Document

Gubbi: ಬಡವರ ಪರವಾದ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಸರ್ಕಾರ ನೀಡಿದೆ.

Janataa24 NEWS DESK

 

Gubbi: ಬಡವರ ಪರವಾದ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಸರ್ಕಾರ ನೀಡಿದೆ- ಶಾಸಕ ಎಸ್ಆರ್ ಶ್ರೀನಿವಾಸ್

congress government has given pro poor programs6415004382925468288



ಗುಬ್ಬಿ: ಬಡವರ ಪರವಾದ ಕಾರ್ಯಕ್ರಮಗಳನ್ನು ಕಾಂಗ್ರೆಸ್(Congress) ಸರ್ಕಾರ ನೀಡಿದೆ ಎಂದು ಕೆ ಎಸ್ ಆರ್ ಟಿ ಸಿ(KSRTC) ನಿಗಮ ಮಂಡಳಿ ಅಧ್ಯಕ್ಷ ಶಾಸಕ ಎಸ್ಆರ್ ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಚೇಳೂರು ಹೋಬಳಿಯ ಸಿ ನಂದಿಹಳ್ಳಿ ಗ್ರಾಮದಲ್ಲಿ 100 ಲಕ್ಷ ರೂಗಳ  ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು,  ಶ್ರೀಮಂತರು ಸಾವಿರಾರು ಕೋಟಿ ರೂ ಸಾಲ ಮಾಡಿ ದೇಶ ಬಿಟ್ಟು ಹೋದರು.  ಕೇವಲ ಶ್ರೀಮಂತರ ಸಾಲ ಮನ್ನಾ ಮಾಡಿದ್ದು ಸಾಧನೆ ಬಿಟ್ಟರೆ  ದೇಶದಲ್ಲಿ ರೈತರ ಬಡವರ ವಿಚಾರದಲ್ಲಿ  ಬಿಜೆಪಿ ಸರ್ಕಾರದ ಸಾಧನೆ ಶೂನ್ಯ.

 



ಮೋದಿಯಿಂದ ದೇಶದ ಸಾಲ ಏರಿಕೆಯಾಗಿದೆ  ಹೊರತು ಯಾವುದೇ ಅಭಿವೃದ್ಧಿ ಪರವಾದ ಕೆಲಸಗಳು ನಡೆದಿಲ್ಲ ಚುನಾವಣೆ ಸಂದರ್ಭದಲ್ಲಿ  ಜಾತಿ ಧರ್ಮಗಳ ನಡುವೆ ಹತ್ತಿಕ್ಕಿ ಚುನಾವಣೆ ಮಾಡುವುದು ಬಿಜೆಪಿಯ ಕೆಲಸ   ಕೇವಲ ಜಾತಿ ಲೆಕ್ಕಾಚಾರದಲ್ಲಿ ಯಾರು ಸಹ ರಾಜಕೀಯ ಮಾಡಲು ಆಗುವುದಿಲ್ಲ ತುಮಕೂರು  ಕ್ಷೇತ್ರದ ಜನ ಸ್ಥಳೀಯರನ್ನು ಬಿಟ್ಟರೆ  ಹೊರಗಿನವರಿಗೆ ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದರು.

 




ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷ ಐಜಿ ಲಿಂಗರಾಜು,ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಸದಸ್ಯರಾದ ಬಸವರಾಜು, ಗಂಗಾಧರ್, ಸಿದ್ದರಾಜು, ಪುಟ್ಟರಾಜು,ಮಂಜುಳಾ, ಮೃತ್ಯುಂಜಯಪ್ಪ, ಕಂಟ್ರಾಕ್ಟರ್ ಪ್ರದೀಪ್, ಮುಖಂಡರಾದ ರೇಣುಕಾರಾಧ್ಯ, ರಮೇಶ್, ರಾಜಣ್ಣ, ಹನುಮಂತರಾಯಪ್ಪ, ಮುಂತಾದವರಿದ್ದರು.

 

ವರದಿ: ಶ್ರೀಕಾಂತ್ ಗುಬ್ಬಿ

 

 

https://www.janataa24.com/swami-japananda-swami-is-saving-life-by-giving-water-to-the-dumb-creatures/



ಕೆಳಗಿನ #ಲಿಂಕ್ ಬಳಸಿ #ಜನತಾ24   #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube
https://youtube.com/@janataa24?si=XsFcych2GMH0O6Gv

Document

Leave a Reply

Your email address will not be published. Required fields are marked *