Document

ಸಂತೆ ವ್ಯಾಪಾರಕ್ಕಿಳಿದ ಪುಟ್ಟ ವಿದ್ಯಾರ್ಥಿಗಳು: ಪೋಷಕರ ಮೊಗದಲ್ಲಿ ನಗು.

Janataa24 NEWS DESK

IMG 20240209 WA0011



ತುರುವೇಕೆರೆ: ತಾಲೂಕಿನ ಮಾಯಸಂದ್ರ -ತುಮಕೂರು ರಸ್ತೆಯಲ್ಲಿರುವ ಚುಂಚಾದ್ರಿ ರೈತ ಸಂತೆ ಆವರಣದಲ್ಲಿ, ಶ್ರೀ ಆದಿಚುಂಚನಗಿರಿ ಶಾಖಾ ಮಠ ಎಸ್ ಬಿ ಜಿ ವಿದ್ಯಾಲಯದ 1 ರಿಂದ 7 ನೇ ತರಗತಿಯ ವಿದ್ಯಾರ್ಥಿಗಳಿಂದ ಮಕ್ಕಳ ಸಂತೆ ಕಾರ್ಯಕ್ರಮವನ್ನು ಶಾಖ ಮಠ ಆಯೋಜನೆ ಮಾಡಲಾಗಿದ್ದು,

IMG 20240209 WA0009


ಇದರ ಉದ್ಘಾಟನೆಯನ್ನು ರಾಜಶೇಖರನಾಥ ಸ್ವಾಮೀಜಿ ಅವರು ಪುಟಾಣಿ ಮಕ್ಕಳ ಕೈಯಲ್ಲಿ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.

IMG 20240209 WA0008



ಇನ್ನು ಈ ಮಕ್ಕಳ ಸಂತೆಯಲ್ಲಿ 700 ವಿದ್ಯಾರ್ಥಿಗಳು ಭಾಗವಹಿಸಿದ್ದು ಅದರಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು, ವಿವಿಧ ಹಣ್ಣು, ತರಕಾರಿ, ದವಸಧಾನ್ಯ, ತೆಂಗಿನಕಾಯಿ, ಕಬ್ಬು, ಸೊಪ್ಪು, ಇನ್ನು ಅನೇಕ ವಿವಿಧ ಮಾದರಿಯ ತಿಂಡಿ ತಿನಿಸುಗಳನ್ನು ವ್ಯಾಪಾರ ಮಾಡಿದರು,ಈ ಸಂತೆಯಲ್ಲಿ ತಮ್ಮ ತಮ್ಮ ಮಕ್ಕಳು ವ್ಯಾಪಾರ ಮಾಡುತ್ತಿರುವುದನ್ನು ಕಂಡು ಪೋಷಕರು ಖುಷಿಪಟ್ಟಿರುವುದು ಹೌದು.

IMG 20240209 WA0010



ಇನ್ನು ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಗಿರೀಶ್, ಹಾಗೂ ಸುಮಾರು 40ಕ್ಕೂ ಹೆಚ್ಚು ಶಿಕ್ಷಕ ಶಿಕ್ಷಕಿಯರು ಪುಟಾಣಿ ಮಕ್ಕಳು ಮತ್ತು ಪೋಷಕರು ಪಾಲ್ಗೊಂಡಿದ್ದರು.

ವರದಿ

ತುರುವೇಕೆರೆ: ಮಂಜುನಾಥ್

Document

Leave a Reply

Your email address will not be published. Required fields are marked *