Janataa24 NEWS DESK
Gubbi: ಮೈತ್ರಿ ಅಭ್ಯರ್ಥಿ ವಿ ಸೋಮಣ್ಣ ಗೆಲುವು ಖಚಿತ- ಬಿ ಎಸ್ ನಾಗರಾಜು.
ಗುಬ್ಬಿ: ದೇಶದ ಉಜ್ವಲ ಭವಿಷ್ಯಕ್ಕಾಗಿ ಜೆ ಡಿ ಎಸ್. ಪಕ್ಷವು ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ ಜೆ ಡಿ ಎಸ್ ಪಕ್ಷದ ವರಿಷ್ಠರ ನಿರ್ಧಾರದಂತೆ ಮೈತ್ರಿ ಧರ್ಮವನ್ನು ಪಾಲಿಸಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ(V Somanna)ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಜಯಶಾಲಿಯನ್ನಾಗಿಸೋಣ ಎಂದು ಕಾರ್ಯಕರ್ತರಿಗೆ ಜೆಡಿಎಸ್ ಮುಖಂಡ ಬಿಎಸ್ ನಾಗರಾಜು(BS Nagaraju) ತಿಳಿಸಿದರು.
ಪಟ್ಟಣದ ಬಾವಿಮನೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜೆ ಡಿ ಎಸ್ ಕಾರ್ಯಕರ್ತ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷವು ಮೈತ್ರಿ ಆಗಿರುವುದರಿಂದ ಈ ಬಾರಿ ತುಮಕೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರ ಗೆಲುವು ನಿಶ್ಚಿತ ವಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾಲೂಕಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಒಟ್ಟು ಪಡೆದ ಮತಗಳು 1 ಲಕ್ಷಕ್ಕೂ ಅಧಿಕವಾಗಿದೆ.
ಹಾಗಾಗಿ ಸೋಮಣ್ಣ ಗೆಲುವು ನಿಶ್ಚಿತವಾಗಿದೆ.
ತಾಲೂಕಿನಲ್ಲಿ ಕಾಣುತ್ತಿರುವ ನೀರಾವರಿ ಸಮಸ್ಯೆ ಹಾಗಲವಾಡಿ ಹಾಗೂ ಮಠದ ಹಳ್ಳಕೆರೆಗೆ ಹೇಮಾವತಿ ನೀರನ್ನು ಹರಿಸುವ ಯೋಜನೆ ಮೈತ್ರಿ ಸಂಸದರಿಂದ ಪೂರ್ಣಗೊಳ್ಳಲಿದೆ.
ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು ರೈತರಿಗೆ ಅತಿ ಅವಶ್ಯಕವಾದ ಕೃಷಿ ಯೋಜನೆ ಜಾರಿಗೊಳಿಸಲು ಸಹಕಾರಿಯಾಗುತ್ತದೆ.
ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ 43000 ಮತ ನೀಡಿ ಜೆಡಿಎಸ್ ಪಕ್ಷವನ್ನು ತಾಲೂಕಿನಲ್ಲಿ ಬೆಂಬಲಿಸಿದ್ದೀರಿ.
ಅದೇ ರೀತಿ ಲೋಕಸಭಾ ಅಭ್ಯರ್ಥಿ ಸೋಮಣ್ಣ ಗೆಲುವಿಗೆ ತಾಲೂಕಿನ ಕಾರ್ಯಕರ್ತರು ಶ್ರಮಿಸೋಣ ಎಂದು ಕರೆ ನೀಡಿದರು.
ಎಪಿಎಂಸಿ, ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾಲೂಕಿನಲ್ಲಿ ಜೆಡಿಎಸ್ ಪಕ್ಷವು 10,000 ಮತಗಳನ್ನು ಪಡೆಯುವುದಿಲ್ಲ ಜೆಡಿಎಸ್ ಪಕ್ಷವು ತಾಲೂಕಿನಲ್ಲಿ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ ಎಂದು ಅಪಪ್ರಚಾರ ಮಾಡಿದವರಿಗೆ ತಾಲೂಕಿನ ಜನತೆಯು ಜೆಡಿಎಸ್ ಪಕ್ಷಕ್ಕೆ 43 ಸಾವಿರ ಮತಗಳನ್ನು ನೀಡುವ ಮೂಲಕ ತಿರಿಗೇಟು ನೀಡಿದ್ದಾರೆ.
ಜೆಡಿಎಸ್ ನ ಕಾರ್ಯಕರ್ತರು ಮಾಜಿ ಪ್ರಧಾನಿ ದೇವೇಗೌಡರ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಣ್ಣನ ಆದೇಶದಂತೆ ಮೈತ್ರಿ ಅಭ್ಯರ್ಥಿ ಸೋಮಣ್ಣ ಗೆಲುವಿಗೆ ಶ್ರಮಿಸೋಣ ಎಂದು ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬಿದರು.

ಮುಖಂಡ ಜಿಎನ್ ಬೆಟ್ಟಸ್ವಾಮಿ ಮಾತನಾಡಿ ಮೈತ್ರಿ ಧರ್ಮವನ್ನು ಪಾಲಿಸಿ ದೇವೇಗೌಡರ ಹಾಗೂ ಕುಮಾರಸ್ವಾಮಿಯವರ ಕೈ ಬಲಪಡಿಸೋಣ .
ಶ್ರೀಯುತ ನರೇಂದ್ರ ಮೋದಿ ಜಿ ಅವರಿಂದ ದೇಶದ ಅಭಿವೃದ್ಧಿ ಸಾಧ್ಯ. ಮತ್ತೊಮ್ಮೆ ನರೇಂದ್ರ ಮೋದಿಜಿ ಅವರು ಪ್ರಧಾನಿಯಾಗಲು ತುಮಕೂರು ಲೋಕಸಭಾ ಕ್ಷೇತ್ರದಿಂದ ವಿ ಸೋಮಣ್ಣ ರವರನ್ನು ಆಯ್ಕೆ ಮಾಡಿ ಕಳಿಸೋಣ ಎಂದು ಜೆಡಿಎಸ್ ಕಾರ್ಯಕರ್ತರನ್ನು ಹುರಿದುಂಬಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕಿರಯ್ಯ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಗಂಗಸಂದ್ರ ಮಂಜಣ್ಣ, ಮುಖಂಡರಾದ ತ್ಯಾಗಟೂರು ಯೋಗಾನಂದ ಕುಮಾರ್, ಶಿವಲಿಂಗಯ್ಯ, ಕಡಬ ಸಿದ್ದಗಂಗಮ್ಮ, ಕರಿಯಪ್ಪ, ಜಿ ಡಿ ಸುರೇಶ್ ಗೌಡ, ಎರಪ್ಪ, ವೀರೇಶ್,ಸೇರಿದಂತೆ ಇತರರು ಹಾಜರಿದ್ದರು .
ವರದಿ: ಶ್ರೀಕಾಂತ್ ಗುಬ್ಬಿ
https://www.janataa24.com/mysore-three-youths-who-went-swimming-in-the-kapila/
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv