Janataa24 NEWS DESK
Tumakuru: ಹಣಕ್ಕಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಅಧಿಕಾರ ದುರುಪಯೋಗ.

ತುಮಕೂರು: ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಶ್ರೀಮತಿ ಡಿ.ಅನುಷಾ ರವರನ್ನ ಅಮಾನತ್ತು ಮಾಡಿ 16 ದಿನ ಕಳೆದರು ಕರ್ತವ್ಯದಲ್ಲಿದ್ದು ಅಧಿಕಾರ ದುರಪಯೋಗ ಮಾಡಿಕೊಂಡಿದ್ದಾರೆ ಎಂದು ವಿಶ್ವ ಮಾನವ ಹಕ್ಕುಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ದರ್ಶನ್ ಎಂ ಎಸ್ (Darshan MS) ಅರೋಪಿಸಿದ್ದಾರೆ.
ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ-ನಿರ್ದೇಶಕ ಶ್ರೀಧರ್ ರವರು ಸಂಪೂರ್ಣ ಬೆನ್ನೆಲುಬಾಗಿ ನಿಂತಿದ್ದಾರೆ. ಅಮಾನತ್ತಾದರೂ ತುಮಕೂರಿನ ಕಛೇರಿಗೆ ತಿಪಟೂರಿನಿಂದ 8-10 ಲಕ್ಷ ರೂಗಳ ಸಾಮಾಗ್ರಿಗಳ ಖರೀದಿ ಮತ್ತು ತುಮಕೂರು ನಗರದ ಬಾಲಮಂದಿರದಲ್ಲಿ ಇತ್ತೀಚಿಗೆ 16 ವರ್ಷದ ಮಗು, ಡಿಪಿಸಿಓ,ಸೂಪರ್ಡೆಂಟ್, ಮೆನೇಜರ್ ಕೌನ್ಸಿಲರ್ ಇವರ ಮುಂದೇಯೇ ಸಾವಿಗೀಡಾಗಿರುವುದು ಅನುಮಾನಸ್ಪದವಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ-ನಿರ್ದೇಶಕರ(DD) ಪಾತ್ರ ಹಾಗೂ ಪೊಲೀಸ್ ಇಲಾಖೆಯ ಪ್ರಾಮಾಣಿಕ ಹಾಗೂ ಕಾನೂನಾತ್ಮಕ ತನಿಖೆಯಲ್ಲಿನ ವೈಫಲ್ಯ ಹಾಗೂ ಮೌನವಹಿಸಿರುವುದು ಭ್ರಷ್ಟಾಚಾರಕ್ಕೆ ಹಾಗೂ ಕರ್ತವ್ಯ ಪಾಲನೆಗೆ ಹಿಡಿದ ಕೈಗನ್ನಡಿ ಆಗಿದೆ.
ಈ ಬಗ್ಗೆ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಸಿದ್ದಲಿಂಗೇಗೌಡರು(Siddalingegowda) ಈ ಬಗ್ಗೆ ಅಪರ ಮುಖ್ಯ ಕಾರ್ಯದರ್ಶಿಗಳು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ಬೆಂಗಳೂರು.ಮಕ್ಕಳ ರಕ್ಷಣಾ ಇಲಾಖೆ ನಿರ್ದೇಶಕರು.ಬೆಂಗಳೂರು. ಮುಖ್ಯಮಂತ್ರಿಗಳಿಗೆ
ಮೇಲ್ಕಂಡ ಅಂಶಗಳ ಬಗ್ಗೆ ತನಿಖೆಗೆ ಮನವಿ ಮಾಡಿದ್ದ ಪರಿಣಾಮ.

ಮಾನ್ಯ ಸರ್ಕಾರದ ಕಾರ್ಯದರ್ಶಿಗಳು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಸರ್ಕಾರದ ಅಧೀನ ಕಾರ್ಯದರ್ಶಿ ರವರು ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಿರ್ದೇಶಕರು ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು ರವರಿಗೆ ಅಗತ್ಯ ಕ್ರಮಕೈಗೊಳ್ಳಲು ನಿರ್ದೇಶಸಲ್ಪಟ್ಟಿದೆ.
ಅಮಾನತ್ತಾದರೂ ಕರ್ತವ್ಯದಲ್ಲಿ ಇರುವುದು ಕಾನೂನುಬಾಹಿರವಾದರು ಅವರ ವಿರುದ್ದ ಕ್ರಮವೇನು ಎಂದು ಮಾನವ ಹಕ್ಕು ಸೇವಾ ಕೇಂದ್ರದಿಂದ ಪ್ರಶ್ನಿಸಲಾಗಿದೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
H Vishwanath : ಕುಮಾರಸ್ವಾಮಿ ಜೊತೆ ಮತ್ತೆ ಕೈ ಜೋಡಿಸಿದ ಹೆಚ್ ವಿಶ್ವನಾಥ್