Janataa24 NEWS DESK
Nelamangala: ಮಹಿಳೆಯ ರಕ್ಷಣೆಗೆ ಬಂದ ಪೋಲಿಸರ ಮೇಲೆ ಹಲ್ಲೆ- ಪೋಲಿಸರ ಅಥಿತಿಯಾದ ಪತಿ .

ನೆಲಮಂಗಲ: ಗಲಾಟೆ ತೊಂದರೆಗಳು ನಡೆದಾಗ ಪೋಲಿಸರು ಬಂದು ಅರೋಪಿಯನ್ನು ಹಿಡಿದು ಕಾನೂನು ಶಿಕ್ಷೆಗೆ ಒಳಪಡಿಸುವುದು ಸಾಮಾನ್ಯ ಆದರೆ ರಕ್ಷಣೆಗೆ ಬಂದ ಪೋಲಿಸರ ಮೇಲೆಯೇ ಹಲ್ಲೆ ಮಾಡಿ ಪೋಲಿಸರ ಅಥಿತಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡಿದಿದೆ.
ಹೆಂಡತಿಗೆ ಹೊಡೆದು ಬಡಿದು ಹಲ್ಲೆ ಮಾಡಿ ಗಂಡನನ್ನು ಹಿಡಿಯಲು ಯತ್ನಿಸಿದಾಗ ಪೊಲೀಸರ ಕೈಕಚ್ಚಿ, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ನಲ್ಲಿ ಬೆಳಕಿಗೆ ಬಂದಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಆರೋಪದಡಿ ಗಂಡನನ್ನು ಬಂಧಿಸಲಾಗಿದೆ. ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ಕುರಿತು ಎಫ್ ಐ ಆರ್(FIR) ದಾಖಲಾಗಿದೆ.
ಪತ್ನಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಪತಿಯನ್ನು ಹಿಡಿಯಲು ಯತ್ನಿಸಿದಾಗ ಪೊಲೀಸರ ಕೈಕಚ್ಚಿ ಹಲ್ಲೆಗೆ ಯತ್ನಿಸಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ನಲ್ಲಿ ಜರುಗಿದೆ. ಕೆಲಸಕ್ಕೆ ಅಡಚಣೆ ಪಡಿಸಿ ಹಲ್ಲೆ ಆರೋಪದಡಿ ನವೀನ್ ಕುಮಾರ್ (30) ಎಂಬಾತನನ್ನು ಬಂಧಿಸಲಾಗಿದೆ.
ಪತ್ನಿ ರಶ್ಮಿ (Rashmi) ಮೇಲೆ ಪತಿ ನವೀನ್ ಕುಮಾರ್ ಕ್ಷುಲ್ಲಕ ಕಾರಣಕ್ಕಾಗಿ ಕಾರಿನ ಗ್ಲಾಸ್ ಹೊಡೆದು ಹಲ್ಲೆ ಮಾಡಿದ್ದಾನೆ. ಈ ವೇಳೆ ಪತ್ನಿ ರಶ್ಮಿ 112ಗೆ ತುರ್ತು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕರೆ ಆಧರಿಸಿ 112 ಮಹಾಂತೇಶ್ ಗುಣಕಿ ಹಾಗೂ ಚಂದ್ರು ಎಂಬುವ ಪೋಲಿಸ್ ಸಿಬ್ಬಂದಿ ಬಂದಿದ್ದಾರೆ. ಅವರ ಮೇಲೂ ಹಲ್ಲೆಗೆ ಯತ್ನಿಸಲಾಗಿದೆ. ಸದ್ಯ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
MP Ticket : ಪ್ರಭಾವಿ ಇಬ್ಬರೂ ಸಚಿವರು ತಮ್ಮ ಕುಟುಂಬಕ್ಕೆ ಎಂಪಿ ಟಿಕೆಟ್ ಪಡೆಯಲು ಹೈಕಮಾಂಡ್ ಬಳಿ ಸರ್ಕಸ್.