Lokayukta: ಕೆಎಎಸ್ ಅಧಿಕಾರಿ ವರ್ಷ ಒಡೆಯರ್ 5 ಲಕ್ಷದ ಜೊತೆ ಲೋಕಾಯುಕ್ತ ಬಲೆಗೆ.
ಬೆಂಗಳೂರು: ವರ್ಷ ಒಡೆಯರ್ ಕೆಎಎಸ್ ಅಧಿಕಾರಿ 5 ಲಕ್ಷದ ಜೊತೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ವಿಶೇಷ ತಹಶೀಲ್ದಾರ್ ಆಗಿ ಅಧಿಕಾರಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.ಮಂಗಳವಾರ ಬೆಂಗಳೂರಿನ ಕಂದಾಯ ಭವನದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ವಿಶೇಷ ತಹಶೀಲ್ದಾರ್ ವರ್ಷಾ ವಡೆಯರ್ 5 ಲಕ್ಷ ಲಂಚ ಸ್ವೀಕಾರ ಮಾಡುವಾಗ ಈ ಲೋಕಾಯುಕ್ತ ದಾಳಿ ನಡೆಸಿದೆ.ಬೆಂಗಳೂರಿನ ಕೆಂಗನಹಳ್ಳಿಯ ಜಮೀನಿನ ಖಾತೆಯಲ್ಲಿ ಹೆಸರು ಬದಲಿಸುವ ವಿಚಾರವಾಗಿ ಖಾತೆ ಮಾಡಿಸುವ ವಿಚಾರವಾಗಿ ಕಾಂತರಾಜು ಎಂಬುವವರ ಬಳಿ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.

ಬ್ರೋಕರ್ ರಮೇಶ್ ಮೂಲಕ ಮೂಲಕ ಐದು ಲಕ್ಷ ಲಂಚ ಪಡೆಯುವಾಗ ನೇರವಾಗಿ ಲೋಕಾಯುಕ್ತರ ಕೈಗೆ ಸಿಕ್ಕಿ ಹಾಕಿಕೊಂಡಿರುತ್ತಾರೆ.

ಕಾಂತರಾಜು ರವರು ನೀಡಿರುವ ದೂರಿನಡಿಯಲ್ಲಿ ಲೋಕಾಯುಕ್ತ ಇಲಾಖೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸಲಾಗುತ್ತಿದೆ.

ವರ್ಷಾ ವಡೆಯರ್ ಈ ಮೊದಲು ರಾಮನಗರ ಜಿಲ್ಲೆಯ ಕನಕಪುರ ಶಹಶೀಲ್ದಾರ್ ಆಗಿದ್ದರು. ಆಗ ಅವರನ್ನು ವರ್ಗಾವಣೆ ಮಾಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿತ್ತು. ಹಲವಾರು ಸಂಘಟನೆಗಳು ಅವರ ಪರವಾಗಿ ನಿಂತು ಬೆಂಬಲ ನೀಡಿದ್ದವು, ಸಾಮಾಜಿಕ ಜಾಲತಾಣದಲ್ಲಿಯೂ ಅವರನ್ನು ಬೆಂಬಲಿಸಿ ಅಭಿಯಾನ ನಡೆದಿತ್ತು.ಅಮಾಯಕ ಜನರಿಗೆ ನಂಬಿಸುವ ಇಂತಹ ಭ್ರಷ್ಟ ಅಧಿಕಾರಿಗಳನ್ನು ಜನಸಾಮಾನ್ಯರು ಒಮ್ಮೆ ಪರಿಶೀಲಿಸಬೇಕು .