Janataa24 NEWS DESK
Sandalwood: ಬಣ್ಣ ಕಳಚಿದ ಕಲಾವಿದ ಶ್ರೀಧರ್–ಇನ್ನಿಲ್ಲ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ವಧು’ ಧಾರಾವಾಹಿಯಲ್ಲಿ ಡಿವೋರ್ಸ್ ವಕೀಲ ವಧು ಚಿಕ್ಕಪ್ಪನ ಪಾತ್ರದಲ್ಲಿ ಶ್ರೀಧರ್ ನಟಿಸುತ್ತಿದ್ದ ಶ್ರೀಧರ್ ನಾಯಕ್( 47) ಮೃತಪಟ್ಟಿದ್ದಾರೆ. ಬದುಕಿ ಬಾಳಬೇಕಿದ್ದ ಅವರು ಮಧ್ಯದಲ್ಲಿ ನಿರ್ಗಮಿಸಿದ್ದಾರೆ..
ಶ್ರೀಧರ್ ನಾಯಕ್ ಅವರಿಗೆ ಕಳೆದ ಆರು ತಿಂಗಳಿಂದ ಅನಾರೋಗ್ಯ ಕಾಡಿತ್ತು. ಬೆಂಗಳೂರಿನ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
‘ವಧು’ ಸೀರಿಯಲ್‌ಗೂ ಮುನ್ನ ‘ಪಾರು’ ಧಾರಾವಾಹಿಯಲ್ಲೂ ನಟಿಸಿದ್ದರು. ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾದಲ್ಲೂ ಶ್ರೀಧರ್ ಅಭಿನಯಿಸಿದ್ದರು.
‘ವಧು’ ಸೀರಿಯಲ್ ಶೂಟಿಂಗ್ ಮಾಡುವಾಗ ಶ್ರೀಧರ್ ಆರೋಗ್ಯವಾಗಿಯೇ ಇದ್ದರು. ಏಕಾಏಕಿ ಅವರಿಗೆ ಇನ್‌ಫೆಕ್ಷನ್ ಕಾಣಿಸಿಕೊಂಡಿತು.
ಹೀಗಾಗಿ, ‘ವಧು’ ಸೀರಿಯಲ್ ತಂಡ ಶ್ರೀಧರ್ ಗುಡ್ ಬೈ ಹೇಳಿದರು.
ಬ್ಯಾಪಿಸ್ಟ್ ಆಸ್ಪತ್ರೆ ಸೇರಿದ ಬಳಿಕ ಗುರುತೇ ಸಿಗದಷ್ಟು ಬದಲಾದರು. ಸುರದ್ರೂಪಿ ಎನಿಸಿಕೊಂಡಿದ್ದ ಶ್ರೀಧರ್, ಕೃಶವಾಗಿ ಹೋದರು.
ಅವರು ಹಲವು ಸೀರಿಯಲ್ ಗಳಲ್ಲಿ ಮತ್ತು ಕೆಲವು ತಮಿಳು ಸಿನಿಮಾಗಳನ್ನು ಕೂಡ ಮಾಡಿದ್ದರು. ಆದರೆ, ಆರ್ಥಿಕವಾಗಿ ಅವರು ಸದೃಢರಾಗಿರಲಿಲ್ಲ. ದಿನಕ್ಕೆ ರೂ.15,000 ಖರ್ಚಾಗುತ್ತಿತ್ತು. ಎಷ್ಟೇಂದರೂ ಕಲಾವಿದರ ಬಳಿ ಬದುಕುವಷ್ಟೇ ಹಣವಿರುತ್ತದೆ. ಇಂಥ ಸಂದರ್ಭದಲ್ಲಿ ನೀರಿನಂತೆ ಖರ್ಚು ಮಾಡುವಷ್ಟು ಹಣ ಇರುವುದಿಲ್ಲ. ದುಡಿದ ಹಣವೆಲ್ಲ ಆಸ್ಪತ್ರೆಯ ವೆಚ್ಚಕ್ಕೆ ಖರ್ಚಾದಾಗ
ಸಹಾಯಕ್ಕಾಗಿ ಅವರು ಅಂಗಲಾಚಿದ್ದರು.
ಅವರು ಅಭಿಮಾನಿಗಳು ಹಾಗೂ ಬಣ್ಣದ ಲೋಕದವರ ನೆರವು ಕೇಳಿದ್ದರು. ಅನೇಕರು ಕೈಲಾದಷ್ಟು ಸಹಾಯ ಮಾಡಿದ್ದರು. ಆದರೆ ವಿಧಿಯಾಟ ಶ್ರೀಧರ್ ಅವರ ಬದುಕು ಕೊನೆಗೊಂಡಿತ್ತು.
ಜಿತೇಂದ್ರ ಕುಂದೇಶ್ವರ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.