Janataa24 NEWS DESK
Gubbi : ಗ್ರಾ.ಪಂ ನೂತನ ಅಧ್ಯಕ್ಷರಾಗಿ ಶ್ರೀನಿವಾಸ್ ಡಿ ಅವಿರೋಧ ಆಯ್ಕೆ

ಗುಬ್ಬಿ : ತಾಲೂಕಿನ ಕಸಬಾ ಹೋಬಳಿ ಅಮ್ಮನಘಟ್ಟ ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ಅಧ್ಯಕ್ಷ(President) ಸ್ಥಾನಕ್ಕೆ ಶ್ರೀನಿವಾಸ್ ಡಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾದರು.
ನೂತನ ಅಧ್ಯಕ್ಷ ಶ್ರೀನಿವಾಸ್ ಮಾಧ್ಯಮದವರೊಂದಿಗೆ ಮಾತನಾಡಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ ಸರ್ವ ಸದಸ್ಯರಿಗೆ ಧನ್ಯವಾದಗಳು ತಿಳಿಸಿ. ಸದಸ್ಯರ ಸಹಕಾರ ಪಡೆದು ಹೆಚ್ಚು ಅಭಿವೃದ್ಧಿ ಕಡೆ ಗಮನ ಹರಿಸಿ ಬಿರು ಬೇಸಿಗೆಯಾದ ಹಿನ್ನೆಲೆಯಲ್ಲಿ ಅಮ್ಮನಘಟ್ಟ ಗ್ರಾಮ ಪಂಚಾಯತಿಯ ಎಲ್ಲ ಗ್ರಾಮಗಳಿಗೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುತ್ತೇನೆ. ರಸ್ತೆ ಒಳಚರಂಡಿ ಹಾಗೂ ಮೂಲಭೂತ ಸೌಕರ್ಯಗಳ ನ್ನು ಒದಗಿಸಿಕೊಡುತ್ತೇನೆ ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಸದಸ್ಯ ದಿನೇಶ್ ಮಾತನಾಡಿ ಸರ್ಕಾರವು ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಯಾವುದೇ ಹಣವನ್ನು ಬಿಡುಗಡೆ ಗೊಳಿಸುತ್ತಿಲ್ಲ. ಸುಮಾರು ಮೂರು ನಾಲ್ಕು ವರ್ಷಗಳಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವಕಲ್ಯಾಣ ಹಾಗೂ ಅಂಬೇಡ್ಕರ್ ಅವಾಜ್ ಯೋಜನೆಯಲ್ಲಿ ವಸತಿಗಳನ್ನು ಸಹ ನೀಡಿಲ್ಲ. ಸರ್ಕಾರವು ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಅನುದಾನ ಬಿಡುಗಡೆಗೊಳಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿಆರ್ ರವಿ, ಮಾಜಿ ಅಧ್ಯಕ್ಷರಾದ ದೇವರಾಜು, ಲಕ್ಷ್ಮಿದೇವಮ್ಮ ಮಹದೇವಯ್ಯ,ಉಪಾಧ್ಯಕ್ಷ ಪ್ರೇಮಾ ರಾಜಣ್ಣ, ಗ್ರಾ,ಪಂ, ಸದಸ್ಯರಾದ ಮಂಜುನಾಥ್, ಯತೀಶ್, ರಮೇಶ್, ಶಿವನಂಜಪ್ಪ, ಲತಾ, ಮುದ್ದಯ್ಯ, ಜಯಣ್ಣ, ಮುಖಂಡರಾದ ರಾಜಣ್ಣ, ನಿಂಗಪ್ಪ, ದೊರೆಸ್ವಾಮಿ, ಮಮ್ತಾಜ್ ಬೇಗಂ, ಹಾಗೂ ಗ್ರಾಮ ಪಂಚಾಯತಿ ಆಡಳಿತ ಸಿಬ್ಬಂದಿ ಹಾಜರಿದ್ದರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
HDK ಗೆ ಶಾಕ್ ಕೊಟ್ಟ ಡಿಕೆ ಶಿವಕುಮಾರ್: ಕೈ ಗೆ ಜೈ ಎಂದ ಚನ್ನಪಟ್ಟಣದ 9 ಜೆಡಿಎಸ್ ನಗರಸಭೆ ಸದಸ್ಯರು.