Janataa24 NEWS DESK

ತುರುವೇಕೆರೆ: ಪಟ್ಟಣದ ಎನ್ಎಚ್‌ಪಿಎಸ್ ರಸ್ತೆಯಲ್ಲಿರುವ ಮನೆಯ ಮಾಲೀಕರಾದ ಯಶೋಧ w/o ವಿಶ್ವನಾಥ್ ಎಂಬುವರ ಮನೆಯಲ್ಲಿ ಬಾಡಿಗೆಗೆಂದು ಇದ್ದ,
ಶಹಿಪ್ ಅಕ್ಬರ್ ಎಂಬ ಏಳು ಜನ ಒಟ್ಟು ಕುಟುಂಬ ಇದ್ದ ಮನೆಗೆ ಇಂದು ಬೆಳಿಗ್ಗೆ ಸರಿ ಸುಮಾರು 10:30 ರಿಂದ 11 ಗಂಟೆಯಲ್ಲಿ ಆಕಸ್ಮಿಕ ಬೆಂಕಿ ಬಿದ್ದು ಮನೆಯಲ್ಲಿಟ್ಟಿದ್ದ 30000 ನಗದು, ಟಿವಿ ಇನ್ನು ಅನೇಕ ಮನೆಯ ಪರಿಕರಗಳು ಹಾಗೂ ಮನೆಯ ಮಾಳಿಗೆ ಸುಟ್ಟು ಕರಕಲಾಗಿ ಒಂದರಿಂದ ಒಂದೂವರೆ ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಒಟ್ಟಾರೆ ಬೆಂಕಿ ಬಿದ್ದ ಮನೆಯಲ್ಲಿ ತುಂಬ ಗರ್ಭಿಣಿಯೊಬ್ಬರು ಮತ್ತು 5 ರಿಂದ 6 ವರ್ಷದ ಮಗು ಇದ್ದರು ಎಂದು ತಿಳಿದುಬಂದಿದ್ದು, ಬೆಂಕಿ ಕಂಡ ತಕ್ಷಣವೇ ಅವರೆಲ್ಲ ಹೊರಗೆ ಬಂದಿದ್ದು, ಯಾವುದೇ ಪ್ರಾಣಪಾಯ ಸಂಭವಿಸಿಲ್ಲ, ಒಟ್ಟಾರೆ ಬೆಂಕಿ ಬಿದ್ದ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ,
ಸ್ಥಳಕ್ಕೆ ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿ
ತುರುವೇಕೆರೆ: ಮಂಜುನಾಥ್