Document

Lokasabha Election : ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಕಟ್ಟುನಿಟ್ಟಿನ ಸಿದ್ಧತೆ ತಹಶೀಲ್ದಾರ್ ಸಂತೋಷ್ ಕುಮಾರ್

Janataa24 NEWS DESK

Lokasabha Election : ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಕಟ್ಟುನಿಟ್ಟಿನ ಸಿದ್ಧತೆ ತಹಶೀಲ್ದಾರ್ ಸಂತೋಷ್ ಕುಮಾರ್

Lokasabha Election Assident Election officer
Santhosh Kumar

ಪಾವಗಡ: 2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ನೀತಿ ಸಂಹಿತೆ ಜಾರಿ ಕುರಿತು ಗುರುವಾರ ತಾಲೂಕು ತಹಶೀಲ್ದಾರರ ಕಚೇರಿಯ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ತಾಲ್ಲೂಕು ದಂಡಾಧಿಕಾರಿ ಸಂತೋಷ್ ಕುಮಾರ್ ಅವರು, ತಾಲ್ಲೂಕಿನಲ್ಲಿ ಒಟ್ಟು 197548 ಸಾವಿರ ಮತದಾರರಿದ್ದು, ಇದರಲ್ಲಿ 100570 ಪುರುಷರ ಹಾಗೂ 96969 ಮಹಿಳೆಯರು ಮತ್ತು 9 ಇತರೆ ಮತದಾರರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 246 ಮತಗಟ್ಟೆಗಳನ್ನು ತೆರೆಯಲಾಗಿತ್ತು .

ಆದರೆ ಈ ಲೋಕಸಭಾ ಚುನಾವಣೆಯಲ್ಲಿ 240 ಮತಗಟ್ಟೆಗಳಿಗೆ ಕಡಿತಗೊಳಿಸಲಾಗಿದ್ದು, ಇದರಲ್ಲಿ ಕಸಬಾ ಹೋಬಳಿ 56 ಕೇಂದ್ರಗಳು, ನಾಗಲಮಡಿಕೆ ಹೋಬಳಿ 41 ಕೇಂದ್ರಗಳು, ನಿಡಗಲ್ಲು 56 ಕೇಂದ್ರಗಳು, ವೈ ಎನ್ ಹೊಸಕೋಟೆ ಹೋಬಳಿ 70 ಕೇಂದ್ರಗಳು ಮತ್ತು ಪುರಸಭೆಯ ವ್ಯಾಪ್ತಿಯಲ್ಲಿ 20 ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದೆ.

ಈ ಭಾಗಕ್ಕೆ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ2, ವಿಜಯ್ ಕುಮಾರರವರನ್ನು ಸಹಾಯಕ ಚುನಾವಣಾಧಿಕಾರಿ(Assistant Election officer)ಯನ್ನಾಗಿ ನೇಮಕ ಮಾಡಲಾಗಿದೆ. ತಾಲೂಕಿನ ಗಡಿಭಾಗಗಳಲ್ಲಿ ಆರು ಚೆಕ್ ಪೋಸ್ಟ್ ತೆರೆಯಲಾಗಿದ್ದು. ರಾಜವಂತಿ, ಕೊಡಮಡಗು, ನಾಗಲಾಪುರ, ದೊಮ್ಮತಮರಿ, ಅರಸೀಕೆರೆ(ಚಿಕ್ಕನಡ್ಕು ಕ್ರಾಸ್), ವೆಂಕಟನಹಳ್ಳಿ, ಗಡಿಗಳಲ್ಲಿ ಕಟ್ಟುನಿಟ್ಟಿನ ಬಂದೋ ಬಸ್ತುಗಾಗಿ ಪೊಲೀಸ್ ಮತ್ತು ಸಿ ಪಿ ಐ ಅಧಿಕಾರಿಯನ್ನು ನಿಯೋಜಿಸಲಾಗಿದೆ.

ಚುನಾವಣ ಸಹಾಯವಾಣಿ ಸಂಖ್ಯೆ 1950 ‌ ಸಹಾಯವಾಣಿ ಕೇಂದ್ರವು ದಿನದ 24 ಗಂಟೆ ಕಾರ್ಯನಿರ್ವಹಿಸಲಿದ್ದು , ಮತದಾರರು ಯಾವುದೇ ಮಾಹಿತಿ ಮತ್ತು ದೂರಗಳಿಗೆ ಸಂಪರ್ಕಿಸಬಹುದಾಗಿದೆ. ಭಾರತ ಚುನಾವಣಾ ಆಯೋಗವು ಬಿಡುಗಡೆಗೊಳಿಸಿರುವ ಮೊಬೈಲ್ ಆಪ್ ಮುಖಾಂತರ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ದೂರಗಳನ್ನು ದಾಖಲಿಸಬಹುದು,ಎಲ್ಲಾ ಮತಗಟ್ಟೆಗಳಿಗೆ ಮೂಲಭೂತ ಸೌಕರ್ಯಗಳಾದ ಶೌಚಾಲಯ,ಕುಡಿಯುವ ನೀರು, ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಇವಿಎಂ ಮತ್ತೆ ವಿವಿ ಪ್ಯಾಟ್ ಸಾಗಣೆ ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಸಿ ಅವುಗಳ ಚಲನವಲನಗಳನ್ನು ಮೇಲ್ವಿಚಾರಣೆ ಮಾಡಲಾಗುವುದು ಪ್ರಸ್ತುತ ಚುನಾವಣೆಯಲ್ಲಿ NOTA ಇರುತ್ತದೆ.ಧ್ವನಿ ವರ್ಧಕಗಳನ್ನು ರಾತ್ರಿ 10 ರಿಂದ ಬೆಳಗಿನ ಜಾವ 6:00 ವರೆಗೆ ಉಪಯೋಗಿಸುತ್ತಿಲ್ಲ,

ಅಭ್ಯರ್ಥಿ ಗಳು ಮತ್ತು ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ಪರಿಸರ ಸ್ನೇಹಿ ಪರಿಕರಗಳು ಅಂದರೆ ಪೋಸ್ಟರ್ಸ್ ಬ್ಯಾನರ್ಸ್ ಬಂಟಿಂಗ್ಸ್ ಮಾತ್ರ ಬಳಸತಕ್ಕದ್ದು, ಸ್ವೀಪ್ ಅಡಿ ಮತದಾರರಲ್ಲಿ ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
ತಾಲೂಕಿನಲ್ಲಿ 2963 ವಿಕಲಚೇತನ ಮತದಾರರನ್ನು ಗುರುತಿಸಲಾಗಿದ್ದು, ವಿಕಲಚೇತನರು ಮತದಾನ ದಿನದಂದು ವೀಲ್ ಚೇರ್ ಮತ್ತು ವ್ಯಾನ್ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದರೆ ಮುಂಚೆ ಅರ್ಜಿ ಸಲ್ಲಿಸಬೇಕು. ತಾಲೂಕಿನಲ್ಲಿ 18 ರಿಂದ 19 ವರ್ಷದ ಯುವ ಮತದಾರರು ಒಟ್ಟು 3558 ನೋಂದಣಿಯಾಗಿರುತ್ತಾರೆ.

ವರದಿ: ಇಮ್ರಾನ್ ಉಲ್ಲಾ ಪಾವಗಡ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

Lokasabha Election : ಕಾಂಗ್ರೆಸನ ಎರಡನೇ ಹಂತದ ಲೋಕಸಭಾ ಅಭ್ಯರ್ಥಿ ಪಟ್ಟಿ ರಿಲೀಸ್

Document

Leave a Reply

Your email address will not be published. Required fields are marked *