Janataa24 NEWS DESK
Suicide: ಉಡುಪಿಯಲ್ಲಿ ಮಹಿಳಾ ಕಾನ್ಸ್ಟೇಬಲ್ ನೇಣಿಗೆ ಶರಣು.

ಉಡುಪಿ: ಪೊಲೀಸ್ ಕ್ವಾಟ್ರಸ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳಾ ಕಾನ್ಸ್‌ಟೇಬಲ್(Constable) ಶವ ಪತ್ತೆಯಾಗಿದೆ. ಸಾವಿಗೀಡಾದ ದುರ್ದೈವಿ ಜ್ಯೋತಿ (29).
ಸಾವನ್ನಪ್ಪಿರುವ ಕಾನ್ಸ್ಟೇಬಲ್ ಜ್ಯೋತಿಯವರು ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇವರು ಮೂಲತಹ ಬಾಗಲಕೋಟೆ ಜಿಲ್ಲೆಗೆ ಸೇರಿದವರಾಗಿದ್ದು ಉದ್ಯೋಗದ ಹಿನ್ನೆಲೆಯಿಂದ ಉಡುಪಿಯಲ್ಲಿ ನೆಲೆಸಿರುತ್ತಾರೆ.
ಪತಿ-ಪತ್ನಿಯ ಕಲಹದಿಂದ ಸಂಸಾರದಲ್ಲಿ ಬಿರುಕು ಬಂದು ಜ್ಯೋತಿಯವರು ಆತ್ಮಹತ್ಯೆಗೆ ಶರಣಾಗಿರುತ್ತಾರೆಂದು ಸಹೋದ್ಯೋಗಿಗಳು ಮಾಹಿತಿ ನೀಡಿರುತ್ತಾರೆ.
ಸಾವನ್ನಪ್ಪಿರುವ ಕಾನ್ಸ್ಟೇಬಲ್ ಜ್ಯೋತಿ(Jyothi) ಅವರ ಪತಿ ಕೆಎಸ್ಆರ್ಟಿಸಿ(KSRTC)ಯಲ್ಲಿ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಪತಿ ಮನೆಯಲ್ಲಿ ಮಲಗಿರುವಾಗ ಜ್ಯೋತಿ ರೂಮಿನಲ್ಲಿ ನೇಣಿಗಿ ಶರಣಾಗಿದ್ದಾರೆಂದು ಮಾಹಿತಿ ಲಭ್ಯವಾಗಿರುತ್ತದೆ.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv