JANATAA24 NEWS DESK
Gundlupete: ಅಕ್ರಮ ರಸಗೊಬ್ಬರ ದಾಸ್ತಾನು ಸೂಕ್ತ ತನಿಖೆಗೆ ರೈತ ಮುಖಂಡರ ಆಗ್ರಹ
ಗುಂಡ್ಲುಪೇಟೆ: ತಾಲ್ಲೂಕಿನ ಶಿವಪುರ ಗ್ರಾಮದ ಹೊರವಲಯದ ಜಮೀನಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ರಸಗೊಬ್ಬರ ಪ್ರಕರಣ ಸೂಕ್ತ ತನಿಖೆಯಾಗಬೇಕು ಎಂದು ರೈತ ಮುಖಂಡ ಕಡಬೂರು ಮಂಜು ಆಗ್ರಹಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಮಂಜು ಕೇಂದ್ರ ಸರ್ಕಾರ ರೈತನಿಗೆ ಅನೂಕೂಲವಾಗುವ ದೃಷ್ಟಿಯಿಂದ 1500ರೂಪಾಯಿಗು ಹೆಚ್ಚು ಬೆಲೆಯ ರಸಗೊಬ್ಬರವನ್ನ ರೈತರಿಗೆ ಸಬ್ಸಿಡಿಯಲ್ಲಿ ಕಡಿಮೆ ಬೆಲೆಗೆ ನೀಡುವ ವ್ಯವಸ್ಥೆ ಇದೇ ಆದರೆ ಈ ಗೊಬ್ಬರವನ್ನು ಶಿವಪುರ ಗ್ರಾಮದ ಜಮೀನಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿ ಹೆಚ್ಚಿನ ದರಕ್ಕೆ ಅಂತರರಾಜ್ಯಗಳಿಗೆ ಮಾರಾಟ ಮಾಡುವ ಜಾಲದ ಶಂಕೆಯಿದೆ ಇದನ್ನು ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರನ್ನು ಬಂಧಿಸುವಂತೆ ಒತ್ತಾಯಿಸಿದರು.
ಶಾಸಕರ ಬೆಂಬಲಿಗನ ಪಾತ್ರ: ಅಕ್ರಮವಾಗಿ ಶೇಖರಣೆ ಮಾಡಿದ ಸ್ಥಳಕ್ಕೆ ಪೋಲಿಸ್ ಇಲಾಖೆಯ ದಾಳಿ ಮಾಡಿದ ಸಂಧರ್ಭದಲ್ಲಿ ಶಾಸಕನ ಆಪ್ತ ಕಲ್ಲಿಗೌಡನಹಳ್ಳಿ ಗ್ರಾಮದ ಸುರೇಶ್ ಎಂಬುವನು ಸ್ಥಳದಲ್ಲೇ ಇದ್ದಿದ್ದು ಯಾಕೆ ಇಲಾಖೆಯ ಅಧಿಕಾರಿಗಳನ್ನ ಹೊರತುಪಡಿಸಿ ಅನ್ಯವ್ಯಕ್ತಿಗೆ ಅಲ್ಲಿ ಏನು ಕೆಲಸ , ಯಾಕೇ ಅವರ ಖಾತೆಗೆ ಡಿಜಿಟಲ್ ಪೇ ಮುಖಾಂತರ 50000ಸಾವಿರ ಯಾವ ಉದ್ದೇಶಕ್ಕಾಗಿ ಸಂದಾಯವಾಯಿತು ಎನ್ನುವುದರ ಬಗ್ಗೆ ಸೂಕ್ತ ಕೂಲಂಕುಷವಾಗಿ ಪಾರದರ್ಶಕವಾಗಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಪೋಲಿಸ್ ಇಲಾಖೆ ಪ್ರಕರಣ ಮುಚ್ಚಿ ಹಾಕಲು ಹಣ ಸಂದಾಯ ಮಾಡಿರುವ ವ್ಯಕ್ತಿಯನ್ನು ಬಂಧಿಸುವ ಬದಲಿಗೆ ಜಮೀನಿನ ಮಾಲೀಕ ಮತ್ತು ತೆಗೆದುಕೊಳ್ಳಲು ಬಂದಿದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿದ್ದಾರೆ ,ಇಷ್ಟು ದೊಡ್ಡ ಮಟ್ಟದಲ್ಲಿ ರಸಗೊಬ್ಬರ ದಾಸ್ತಾನು ಮಾಡಿರುವ ರಸಗೊಬ್ಬರ ಎಲ್ಲಿಂದ ಬಂದಿದೆ ಮತ್ತು ರೈತರಿಗೆ ಸಮರ್ಪಕವಾಗಿ ಪೂರೈಕೆ ಮಾಡುವ ಬದಲು ಇಲ್ಲಿ ಅಕ್ರಮವಾಗಿ ಶೇಖರಣೆ ಮಾಡಿ ಹೊರ ರಾಜ್ಯಗಳಿಗೆ ಮಾರುವ ಜಾಲವನ್ನು ಪತ್ತೆಹಚ್ಚಬೇಕು ಎಂದರು. ಶಾಸಕರ ಬೆಂಬಲಿಗರೆ ನೇರವಾಗಿ ಪ್ರಕರಣ ಮುಚ್ಚಿಹಾಕುವ ಪ್ರಯತ್ನವನ್ನು ಮಾಡುತಿದ್ದರು ಇದಕ್ಕೆ ಶಾಸಕರು ಮೌನವಹಿಸಿ ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಘಟನೆಗೆ ಪೋಲಿಸ್ ಇಲಾಖೆ, ಶಾಸಕರು ಮತ್ತು ಸಂಸದರು ಸ್ಪಂದಿಸದೆ ಹೋದರೆ ರಾಜ್ಯ ರೈತಸಂಘದ ಅಧ್ಯಕ್ಷ ಬಸವರಾಜಪ್ಪರವರ ನೇತ್ರತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ಇದೇ ತಿಂಗಳ 10ರಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಸವರಾಜಪ್ಪನವರು ಕೋಟೆಕೆರೆ ಗ್ರಾಮದ ಕೆರೆಗೆ ಬಾಗಿನ ಅರ್ಪಿಸಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಡ್ರಹಳ್ಳಿ ಮಹದೇವಪ್ಪ, ತಾಲ್ಲೂಕು ಸಂಚಾಲಕ ಹಾಲಹಳ್ಳಿ ಮಹೇಶ್, ಅಣ್ಣೂರುಕೇರಿ ರಘು ಹಾಜರಿದ್ದರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en https://youtube.com/@janataa24?si=XsFcych2GMH0O6Gv https://www.janataa24.com/turuvekere-protesting-against-stone-mining/ https://www.janataa24.com/iasipskas-who-stood-as-the-godfather-of-the/ https://www.janataa24.com/miscreants-uprooted-40-coconut-trees-turuvekere/ https://youtu.be/ioBwxkXfLqo?si=i1AACfgQuqhFUQV0 https://www.janataa24.com/operation-sindor-pok-9-terrorist/