Janataa24 NEWS DESK

ಬೆಂಗಳೂರು: ಸಿಎಂ ಸಿದ್ದರಾಮಯ್ಯ 15ನೇ ಬಾರಿಗೆ ದಾಖಲೆಯ ಬಜೆಟ್ ಮಂಡನೆ ಮಾಡಿದ್ದಾರೆ. ವಿಧಾನಸಭೆಯಲ್ಲಿಂದು ಬರೋಬ್ಬರಿ 3 ಗಂಟೆ 15 ನಿಮಿಷಗಳ ಕಾಲ ಬಜೆಟ್ ಪ್ರತಿ ಓದಿದ್ದು ವಿಶೇಷವಾಗಿತ್ತು. ಶಿಕ್ಷಣ, ನೀರಾವರಿ, ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಹಲವು ವಲಯಳಿಗೆ ವಿಶೇಷ ಅನುದಾನ(Grant) ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳು(Guarantee Schemes) ಚುನಾವಣಾ ಗಿಮಿಕ್ ಅಲ್ಲ, ಗ್ಯಾರಂಟಿಗಳಿಗೆ ವಿಶ್ವವೇ ಮೆಚ್ಚಿಕೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಜೆಟ್ನಲ್ಲಿ ಗ್ರಾಮೀಣ ಭಾಗದ ಮಹಿಳೆಯರು Menstrual Cup ಬಳಕೆ ಹೆಚ್ಚು ಮಾಡುವಂತೆ ಪ್ರೋತ್ಸಾಹಿಸಲಾಗುವುದು ಎಂದು ಹೇಳಲಾಗಿದೆ
ಮೊದಲು ಪ್ರೇರಣಾ(Prerana) ಕಾರ್ಯಕ್ರಮದಡಿ Menstrual Cup ಉಪಯೋಗಿಸುವಂತೆ ಸ್ವಸಹಾಯ, ಗ್ರಾಮ ಪಂಚಾಯ್ತಿಯ ಮಹಿಳಾ ಸದಸ್ಯರಿಗೆ ತಿಳಿಸಲಾಗುವುದು. ಪ್ರೇರಣಾ ಕಾರ್ಯಕ್ರಮದಡಿ ಸ್ವಸಹಾಯ ಗುಂಪುಗಳ ಮಹಿಳೆಯರು, ಗ್ರಾಮ ಪಂಚಾಯಿತಿಗಳ ಮಹಿಳಾ ಸದಸ್ಯರು ಹಾಗೂ ಗ್ರಾಮೀಣ ಪ್ರದೇಶದ ಮುಂಚೂಣಿಯ ಕಾರ್ಯಕರ್ತೆಯರಲ್ಲಿ Menstrual Cup ಬಳಕೆಗೆ ಪ್ರೋತ್ಸಾಹಿಸಲಾಗುತ್ತದೆ. ನಂತರ ಇವರ ಮೂಲಕ ಗ್ರಾಮದ ಇತರೆ ಮಹಿಳೆಯರು ಕೂಡ Menstrual Cup ಬಳಕೆ ಮಾಡುವಂತೆ ಪ್ರೇರೇಪಿಸಲಾಗುವುದು ಎಂದು ಬಜೆಟ್ನಲ್ಲಿ ಹೇಳಲಾಗಿದೆ.