Document

Gundlupet: ಬಿಜೆಪಿ ಸರ್ಕಾರದಲ್ಲಿ ಸಹಾಯ ಕೇಳಿದರೆ, ಕಪಾಳಮೋಕ್ಷ ಉಚಿತ

Gundlupet: ಬಿಜೆಪಿ ಸರ್ಕಾರದಲ್ಲಿ ಸಹಾಯ ಕೇಳಿದರೆ, ಕಪಾಳಮೋಕ್ಷ ಉಚಿತ

 

ಗುಂಡ್ಲುಪೇಟೆ: ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆದ ನಿವೇಶನದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ನಡೆದ ಘಟನೆ. ಈ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ನಮಗೆ ನಿವೇಶನವಿದೆ ಹಕ್ಕುಪತ್ರ ನೀಡಿ ಸ್ವಾಮಿ ಎಂದು ಅಂಗಲಾಚಿಕಾಲಿಗೆ ಬಿದ್ದುಕೊಂಡು ಕೇಳಿಕೊಂಡಾಗ ಬಾವೋದ್ವೇಗದಿಂದ ಚಾಮರಾಜನಗರದ ಉಸ್ತುವಾರಿ ಸಚಿವ ವಿ ಸೋಮಣ್ಣ ಮಹಿಳೆಗೆ ಕಪಾಲಮೋಕ್ಷ ಮಾಡಿರುವ ಘಟನೆ ನಡೆದಿದೆ. ಇದನ್ನು ತೀವ್ರವಾಗಿ ಖಂಡಿಸಿದ ಜೆಡಿಎಸ್ ಪಕ್ಷದ ವಕ್ತರರಾದ ಎನ್ ರಾಜುಗೌಡ ರವರು ಮಾಧ್ಯಮದವರೊಂದಿಗೆ ಮಾತನಾಡಿ ತಮ್ಮ ಕಷ್ಟವನ್ನು ಹೇಳಿಕೊಳ್ಳಲು ಜನಪ್ರತಿನಿಧಿಗಳ ಹತ್ತಿರ ಹೋದರೆ ಈ ರೀತಿ ಮಹಿಳೆಗೆ ಕಪಾಳ್ಯ ಮೋಕ್ಷ ಮಾಡಿರುವ ಘಟನೆಯನ್ನು ನಾಗರಿಕ ಸಮಾಜ ಒಪ್ಪುವುದಿಲ್ಲ ಇದನ್ನು ಖಂಡಿಸುತ್ತೇವೆ. ರಾಜ್ಯದಲ್ಲಿ ಬಿಜೆಪಿಯವರು ಒಂದು ಕಡೆ ಹೇಳುತ್ತಿದ್ದಾರೆ ನಮ್ಮದು ಶಿಸ್ತಿನ ಪಕ್ಷ ಸಂಸ್ಕೃತಿಯನ್ನು ಉಳಿಸುತ್ತೇವೆ ಎಂದು ಇನ್ನೊಂದು ಕಡೆ ಉಸ್ತುವಾರಿ ಸಚಿವ ವಿ ಸೋಮಣ್ಣ ತಮ್ಮ ಕಷ್ಟವನ್ನು ಹೇಳಿಕೊಳ್ಳಲು ಮುಂದಾದ ಮಹಿಳೆಗೆ ಕಪಾಲಮೋಕ್ಷ ಮಾಡಿರುವುದು ಎಷ್ಟರಮಟ್ಟಿಗೆ ಸರಿ ಇದೇನಾ ನಿಮ್ಮ ಸಂಸ್ಕೃತಿ ಎಂದು ಎನ್ ರಾಜುಗೌಡ ರವರು ಮಾಧ್ಯಮದ ಮೂಲಕ ಸಚಿವ ವಿ ಸೋಮಣ್ಣನವರಿಗೆ ತಿಳಿಸಲಾಗಿದೆ.

Document

Leave a Reply

Your email address will not be published. Required fields are marked *