JANATAA24 NEWS DESK
Pavagada: ಸ್ಥಳೀಯರ ಸಹಾಯದಿಂದ ನಿರ್ಮಾಣವಾದ ಮಾದರಿ ಅಂಗನವಾಡಿ ಕಟ್ಟಡ ಉದ್ಘಾಟನೆಗೆ ಇಲಾಖೆ ಅಧಿಕಾರಿಗಳೇ ಗೈರು! ಗ್ರಾಮಸ್ಥರ ಅಸಮಾಧಾನ.

ಪಾವಗಡ: ತಾಲೂಕಿನ ಬಳಸಮುದ್ರ ಗ್ರಾಮದಲ್ಲಿ ಸ್ಥಳೀಯ ದಾನಿಗಳು ಸರ್ಕಾರದ ಅನುದಾನ ಹಾಗೂ ಗ್ರಾಮಸ್ಥರ ಸಹಾಯ ಹಸ್ತದಿಂದ ಸುಮಾರು ₹18 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮಾದರಿ ಅಂಗನವಾಡಿ ಕಟ್ಟಡದ ಉದ್ಘಾಟನೆ ಕಾರ್ಯಕ್ರಮಕ್ಕೆ ಬಳಸಮುದ್ರ ಗ್ರಾಮದಲ್ಲಿ ಹಬ್ಬದ ವಾತಾವರಣದ ರೀತಿಯಲ್ಲಿ ಸಿದ್ದತೆ ನಡೆಸಿದ್ದರು. ಹೊಸ ಅಂಗನವಾಡಿ ಕೇಂದ್ರಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಗೈರಾಗಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ತಾಲೂಕಿನಲ್ಲೇ ಮಾದರಿ ಅಂಗನವಾಡಿಯಾಗಿ ಗುರುತಿಸಬಹುದಾದ ಈ ಕಟ್ಟಡವನ್ನು ಸಾರ್ವಜನಿಕರ ಸಹಕಾರದಿಂದ ನಿರ್ಮಿಸಲಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಆರೈಕೆಯ ವಾತಾವರಣ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಿದ ಈ ಕಟ್ಟಡದ ಉದ್ಘಾಟನೆ ಸಮಾರಂಭವನ್ನು ಗ್ರಾಮಸ್ಥರು ಸಂಭ್ರಮದಿಂದ ಆಯೋಜಿಸಿದ್ದರು.
ಆದರೆ, ಅಂಗನವಾಡಿ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರುವುದನ್ನು ಸ್ಥಳೀಯರು ಬೇಸರದಿಂದ ಪ್ರಶ್ನಿಸಿದ್ದಾರೆ. ಸಾರ್ವಜನಿಕರ ಸಹಕಾರದಿಂದ ನಿರ್ಮಾಣವಾದ ಇಂತಹ ಮಾದರಿ ಕಟ್ಟಡಕ್ಕೆ ಇಲಾಖೆಯ ಅಧಿಕಾರಿಗಳು ಹಾಜರಾಗದೇ ಇರುವುದು ಇಲಾಖೆಯ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಿದ ದಾನಿಗಳು ಹಾಗೂ ಸ್ಥಳೀಯರ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಇಂತಹ ನಿರ್ಲಕ್ಷ್ಯದಿಂದ ಸಾರ್ವಜನಿಕರಲ್ಲಿ ಬೇಸರ ಮೂಡಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳು ಗ್ರಾಮಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಗ್ರಾಮಸ್ಥರ ಮನೆಯಿಂದ ಒಂದು ಹಿರಿಯ ಮಹನೀಯರ ಭಾವಚಿತ್ರಗಳಾದ ಮಹಾತ್ಮ ಗಾಂಧಿ.ಅಂಬೇಡ್ಕರ್. ಕನಕದಾಸರ.ಅಬ್ದುಲ್ ಕಾಲಂ.ಮಾಹಾರ್ಶಿ ವಾಲ್ಮೀಕಿ ಯವರ.ಇತರೆ ಅನೇಕ ಜನರ ಭಾವಚಿತ್ರಗಳು ಅಂಗನವಾಡಿಗೆ ಕೊಡಿಗೆಯಾಗಿ ನೀಡಿದ್ದಾರೆ.
ಇನ್ನೂ ಕೇಲ ದಾನಿಗಳು ಫ್ರಿಡ್ಜ್.ಟಿವಿ. ಒಳಿಗೆ ಊಟ ಗ್ರಾಮಸ್ಥರಿಗೆ ಗ್ರಾಮದಲ್ಲಿ ಹಬ್ಬದ ವಾತಾವರಣ ರೋತಿಯಲ್ಲಿ ಸಂಭ್ರಮಾಚರಣೆಗಳು ನಡೆದಿದೆ.ಅದರೆ ತಮ್ಮದೇ ಇಲಾಖೆಯ ಕಾರ್ಯಕ್ರಮಕ್ಕೆ ತುಮಕೂರು ಜಿಲ್ಲೆಯ ಇಲಾಖೆಯ ಅಧಿಕಾರಿ ಮತ್ತು ಸ್ಥಳೀಯ ತಾಲೂಕಿನ ಸಿಡಿಪಿಓ ಅಧಿಕಾರಿಯಾಗಲಿ.ಆ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ಸೂಪರ್ವೈಸರ್
ಹೇಳಿಕೆ:-ನೂತನ ಅಂಗನವಾಡಿ ಕೇಂದ್ರದ ಪೂಜೆ ಕಾರ್ಯಕ್ರಮ ಮಾಡಲಾಯಿತು ಗ್ರಾಮದಲ್ಲಿ ಬಹುತೇಕ ಜನರು ಅವರ ವೈಯಕ್ತಿಕ ದೇಣಿಗೆ ರೂಪದಲ್ಲಿ ಫ್ರಿಜ್ಜು .ಟಿವಿ ಇತರೆ ವಸ್ತುಗಳು ನೀಡಿದ್ದಾರೆ ಕಾರ್ಯಕ್ರಮಕ್ಕೆ ಸ್ಥಳಿಯ ಶಾಸಕರು ಬರಬೇಕಾಗಿತ್ತು ಕಾರಣಾಂತರದಿಂದ ಬರಲು ಸಾಧ್ಯವಾಗಲಿಲ್ಲ. ಆದರೆ ಇಲಾಖೆಯವರು ಸಹ ಯಾರು ಬರಲಿಲ್ಲ ಸ್ಥಳೀಯರು ಸಹಾಯದಿಂದ ಪೂಜೆ ಕಾರ್ಯಕ್ರಮ ನೆರವೇರಿಸಲಾಯಿತು.
ವರದಿ: ಇಮ್ರಾನ್ ಉಲ್ಲಾ ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
https://www.janataa24.com/operation-sindor-pok-9-terrorist/