Janataa24 NEWS DESK
Gubbi: ಇಂಗ್ಲೆಂಡ್ ದೇಶದಲ್ಲಿ ಜನಿಸಿದ್ದರೆ ಚಾರ್ಲಿ ಚಾಪ್ಲಿನ್ ಮೀರಿಸುತ್ತಿದ ನರಸಿಂಹರಾಜು– ನಾಟಕ ಅಕಾಡೆಮಿ ಅಧ್ಯಕ್ಷ ಕೆ ವಿ ನಾಗರಾಜಮೂರ್ತಿ.

ಗುಬ್ಬಿ : ದಿವಂಗತ ಹಾಸ್ಯ ನಟ ನರಸಿಂಹರಾಜು ಅವರು ಇಂಗ್ಲೆಂಡ್ ದೇಶದಲ್ಲಿ ಏನಾದರೂ ಜನಿಸಿದ್ದರೆ ಹಾಸ್ಯ ನಟನೆಯಲ್ಲಿ ಚಾರ್ಲಿ ಚಾಪ್ಲಿನ್ ಅವರನ್ನೇ ಮೀರಿಸುತ್ತಿದ್ದರು ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ ವಿ ನಾಗರಾಜಮೂರ್ತಿ ತಿಳಿಸಿದರು.
ಪಟ್ಟಣದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಹಾಸ್ಯ ಬ್ರಹ್ಮ ನರಸಿಂಹರಾಜು ಶತಮಾನೋತ್ಸವ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು
ಕನ್ನಡ ಚಿತ್ರರಂಗ ಹಾಸ್ಯ ನಟ ನರಸಿಂಹರಾಜು ಅವರ ಜನ್ಮ ಶತಮಾನೋತ್ಸನ್ನು ಆಚರಿಸದೆ ಇರುವುದು ವಿಪರ್ಯಾಸವೇ ಸರಿ ಎಂದು ಬೇಸರ ವ್ಯಕ್ತಪಡಿಸಿದ್ದರು.
ಜಿ ವಿ ಅಯ್ಯರ್, ನರಸಿಂಹರಾಜು, ಬಾಲಕೃಷ್ಣ ಅವರು ಕನ್ನಡ ರಂಗಭೂಮಿಗೆ ಸುಗಮ ಸುಖವಾದ ಉತ್ತಮ ಹಾಸ್ಯ ಸಂಸ್ಕೃತಿಯನ್ನು ತಂದುಕೊಟ್ಟವರು. ಪ್ರಸ್ತುತ ದಿನಗಳಲ್ಲಿ ಕಪಿ ಚೇಷ್ಟೆ, ಅಶ್ಲೀಲ ವಿಚಾರ, ಕೆಟ್ಟ ಹಾಸ್ಯ ಸಂಭಾಷಣೆಯನ್ನೆ ಹಾಸ್ಯ ಎಂದುಕೊಂಡಿದ್ದಾರೆ. ಬಿಗ್ ಬಾಸ್ ನಲ್ಲಿ ಮಾಡುವ ಕೆಟ್ಟ ಕುಲಗೆಟ್ಟ ಹಾಸ್ಯಗಳನ್ನು ನೋಡಿದಾಗ ಈ ದಿನಗಳಲ್ಲಿ ಹಾಸ್ಯನಟ ನರಸಿಂಹರಾಜು ಅವರು ಪ್ರಸ್ತುತ ಎನಿಸುತ್ತಾರೆ.
ಬಾಲಕೃಷ್ಣ, ನರಸಿಂಹರಾಜು ಅವರು ಸೃಜನಶೀಲ ಸ್ವಯಂ ಪ್ರತಿಭೆಯಿಂದ ಹಾಸ್ಯ ಮಾಡುತ್ತಿದ್ದರು ಅಂದಿನ ಸಂದರ್ಭದಲ್ಲಿ ಆ ಪ್ರಸಂಗಗಳಿಗೆ ಅನುಕೂಲವಾಗುವಂತೆ ಹಾಸ್ಯ ಮಾಡುತ್ತಿದ್ದರು. ಇಂದಿನ ಕಥೆಗಳಲ್ಲಿ ಹಾಸ್ಯ ಮಾಡುವುದಕ್ಕೂ ಮೂಲ ಕಥೆಗೂ ಸಂಬಂಧವೇ ಇರುವುದಿಲ್ಲ. ಉತ್ತಮ ಹಾಸ್ಯದಿಂದ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು
ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ರವೀಂದ್ರ ಸಿರಿವರ ಮಾತನಾಡಿ ದಿವಂಗತ ನರಸಿಂಹರಾಜು ಅವರು ಕನ್ನಡ ಚಿತ್ರರಂಗದ ಮೇರು ಹಾಸ್ಯ ನಟರಾಗಿದ್ದರು. ನರಸಿಂಹರಾಜು ಅವರ ಹಾಸ್ಯ ನಟನೆ ಉತ್ತುಂಗದಲ್ಲಿದ್ದಾಗ ಡಾ ರಾಜಕುಮಾರ್ ಕಾಲ್ ಶೀಟ್ ಪಡೆಯುವ ಮೊದಲು ನರಸಿಂಹರಾಜು ಅವರ ಕಾಲ್ ಶೀಟ್ ಪಡೆಯುತ್ತಿದ್ದರು. ಇಂಥ ಒಬ್ಬ ಮೇರು ಹಾಸ್ಯನಟ ರಂಗಭೂಮಿಯಿಂದ ಬಂದವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಾಟಕೋತ್ಸವ ಸಂಚಾಲಕ ಉಗಮ ಶ್ರೀನಿವಾಸ್, ರಾಜೇಶ್ ಗುಬ್ಬಿ ಉಪಸ್ಥಿತರಿದ್ದರು.
ವರದಿ:ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.