Janataa24 NEWS DESK
Pavagada : ಕಾಂಗ್ರೆಸ್ ನ ಹಿರಿಯ ಮುಖಂಡ ಜಿ ಎಸ್ ಧರ್ಮಪಾಲ್ ನಿಧನ.

ಪಾವಗಡ: ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಜಿ.ಎಸ್ ಧರ್ಮಪಾಲ್ (90) ದೈವಾಧೀನರಾಗಿದ್ದಾರೆ. ಇವರು ಆರ್ಯವೈಶ್ಯ ಸಮುದಾಯದ ಹಿರಿಯ ಮುಖಂಡರಾಗಿದ್ದು ರಾಜಕೀಯವಾಗಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿ ಉತ್ತಮ ಹೆಸರು ಗಳಿಸಿದಂತಹ ವ್ಯಕ್ತಿತ್ವ ಉಳ್ಳವರು, ಇವರು ಸುಮಾರು 55 ವರ್ಷಗಳ ಕಾಲ ಪುರಸಭೆಯಲ್ಲಿ ಅಧ್ಯಕ್ಷರಾಗಿ ಸದಸ್ಯರಾಗಿ ಚುನಾಯಿತರಾಗಿ ಪಟ್ಟಣ ಅಭಿವೃದ್ಧಿಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. 22 ವರ್ಷ ಎಸ್.ಎಸ್.ಕೆ ಸಂಘದ ಅಧ್ಯಕ್ಷರಾಗಿ ಶನಿಮಹಾತ್ಮ ಸಂಘ ಬೆಳೆಯಲು ಪ್ರಮುಖ ಪಾತ್ರವೂ ಸಹ ಇವರದ್ದಾಗಿದೆ.
15 ವರ್ಷ ಕಾಲ ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷರಾಗಿ. ಕೃಷಿ ಮಾರುಕಟ್ಟೆ ಕೇಂದ್ರದಲ್ಲೂ ಸಹ ಸದಸ್ಯರಾಗಿ. ಇತರೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದರು. ಇವರಿಗೆ ಎರಡು ಗಂಡು ಎರಡು ಹೆಣ್ಣು ಮಕ್ಕಳು ಹಾಗೂ 10 ಜನ ಮೊಮ್ಮಕ್ಕಳು ಮತ್ತು ಅಪಾರ ಬಂಧುಗಳು ಅಭಿಮಾನಿಗಳಿಂದ ಅಗಲಿದ್ದಾರೆ.
ಪಾವಗಡ ಪುರಸಭೆ ಅಧ್ಯಕ್ಷರಾಗಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ನಡೆಸಿ ಪಕ್ಷ ಬಲವರ್ಧನೆ ಮಾಡಿದ್ದ ಜಿ ಎಸ್ ಧರ್ಮಪಾಲ್ ರವರು ಗುರುವಾರ ಇಹಲೋಕ ತ್ಯಜಿಸಿದ್ದರು.ಇದರಿಂದ ಪಾವಗಡ ತಾಲ್ಲೂಕಿಗೆ ಒಂದೊಳ್ಳೆ ಹಿರಿಯ ಕಾಂಗ್ರೆಸ್ ಕಟ್ಟಾಳನ್ನ ಕಳೆದುಕೊಂಡಂತಾಗಿದೆ. ಪಾವಗಡ ಶಾಸಕರಾದ ಹೆಚ್ ವಿ ವೆಂಕಟೇಶ್ ರವರು ಮತ್ತು ಮಾಜಿ ಸಚಿವರಾದ ವೆಂಕಟರಮಣಪ್ಪ (Venkataramanappa) ನವರು ಪಟ್ಟಣದ ಧರ್ಮಪಾಲ್ ರವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು ಅವರ ಆತ್ಮಕ್ಕೆ ಶಾಂತಿ ಕೋರಿದರು.ಅಪಾರ ಸಂಖ್ಯೆಯ ಗಣ್ಯರು ಅಂತಿಮ ದರ್ಶನದಲ್ಲಿ ಭಾಗಿಯಾಗಿ ಜಿ ಎಸ್ ಧರ್ಮಪಾಲ್ ರವರ ಆತ್ಮಕ್ಕೆ ಶಾಂತಿ ಕೋರಿದರು.
ವರದಿ: ಇಮ್ರಾನ್ ಉಲ್ಲಾ. ಪಾವಗಡ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
Election : ಬಿಜೆಪಿ ಶುದ್ದೀಕರಣ ಮಾಡುವುದಾಗಿ ಮಾಜಿ ಸಿಎಂ ಡಿವಿ ಸದಾನಂದಗೌಡ ಶಪಥ