಿರುದ್ದ ಗೋ ಬ್ಯಾಕ್ ಪೋಸ್ಟರ್ ಚಾಮರಾಜನಗರದಲ್ಲಿ ಪ್ರತ್ಯಕ್ಷ .