Document

Gubbi :ನಲ್ಲೂರು ನೂತನ ಗ್ರಾ, ಪಂ, ಉಪಾಧ್ಯಕ್ಷರಾಗಿ ಮೈಲಾರಯ್ಯ ಅವಿರೋಧ ಆಯ್ಕೆ

Janataa24 NEWS DESK

Gubbi :ನಲ್ಲೂರು ನೂತನ ಗ್ರಾ, ಪಂ, ಉಪಾಧ್ಯಕ್ಷರಾಗಿ ಮೈಲಾರಯ್ಯ ಅವಿರೋಧ ಆಯ್ಕೆ

Gubbi

ಗುಬ್ಬಿ: ತಾಲೂಕಿನ ಚೇಳೂರು ಹೋಬಳಿ ನಲ್ಲೂರು ಗ್ರಾ. ಪಂ. ಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಗಂಗಣ್ಣ ರಾಜೀನಾಮೆ ನೀಡಿ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಸರ್ವಸದಸ್ಯರ ಒಪ್ಪಿಗೆಯ ಮೇರೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೈಲಾರಯ್ಯ ಎಂ ಎಸ್, ಅವಿರೋಧ ಆಯ್ಕೆಯಾಗಿದ್ದಾರೆ.

ನೂತನ ಉಪಾಧ್ಯಕ್ಷರಾದ ಮೈಲಾರಯ್ಯ ಮಾತನಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ರಸ್ತೆ ಚರಂಡಿ ಅಂಗನವಾಡಿ ಶಾಲಾ ಕಟ್ಟಡಗಳಿಗೆ ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತೇನೆ. ಬಿರು ಬೇಸಿಗೆಯಾದ ಹಿನ್ನೆಲೆಯಲ್ಲಿ ಜನಜಾನುವಾರುಗಳಿಗೆ ಕುಡಿಯುವ ನೀರಿಗೆ ಪೂರಕವಾಗುವಂತೆ ಶಾಸಕರ ಅನುದಾನ ತಂದು ಕೊಳವೆಬಾವಿ ಹಾಗೂ ಹೆಚ್ಚಿನ ಅಗತ್ಯವಿದ್ದರೆ ಟ್ಯಾಂಕರ್ ಮೂಲಕ ನೀರನ್ನು ಗ್ರಾಮಗಳಿಗೆ ಒದಗಿಸುವ ಕೆಲಸ ಮಾಡುತ್ತೇನೆ.

ಸ್ಥಳೀಯ ಶಾಸಕ ಎಸ್ ಆರ್ ಶ್ರೀನಿವಾಸ್ ರವರಿಂದ ಹೆಚ್ಚಿನ ಅನುದಾನ ತಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಒಟ್ಟಾರೆಯಾಗಿ ಕೆಲಸ ಮಾಡುತ್ತೇವೆ. ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ ಸರ್ವ ಸದಸ್ಯರಿಗೆ ಹೃದಯಪೂರ್ವಕ ಅಭಿನಂದನೆಗನ್ನು ತಿಳಿಸಿದರು.

ಅಧ್ಯಕ್ಷೆ ವತ್ಸಲ ಕುಮಾರ್ ಮಾತನಾಡಿ ನೂತನ ಉಪಾಧ್ಯಕ್ಷ ಸ್ಥಾನಕ್ಕೆ ಮೈಲಾರಯ್ಯ ಎಂ ಎಸ್ ಅವಿರೋಧ ಆಯ್ಕೆ ಆಗಿರುವುದು ತುಂಬ ಸಂತೋಷದ ವಿಷಯವಾಗಿದೆ. ಬೇಸಿಗೆಯಾದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಕೊರತೆ ಬಾರದಂತೆ ಅಭಿವೃದ್ಧಿ ಕಾರ್ಯಕ್ಕೆ ಅಡಚಣೆ ಬಾರದಂತೆ ಸರ್ವ ಸದಸ್ಯರು ಹಾಗೂ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಜೊತೆಗೂಡಿ ಶಾಸಕ SR ಶ್ರೀನಿವಾಸ್ (SR Srinivas) ರವರ ಮಾರ್ಗದರ್ಶನದಲ್ಲಿ ನಲ್ಲೂರು ಗ್ರಾ, ಪಂ, ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಸದಾ ಶ್ರಮಿಸುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಂಜುಳಾ, ಗ್ರಾ ಪಂ,ಸದಸ್ಯರಾದ ಗಂಗಣ್ಣ, ಶಾಂತಲ, ಕರಿಯಮ್ಮ, ಶೃತಿ ಕೆ ಆರ್, ರೇಣುಕಮ್ಮ, ಆನಂದಯ್ಯ, ಪುಟ್ಟಮ್ಮ, ರಾಜಣ್ಣ,ಮುಖಂಡರಾದ ನಾಗರಾಜು ಪಟೇಲ್, ದೊಡ್ಡಯ್ಯ, ಬಸವರಾಜು, ಷಣ್ಮುಖ ಕುಮಾರ್, ಸೇರಿದಂತೆ ಇತರರು ಹಾಜರಿದ್ದರು.

ವರದಿ: ಶ್ರೀಕಾಂತ್ ಗುಬ್ಬಿ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

Interpol: ಮೆಡಿಕೇರ್ ಹೆಸರಲ್ಲಿ ಡ್ರಗ್ಸ್ ಉತ್ಪಾದನಾ ಘಟಕ,9 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ.

Document

Leave a Reply

Your email address will not be published. Required fields are marked *