Janataa24 NEWS DESK
Vijayapura: ಸಾವನ್ನು ಗೆದ್ದ ಸಾತ್ವಿಕ್ 20 ಗಂಟೆಗಳ ಕಾರ್ಯಾಚರಣೆ ಯಶಸ್ವಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ 2 ವರ್ಷದ ಕಂದ ಸಾತ್ವಿಕ್ನನ್ನು ಕೊನೆಗೂ ರಕ್ಷಣಾ ಪಡೆಯ ಸಿಬ್ಬಂದಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ(Indi) ತಾಲೂಕಿನ, ಲಚ್ಯಾಣ ಗ್ರಾಮದ ಶಂಕರಪ್ಪ ಎನ್ನುವ ರೈತ ಒಂದು ದಿನ ಹಿಂದೆ ಕೊರೆಸಿದ್ದ ಕೊಳವೆ ಬಾವಿಯಲ್ಲಿ ನೀರು ಸಿಗದ ಕಾರಣ ಕೊಳವೆ ಬಾವಿ ಮುಚ್ಚದೇ ಹಾಗೆಯೇ ಬಿಟ್ಟಿದ್ದರು. ಒಂದು ದಿನದ ಬಳಿಕ ತೋಟದಲ್ಲಿ ಆಟವಾಡುತ್ತಿದ್ದಾಗ ಮಗು ಅಯಾ ತಪ್ಪಿ ಜಾರಿ ಕೊಳವೆ ಬಾವಿಗೆ ಬಿದ್ದಿತ್ತು. ಕೊಳವೆ ಬಾವಿಗೆ ಬಿದ್ದ ಕಂಡ ನಂತರ ದಿಕ್ಕು ತೋಚದೆ ವ್ಯಾಪ್ತಿಯ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ.
ಮಾಹಿತಿ ತಿಳಿದ ಸ್ವಲ್ಪ ಹೊತ್ತಿನಲ್ಲಿಯೇ ಬಂದು ಬಾಲಕನನ್ನು ಹೊರತಗಿಯುವ ಕೆಲಸ ಶುರು ಮಾಡಿದ್ದರು. ಈ ಸಂಬಂಧ NDRF, SDRF ತಂಡಗಳು ನಿನ್ನೆಯಿಂದಲೇ ರಕ್ಷಣಾ ಕಾರ್ಯಾಚರಣೆ ನಡೆಸಿ ಸಾತ್ವಿಕ್(Sathvik)ನನ್ನು ಹೊರಗೆ ತೆಗಿದಿದ್ದಾರೆ.
ಇದರಿಂದ ಮಗುವಿನ ಪೋಷಕರು, ಸಂಬಂಧಿಗಳು ಹಾಗೂ ಗ್ರಾಮಸ್ಥರೆಲ್ಲ ಫುಲ್ ಖುಷಿಯಾಗಿದ್ದಾರೆ. ಇವರಷ್ಟೆ ಅಲ್ಲ ಸತತ 20 ಗಂಟೆಯಿಂದಲೂ ಕಾರ್ಯಾಚರಣೆ ಮಾಡಿ ಮಗುವನ್ನ ಹೊರ ತೆಗೆದಿರುವ ಸ್ವತಃ ಅಧಿಕಾರಿಗಳು ಖುಷಿ ಕೂಡ ಹೇಳತೀರದಾಗಿದೆ. ಮಗುವನ್ನ ಕಾಪಾಡಿದ್ದು ನಮಗೆ ತುಂಬಾ ಆನಂದವನ್ನು ನೀಡುತ್ತಿದೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ.
ಭೂಮಿಯನ್ನು ಅಗೆಯುವ ವೇಳೆ ಕಲ್ಲು ಬಂಡೆ ಅಡ್ಡಿಯಾಗಿದ್ರಿಂದ ರಕ್ಷಣಾ ಕಾರ್ಯದಲ್ಲಿ ಕೊಂಚ ವಿಳಂಬವಾಗಿತ್ತು. ಅದು ಬಿಟ್ಟರೇ ಎಲ್ಲ ಕಾರ್ಯ ಚೆನ್ನಾಗಿ ನಡೆದಿದೆ. ಮಗು ಉಳಿದದ್ದೆ ನಮಗೆ ಹೆಚ್ಚು ಖುಷಿಯ ವಿಷಯ ಎಂದು ಅಧಿಕಾರಿಗಳು ಸಂತೋಷವನ್ನಾ ಹಂಚಿಕೊಂಡಿದ್ದಾರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
Tumkur: ಭರ್ಜರಿ ರೋಡ್ ಶೋ ಮೂಲಕ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ ಮುದ್ದಹನುಮೇಗೌಡ