Document

Gubbi: ಶೀಘ್ರದಲ್ಲಿ ಕಾಡು ಗೊಲ್ಲರನ್ನು ಎಸ್ಟಿ ಪಟ್ಟಿಗೆ ಸೇರ್ಪಡೆ–ಕೇಂದ್ರ ಸಚಿವ ವಿ.ಸೋಮಣ್ಣ.

JANATAA24 NEWS DESK 

 

 

Gubbi: ಶೀಘ್ರದಲ್ಲಿ ಕಾಡು ಗೊಲ್ಲರನ್ನು ಎಸ್ಟಿ ಪಟ್ಟಿಗೆ ಸೇರ್ಪಡೆ–ಕೇಂದ್ರ ಸಚಿವ ವಿ.ಸೋಮಣ್ಣ.
Gubbi Wild Gollas will be included in the ST list soon – Union Minister V. Somanna

ಗುಬ್ಬಿ: ವಿಶಿಷ್ಟ ಆಚರಣೆ ಸಂಪ್ರದಾಯದ ಮೂಲಕ ಬುಡಕಟ್ಟು ಮೂಲದ ಕಾಡು ಗೊಲ್ಲ ಜನಾಂಗವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರ ಎಲ್ಲಾ ತಯಾರಿ ನಡೆಸಿದೆ. ಶೀಘ್ರದಲ್ಲಿ ಕಾಡು ಗೊಲ್ಲರನ್ನು ಎಸ್ಟಿ(ST) ಮೀಸಲು ಪಟ್ಟಿಗೆ ಸೇರ್ಪಡೆ ಮಾಡಲಾಗುವುದು ಎಂದು ಕೇಂದ್ರದ ರೈಲ್ವೆ ಸಚಿವ ವಿ.ಸೋಮಣ್ಣ ತಿಳಿಸಿದರು.

 

ತಾಲ್ಲೂಕಿನ ಸೋಮಲಾಪುರ, ಬಿಳಿಗೆರೆ, ಕಂಬೇರಹಟ್ಟಿ, ಹೊಸಹಟ್ಟಿ, ಮೂಡಲಪಾಳ್ಯ ಹಾಗೂ ಜುಂಜಪ್ಪನಹಟ್ಟಿ ಗ್ರಾಮಗಳಲ್ಲಿ ಕಿರ್ಲೋಸ್ಕರ್ ಸಂಸ್ಥೆಯ ಸಿಎಸ್ ಆರ್ ನಿಧಿಯಿಂದ ಶುದ್ಧ ನೀರಿನ ಘಟಕವನ್ನು ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಅಮಿತ್ ಷಾ ಅವರೊಂದಿಗೆ ಎಸ್ಟಿ ಮೀಸಲು ಬಗ್ಗೆ ಚರ್ಚಿಸಿದ್ದೇನೆ. ಪ್ರಧಾನಮಂತ್ರಿಗಳು ಸಹ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಹತ್ತು ತಿಂಗಳಲ್ಲಿ ಕಾಡು ಗೊಲ್ಲರಿಗೆ ಸಿಹಿಸುದ್ದಿ ಸಿಗಲಿದೆ ಎಂದರು.

 

ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಅವಶ್ಯವಿಲ್ಲ. ಯಾವ ಪಕ್ಷದ ಶಾಸಕರಾದರೂ ಅವರೊಂದಿಗೆ ನಾನೇ ಖುದ್ದು ಚರ್ಚಿಸಿ ಕೆಲಸ ನಡೆಸಿದ್ದೇನೆ. ಜಿಲ್ಲೆಯ ಅಭಿವೃದ್ದಿ ಜೊತೆಗೆ ಜನರ ಮೂಲಭೂತ ಸವಲತ್ತು ಒದಗಿಸುವ ಕೆಲಸ ಬಹಳ ಮುಖ್ಯವಾಗಿದೆ. ಈ ಬಗ್ಗೆ ಪ್ರಧಾನಮಂತ್ರಿ ಮೋದಿ ಅವರೇ ಮಾರ್ಗದರ್ಶನ ನೀಡಿದ್ದಾರೆ ಎಂದ ಅವರು ಗುಬ್ಬಿ ತಾಲ್ಲೂಕಿನಲ್ಲಿ ಸಾಕಷ್ಟು ಕೆಲಸವನ್ನು ಹುಡುಕಿ ಮಾಡುತ್ತಿದ್ದೇನೆ. ರೈಲ್ವೆ, ಹೆದ್ದಾರಿ ಸೇರಿದಂತೆ ಹಳ್ಳಿಗಾಡಿನ ಜನರ ಬದುಕಿಗೆ ಅತ್ಯವಶ್ಯ ವ್ಯವಸ್ಥೆ ಮಾಡುತ್ತಿದ್ದೇನೆ. ಈ ವಿಚಾರದಲ್ಲಿ ಶಾಸಕರೂ ಸಹ ಸಾಥ್ ನೀಡಿದ್ದಾರೆ ಎಂದರು.

 

ಟಯೋಟಾ ಕಿರ್ಲೋಸ್ಕರ್ ಕಂಪೆನಿ ದೇಶದ ಉನ್ನತ ಉದ್ಯಮ ಕಂಪೆನಿ ಎನಿಸಿದೆ. ಅಲ್ಲಿ 16 ಸಾವಿರ ಉದ್ಯೋಗಿಗಳು ಕನ್ನಡಿಗರು ಎಂಬುದು ನಮ್ಮ ಹೆಮ್ಮೆ. ಅಲ್ಲಿನ ಸಿ ಎಸ್ ಆರ್ ಫಂಡ್ ಗೊಲ್ಲರ ಹಟ್ಟಿಗಳಿಗೆ ನೀರು ಒದಗಿಸುವ ಕೆಲಸಕ್ಕೆ ಬಳಸಲಾಗಿದೆ. ಕೆಲ ಹಟ್ಟಿಗಳಿಗೆ ರಸ್ತೆ ಅಭಿವೃದ್ಧಿ ಮಾಡುವ ಕೆಲಸಕ್ಕೂ ಅನುದಾನ ನೀಡಿದ್ದೇನೆ. ಈಗಾಗಲೇ 33 ಕೋಟಿ ರೂ ಕೆಲಸಗಳಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದ ಅವರು ಸಿದ್ಧಗಂಗಾ ಶ್ರೀಗಳು ಓದಿದ ನಾಗವಲ್ಲಿ ಶಾಲೆಗೆ ಎರಡು ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದರು.

 

ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ ಲೋಕಸಭಾ ಸದಸ್ಯರು ಎಷ್ಟೆಲ್ಲಾ ಕೆಲಸ ಮಾಡಲು ಸಾಧ್ಯ ಎಂಬುದು ಸೋಮಣ್ಣ ಅವರು ರುಜುವಾತು ಮಾಡಿದ್ದಾರೆ. ಚುನಾವಣೆ ಹೊರತಾಗಿ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಅಭಿವೃದ್ದಿ ಕೆಲಸ ಮಾಡಿದ ಸೋಮಣ್ಣ ಅವರ ನಡೆ ಶ್ಲಾಘನೀಯ. ಈ ಹಿಂದೆ ಸಂಸದರಾಗಿದ್ದ ಬಸವರಾಜು ಅವರೊಂದಿಗೆ ಕಿತ್ತಾಟ ನಡೆಸುತ್ತಲೇ 25 ವರ್ಷ ಯಾವ ಕೆಲಸ ಮಾಡಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ಕಂದಾಚಾರದಿಂದ ಹೊರ ಬಂದು ನಾಗರೀಕ ಸಮಾಜದಲ್ಲಿ ಬದುಕು ನಡೆಸಬೇಕು. ಹೊಸತನ ಕಾಣಲು ಬದಲಾವಣೆ ನೋಡಲು ಮೊದಲು ಶಿಕ್ಷಣಕ್ಕೆ ಒತ್ತು ನೀಡಬೇಕು. ನಂತರ ಸಾಮಾಜಿಕ ಸಮಾನತೆ ಸಾಧಿಸುತ್ತೀರಿ. ಆರ್ಥಿಕ, ರಾಜಕೀಯ ಶಕ್ತಿ ಸಹ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಬದಲಾವಣೆಗೆ 60 ಕೋಟಿ ಈವರೆವಿಗೆ ಗೊಲ್ಲರ ಹಟ್ಟಿಗಳನ್ನೇ ಗುರಿಯಾಗಿಸಿ ಅಭಿವೃದ್ದಿ ಕೆಲಸ ಮಾಡಿದ್ದೇನೆ ಎಂದರು.

 

ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಕಾಡು ಗೊಲ್ಲ ಸಮಾಜದ ರಾಜ್ಯಾಧ್ಯಕ್ಷ ರಾಜಣ್ಣ, ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್, ಜೆಡಿಎಸ್ ಮುಖಂಡರಾದ ಬಿ.ಎಸ್.ನಾಗರಾಜು, ಜಿ.ಎನ್.ಬೆಟ್ಟಸ್ವಾಮಿ, ಕಳ್ಳಿಪಾಳ್ಯ ಲೋಕೇಶ್, ದಿಶಾ ಸಮಿತಿಯ ವೈ.ಎಚ್.ಹುಚ್ಚಯ್ಯ, ಡಾ.ನಾವ್ಯಾಬಾಬು, ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು, ಸೇರಿದಂತೆ ಇತರರು ಹಾಜರಿದ್ದರು.

 

ವರದಿ : ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

https://www.janataa24.com/iasipskas-who-stood-as-the-godfather-of-the/

 

 

https://www.janataa24.com/miscreants-uprooted-40-coconut-trees-turuvekere/

 

 

https://www.janataa24.com/operation-sindor-pok-9-terrorist/

 

Document

Leave a Reply

Your email address will not be published. Required fields are marked *