Document

Tumkur: ತುರುವೇಕೆರೆಯಲ್ಲಿ ಗೃಹ ಮಂತ್ರಿ ಸುದ್ದಿಗೋಷ್ಠಿ, ಕಾನೂನು ಎಲ್ಲರಿಗೂ ಒಂದೇ, ಜಿ ಪರಮೇಶ್ವರ್.

Janataa24 NEWS DESK

Tumkur: ತುರುವೇಕೆರೆಯಲ್ಲಿ ಗೃಹ ಮಂತ್ರಿ ಸುದ್ದಿಗೋಷ್ಠಿ, ಕಾನೂನು ಎಲ್ಲರಿಗೂ ಒಂದೇ, ಜಿ ಪರಮೇಶ್ವರ್.

Turuvekere dr g parameshwara campaign lokasabha tumkur

ತುರುವೇಕೆರೆ: ಪಟ್ಟಣದಲ್ಲಿರುವ ಮಾಜಿ ವಿಧಾನ ಪರಿಷತ್ ಸದಸ್ಯರಾದ ಬೆಮೆಲ್ ಕಾಂತರಾಜು ಅವರ ಕಚೇರಿಯಲ್ಲಿ, ಕರ್ನಾಟಕ ರಾಜ್ಯದ ಗೃಹ ಮಂತ್ರಿಗಳಾದ ಜಿ ಪರಮೇಶ್ವರ್(Dr.G.Parameshwara) ಅವರು ಸುದ್ದಿಗೋಷ್ಠಿ ನಡೆಸಿದರು.ಇದೆ ವೇಳೆ ಗೃಹಮಂತ್ರಿಗಳಾದ ಜಿ ಪರಮೇಶ್ವರ್ ಮಾತನಾಡಿ ಪ್ರಧಾನಿಗಳಾದ ನರೇಂದ್ರ ಮೋದಿಯವರು ಕಳೆದೆರಡು ದಿನದಲ್ಲಿ ಬೆಂಗಳೂರಿಗೆ ಆಗಮಿಸಿ ಕಾರ್ಯಕ್ರಮ ಒಂದರಲ್ಲಿ ಬಿಜೆಪಿ ಪರ ಮತಯಾಚನೆ ಮಾಡಿದ್ದು ಇದೇ ವೇಳೆ ಮಾತನಾಡಿರುವ ಅವರು ಸತತ 10 ವರ್ಷಗಳಿಂದಲೂ ದೇಶಕ್ಕೆ ಮತ್ತು ಕರ್ನಾಟಕ ರಾಜ್ಯಕ್ಕೆ ದೊಡ್ಡ ಮಟ್ಟದಲ್ಲಿ ಅನುದಾನವನ್ನ ಬಿಡುಗಡೆಗೊಳಿಸಿ, ರಾಜ್ಯದ ಅಭಿವೃದ್ಧಿಯನ್ನು ನಮ್ಮ ಭಾರತೀಯ ಜನತಾ ಪಾರ್ಟಿ ಮಾಡಿದೆ ಎಂದು ಹೇಳಿದ್ದಾರೆ, ಅದು ಸತ್ಯಕ್ಕೆ ದೂರವಾದ ಮಾತು ನಾವುಗಳು ಅದನ್ನು ವಿಶ್ಲೇಷಣೆ ಮಾಡಿ ನೋಡಿದಾಗ, ಕೇಂದ್ರ ಸರ್ಕಾರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದ ವೇಳೆ ಹೆಚ್ಎಎಲ್, ಫ್ಲೈ ಓವರ್, ಮೆಟ್ರೋ(Metro), ಇನ್ನು ಅನೇಕ ಬೇರೆ ಬೇರೆ ಯೋಜನೆಗಳನ್ನು ನಮ್ಮ ಕಾಂಗ್ರೆಸ್ ಸರ್ಕಾರ ಇದ್ದಂತ ಸಮಯದಲ್ಲಿ ಮಾಡಿದೆ ,ನಮ್ಮ ಸರ್ಕಾರ ಮಾಡಿರುವುದನ್ನು ಪ್ರಧಾನಿ ಮೋದಿಯವರು ನಾವುಗಳು ಇದನ್ನು ಮಾಡಿದ್ದೇವೆ ಎಂದು ಸುಳ್ಳು ಹೇಳಿಕೊಂಡು ಜನರ ದಿಕ್ಕು ತಪ್ಪಿಸುತ್ತಿದ್ದಾರೆ, ಇದರ ಜೊತೆಗೆ ಕರ್ನಾಟಕ ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಕೊಟ್ಟಂತಹ ಐದು ಗ್ಯಾರಂಟಿ(Five Guarantees)ಗಳ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ ಮೋದಿಯವರು, ನಾವು ಕೊಟ್ಟ ಮಾತಿನಂತೆ ಗ್ಯಾರಂಟಿಯನ್ನು ಅನುಷ್ಠಾನ ಮಾಡಿದ್ದೇವೆ, ಈ ಗ್ಯಾರಂಟಿಯನ್ನು ಮುಂದಿನ ನಾಲ್ಕು ವರ್ಷವೂ ಒಟ್ಟಾರೆ ಐದು ವರ್ಷವೂ ಕೂಡ ನಾವು ಮುಂದುವರಿಸುತ್ತೇವೆ, ಯಾವುದೇ ಕಾರಣಕ್ಕೂ ನಾವು ಅವುಗಳನ್ನು ಯಾರು ಎಷ್ಟೇ ಟೀಕೆ ಮಾಡಿದರು ನಿಲ್ಲಿಸುವುದಿಲ್ಲ, ಈ ವಿಚಾರವನ್ನು ಈಗಾಗಲೇ ನಾವು ಜನ ಸಮುದಾಯಕ್ಕೆ ತಿಳಿಸಿದ್ದು ಕೊಟ್ಟ ಮಾತಿನಂತೆ ನಮ್ಮ ಸರ್ಕಾರ ನಡೆದುಕೊಂಡಿದೆ,ಸತತ 10 ವರ್ಷಗಳಿಂದಲೂ ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ನಮ್ಮ ಕರ್ನಾಟಕ ರಾಜ್ಯದಿಂದ 26 ಸಂಸದರನ್ನು ಕೊಟ್ಟಿದ್ದರು, ಅದರ ನೆನಪಿಗಾದರೂ ಒಂದು ಯೋಜನೆಯನ್ನು ಭಾರತೀಯ ಜನತಾ ಪಾರ್ಟಿ ನಮ್ಮ ಕರ್ನಾಟಕಕ್ಕೆ ನೀಡಿಲ್ಲ, ಹಾಗಾಗಿ ಈ ಸರ್ಕಾರ ನಮ್ಮ ರಾಜ್ಯಕ್ಕೆ ಯಾವುದೇ ಅನುದಾನ ಬಿಡುಗಡೆಗೊಳಿಸದೆ ಖಾಲಿ ಚೊಂಬನ್ನ ಕೊಟ್ಟಿದೆ, ಆದ್ದರಿಂದ ನಮ್ಮ ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ಖಾಲಿ ಚೆಂಬು ಪ್ರತಿಭಟನೆ ಮಾಡುವ ಮೂಲಕ ರಾಜ್ಯದ ಜನತೆಗೆ ಇವರ ಸುಳ್ಳುಗಳನ್ನು ತಿಳಿಸಲು ಪ್ರಯತ್ನ ಮಾಡಿದೆ. ಕರ್ನಾಟಕ ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ, ಯಾವುದೇ ಕಾರಣಕ್ಕೂ ಕಾನೂನು ವಿರುದ್ಧ ಕೆಲಸ ಮಾಡುವುದಿಲ್ಲ, ಕಾನೂನು ಎಂಬುದು ಎಲ್ಲರಿಗೂ ಒಂದೇ, ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರೂ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಇನ್ನು ಸುದ್ದಿಗೋಷ್ಠಿಯಲ್ಲಿ ಮಾಜಿ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳಿದರ ಹಾಲಪ್ಪ, ಕಾಂಗ್ರೆಸ್ ಮುಖಂಡರುಗಳಾದ ಬಿಎಸ್ ವಸಂತ್ ಕುಮಾರ್, ಸುಬ್ರಮಣಿ ಶ್ರೀಕಂಠೇಗೌಡ, ತುರುವೇಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗರಾಜು, ಡಿಪಿ ವೇಣುಗೋಪಾಲ್, ಹನುಮಂತಯ್ಯ, ಇನ್ನು ಅನೇಕ ಮುಖಂಡರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ: ಮಂಜುನಾಥ್ ತುರುವೇಕೆರೆ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://www.janataa24.com/tumkur-pavagada-ramkrishna-ashram-ceo-prabhu/

Document

Leave a Reply

Your email address will not be published. Required fields are marked *