Document

KN Rajanna : ಕೊಟ್ಟ ಮಾತಿನಂತೆ ಮಧುಗಿರಿ ಜನತೆಗೆ ಹೇಮೆ ಹರಿಸಿದ ಸಚಿವ ಕೆ ಎನ್ ರಾಜಣ್ಣ.

Janataa24 NEWS DESK

KN Rajanna : ಕೊಟ್ಟ ಮಾತಿನಂತೆ ಮಧುಗಿರಿ ಜನತೆಗೆ ಹೇಮೆ ಹರಿಸಿದ ಸಚಿವ ಕೆ ಎನ್ ರಾಜಣ್ಣ.

kn Rajanna Janataa
ಸಹಕಾರ ಸಚಿವರಾದ ಕೆ.ಎನ್ ರಾಜಣ್ಣನವರು

ಮಧುಗಿರಿ: ತುಮಕೂರು ಜಿಲ್ಲೆ ಬರಪೀಡಿತ ಹಿಂದುಳಿದ ತಾಲ್ಲೂಕುಗಳ ಪಟ್ಟಿಯಲ್ಲಿ ಒಂದಾದ ಮಧುಗಿರಿ ತಾಲ್ಲೂಕು ಈ ಬಾರಿ ಮಳೆಯಾಗದ ಕಾರಣ ಬರಗಾಲ ಆವರಿಸಿದೆ. ಪ್ರತಿವರ್ಷ ವಾಡಿಕೆಗಿಂತ ಎರಡು ಡಿಗ್ರಿ ಸೆಲ್ಸಿಯಸ್ ಉಷ್ಣತೆ(Temperature) ಈ ಬಾರಿ ಹೆಚ್ಚಾಗಿ ಇರುವ ಕಾರಣ ಬಿಸಿಲ ತಾಪ ಈ ಬಾರಿ ಪ್ರಾಣಿ ಪಕ್ಷಿ ಮನುಷ್ಯರಿಗೂ ತಟ್ಟಿ ಕುಡಿಯುವ ನೀರಿಗೂ ಆಹಾಕಾರ ಉಂಟಾಗಿದೆ. ಸೂಕ್ತ ಸಮಯಕ್ಕೆ ಮಳೆಯಾಗದ ಕಾರಣ ಅಂತರ್ಜಲ ಮಟ್ಟ ಕುಸಿದು ಕೆರೆ ಕಟ್ಟೆ ಬಾವಿಗಳಲ್ಲಿ ನೀರಿಲ್ಲದೆ ಬತ್ತಿ ಹೋಗುತ್ತಿವೆ. ಇದರ ಪರಿಣಾಮವಾಗಿ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿ ಜನರಿಗೆ ಜಲಕ್ಷಾಮ ಎದುರಾಗಿದೆ ಈ ನಿಟ್ಟಿನಲ್ಲಿ ಆಯಾ ಜಿಲ್ಲಾಧಿಕಾರಿಗಳಿಗೆ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಸರ್ಕಾರ ಖಡಕ್ ಎಚ್ಚರಿಕೆ ಕೊಟ್ಟಿದೆ.

ಇನ್ನೊಂದು ಕಡೆ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನತೆಯ ನೀರಿನ ಬವಣೆಯ ನೀಗಿಸಲು ಹಗಲಿರುಳು ಶ್ರಮಿಸಿ ಜಲಾನಯ ನೀರನ್ನು ಹರಿಸುತ್ತಾರೆ. ತಳಮಟ್ಟದ ಅಧಿಕಾರಿಗಳಿಗೆ ಮಿತವಾಗಿ ನೀರು ಬಳಸಲು ಸಾರ್ವಜನಿಕರಿಗೆ ಕರೆ ಕೊಡಲು ತಿಳಿಸಿದ್ದಾರೆ ಅನಗತ್ಯ ನೀರು ವ್ಯರ್ಥ ಮಾಡದಂತೆ ಎಚ್ಚರಿಕೆ ನೀಡುತ್ತಿದ್ದಾರೆ.

ಇಂತಹ ಜಲಕ್ಷಾಮದ ವೇಳೆಯಲ್ಲಿ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುವ ಮುನ್ನ ಮಾನ್ಯ ಸಹಕಾರ ಸಚಿವರಾದ ಕೆ.ಎನ್ ರಾಜಣ್ಣ(ನವರು ಹಾಗೂ ವಿಧಾನ ಪರಿಷತ್ ಸದ್ಯರಾದ ರಾಜೇಂದ್ರ(Rajendra) ಅವರು ಶ್ರಮಿಸಿ ಹೇಮಾವತಿ ನೀರನ್ನಾ ಮಧುಗಿರಿ ಹೊರವಲಯದ ಸಿರಾ ರಸ್ತೆಯಲ್ಲಿರುವ ಸಿದ್ದಾಪುರ ಕೆರೆಗೆ ಹರಿಸುವುದಾಗಿ ಭರವಸೆ ಕೊಟ್ಟಿದ್ದರು.

KN Rajanna
ಸಿದ್ದಾಪುರ ಕೆರೆಗೆ ಬರುತ್ತಿರುವ ಹೇಮೆ ನೀರು

ಕೊಟ್ಟ ಮಾತಿನಂತೆ ಇಂದು ಹೇಮಾವತಿ ನೀರು ಸಿದ್ದಾಪುರ ಕೆರೆಗೆ ಹರಿಸಿ ಮಧುಗಿರಿ ಜನತೆಯ ಜಲ ಕ್ಷಾಮವನ್ನು ದೂರ ಮಾಡಿದ್ದಾರೆ ಕೊಟ್ಟ ಮಾತಿನಂತೆ ಮಧುಗಿರಿ ಜನತೆಯ ಜನಮಾನಸದಲ್ಲಿ ಉಳಿಯಲಿದ್ದಾರೆ ಜನರ ಸಮಸ್ಯೆ ಎದುರಾಗುವ ಮುನ್ನ ಸಾರ್ವಜನಿಕರ ಮೇಲಿರುವ ಕಾಳಜಿಗೆ ಜನರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

Pavagada: ಗ್ರಾಮೀಣ ಭಾಗದ ಮಕ್ಕಳಿಗೆ ಉಚಿತ ಸಿಇಟಿ ತರಬೇತಿ ಹಾಗೂ ಬಸ್ ಕಲ್ಪಿಸಲು ಮುಂದಾಗುತ್ತೇವೆ ಮಾಜಿ ಶಾಸಕ ಸೋಮ್ಲಾ ನಾಯ್ಕ

Document

Leave a Reply

Your email address will not be published. Required fields are marked *