Document

Gubbi: ಬಿಡದಿ ಟೌನ್ ಶಿಪ್ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ

JANATAA24 NEWS DESK 

 

 

Gubbi: ಬಿಡದಿ ಟೌನ್ ಶಿಪ್ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ.

 

Gubbi

ಗುಬ್ಬಿ: ಸತತ 480 ದಿನಗಳಿಂದ ಬಿಡದಿ ಟೌನ್ ಶಿಪ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಮಹಿಳೆಯರ ಮೇಲೆ ಎಫ್ ಐ ಆರ್ ದಾಖಲಿಸಿರುವ ರಾಜ್ಯ ಸರ್ಕಾರದ ವಿರುದ್ಧ ತಾಲೂಕು ಪ್ರಗತಿಪರ ರೈತ ಹೋರಾಟ ಸಮಿತಿ ಹಾಗೂ ಎಲ್ಲಾ ಸಂಘ ಸಂಸ್ಥೆಗಳು ರಾಜಕೀಯ ಮುಖಂಡರು ಗುಬ್ಬಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 73 ರ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.

 

ತಾಲೂಕು ರೈತ ಸಂಘದ ಅಧ್ಯಕ್ಷ ವೆಂಕಟೇಗೌಡ ಮಾತನಾಡಿ ಗ್ರೇಟರ್ ಬೆಂಗಳೂರು ಎಂಬ ಹೆಸರಿನಲ್ಲಿ ರಾಜ್ಯ ಸರ್ಕಾರ ಬಿಡದಿ ಟೌನ್ ಶಿಪ್ ಮಾಡುವ ಮೂಲಕ ರೈತರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಮಾಡುತ್ತಿದೆ. ಹಾಗೂ ತುಮಕೂರು ಜಿಲ್ಲೆಯ 75ನೇ ಕಿಲೋಮೀಟರ್ ನಿಂದ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನು ಕೈಬಿಡಬೇಕು

ಇದು ಹೀಗೆ ಮುಂದುವರೆಸಿದರೆ ರೈತ ವಿರೋಧಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು

 

ಜೆಡಿಎಸ್ ಮುಖಂಡ ಬಿ ಎಸ್ ನಾಗರಾಜು ಮಾತನಾಡಿ ಬೆಂಗಳೂರಿನ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ರಾಜ್ಯ ಸರ್ಕಾರಕ್ಕೆ ಆಗುತ್ತಿಲ್ಲ, ಬೆಂಗಳೂರಿನ ನಗರದಲ್ಲಿರುವ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ, ಅದನ್ನು ಬಿಟ್ಟು ಅಭಿವೃದ್ಧಿ ಎಂಬ ಹೆಸರಿನಲ್ಲಿ ಬಿಡದಿ ರೈತರ ಜಮೀನಿಗೆ ರಾಜ್ಯ ಸರ್ಕಾರ ಕನ್ನ ಹಾಕಲು ಹೊರಟಿದೆ. ಕಾಂಗ್ರೆಸ್ ಸರ್ಕಾರವು ರೈತರ ವಿರೋಧಿಯಾಗಿದೆ. ಬಿಡದಿ ಟೌನ್ ಶಿಪ್ ಕೈ ಬಿಡಬೇಕೆಂದು ಕಿಡಿ ಕಾರಿದರು.

 

ಬಿಜೆಪಿ ಮುಖಂಡ ಎಸ್‍ ಡಿ ದಿಲೀಪ್ ಕುಮಾರ್ ಮಾತನಾಡಿ ಬಿಡದಿ ಟೌನ್ ಶಿಪ್ ಮಾಡುವ ಮೂಲಕ ರಾಜ್ಯ ಸರ್ಕಾರ ರೈತರ ಹೊಟ್ಟೆಯ ಮೇಲೆ ಬರೆ ಎಳೆಯುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಕ್ಸ್ ಪ್ರೆಸ್ ಲಿಂಕ್ ಕೆನಲ್ ಯೋಜನೆಯ ಮೂಲಕ ಬಿಡದಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗಲು ಸರ್ಕಾರ ಹೊಂಚು ಹಾಕಿದೆ. ಈಗಾಗಲೇ ರಾಜ್ಯಾದ್ಯಂತ ಭೀಕರ ಬರಗಾಲವಿದ್ದು ತುಮಕೂರು ಜಿಲ್ಲೆಯ ಹೇಮಾವತಿ ನೀರನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ, ರೈತ ಮಹಿಳೆಯರು ಈಗಾಗಲೇ ಬಿಡದಿ ಟೌನ್ ಶಿಪ್ ವಿರೋಧಿಸಿ ಸರ್ಕಾರಕ್ಕೆ ಪೊರೆಕೆ ಸೇವೆಯನ್ನು ಮಾಡಿದ್ದಾರೆ. ಅದೇ ರೀತಿಯಾಗಿ ನಾವು ತುಮಕೂರಿನ ಹೇಮಾವತಿ ರಕ್ಷಣೆಗಾಗಿ ಪೊರಕೆ ಮತ್ತು ಎಡೆಮಟ್ಟೆಯನ್ನು ಹಿಡಿದು ಹೋರಾಟ ಮಾಡಬೇಕಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಕಿಡಿಕಾರಿದರು.

 

ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಬಿಡದಿ ಟೌನ್ ಶಿಪ್ ಗೆ ರೈತರ ಫಲವತ್ತದ ಭೂಮಿಯನ್ನು ಕಬಳಿತ್ತಿರುವುದು ನಾಚಿಕೆಗೇಡಿನ ಸಂಗತಿ, ರಾಮನಗರ ಭಾಗದಿಂದ ಸರಿಸುಮಾರು 6,000 ಲೀಟರ್ ಹಾಲು ಹೈನುಗಾರಿಕೆಯಿಂದ ಬೆಂಗಳೂರಿಗೆ ಸರಬರಾಜಾಗುತ್ತಿದೆ‌. ರೈತರು ತಮ್ಮ ಕೃಷಿ ಭೂಮಿಯನ್ನು ನಂಬಿಕೊಂಡು ಜೀವನೋಪಾಯ ನಡೆಸುತ್ತಿದ್ದಾರೆ. ಸರ್ಕಾರವು, ಮಾನ್ಯ ಮುಖ್ಯಮಂತ್ರಿಗಳು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ ಈ ಯೋಜನೆಯನ್ನು ಕೈ ಬಿಟ್ಟು ರೈತ ಪರವಾಗಿ ನಡೆದುಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

 

ಪ್ರತಿಭಟನೆಯಲ್ಲಿ ಕಳ್ಳಿಪಾಳ್ಯ ಲೋಕೇಶ್, ಚಂದ್ರಶೇಖರ್ ಬಾಬು, ಎಚ್ ಟಿ ಭೈರಪ್ಪ, ಶಿವಕುಮಾರ್, ಶಂಕರ್ ಕುಮಾರ್, ಸುರೇಶ್ ಗೌಡ, ಸೇರಿದಂತೆ ನೂರಾರು ರೈತರು, ಮಹಿಳೆಯರು ಪ್ರತಿಭಟನೆಯಲ್ಲಿ ಭಗವಹಿಸಿದ್ದರು.

 

ವರದಿ :ಶ್ರೀಕಾಂತ್ ಗುಬ್ಬಿ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

https://www.janataa24.com/iasipskas-who-stood-as-the-godfather-of-the/

 

 

https://www.janataa24.com/miscreants-uprooted-40-coconut-trees-turuvekere/

 

 

https://www.janataa24.com/operation-sindor-pok-9-terrorist/

 

Document

Leave a Reply

Your email address will not be published. Required fields are marked *