ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಮಾಜಿ ಸಚಿವ ವೆಂಕಟರಮಣಪ್ಪ.

Janataa24 NEWS DESK

IMG 20240130 WA0019



ಪಾವಗಡ: ಪಟ್ಟಣದ ಜೂನಿಯರ್ ಕಾಲೇಜಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪಟ್ಟಣದ ಜೂನಿಯರ್ ಕಾಲೇಜು ನಿರ್ಮಾಣವಾಗಿ ಇಂದಿಗೆ 50 ವರ್ಷದ ಸುವರ್ಣ ಮಹೋತ್ಸವ ಆಚರಿಸಿಕೊಳ್ಳಲು ಸಿದ್ಧವಾಗಿದೆ.




ಈ ಹಿಂದೆ ನನ್ನ ಅವಧಿಯಲ್ಲಿ ಉತ್ತಮ ಕಾಲೇಜು ಕಟ್ಟಡಕ್ಕೆ ಅನುಕೂಲ ಕಲ್ಪಿಸಿದ್ದೇನೆ ಮುಂದಿನ ದಿನದಲ್ಲಿ ಸಹ ನನ್ನ ಮಗ ಶಾಸಕ ವೆಂಕಟೇಶ್ ಅವಧಿಯಲ್ಲಿ ಬೃಹತ್ ಆಡಿಟೋರಿಯಂ ವ್ಯವಸ್ಥೆ ಕಲ್ಪಿಸಲು ಸೂಚಿಸುತ್ತೇನೆ ಎಂದರು.



ವಿದ್ಯಾರ್ಥಿಗಳು ತಮ್ಮ ಒಂದು ಸಾಧನೆಯ ಅರಿತು ವಿದ್ಯಾಭ್ಯಾಸ ಮಾಡಬೇಕು.

ಇತ್ತೀಚಿನ ದಿನಗಳಲ್ಲಿ ಯುವಕರು ಮೊಬೈಲ್ ಹಾಗೂ ವಿವಿಧ ಚಟುವಟಿಕೆ ಬಲಿಯಾಗುತ್ತಿದ್ದಾರೆ.


ತಮ್ಮ ತಮ್ಮ ಪೋಷಕರು ಹಾಗೂ ತಮ್ಮ ಮಕ್ಕಳಿಗೊಂದು ಉತ್ತಮ ಭವಿಷ್ಯ ಕೊಡಬೇಕು ಎಂಬ ಉದ್ದೇಶದಿಂದ ಪಟ್ಟಣ ವ್ಯಾಪ್ತಿಯಲ್ಲಿ ಹಾಸ್ಟೆಲ್ ನಲ್ಲಿ ಇರಿಸಿ ಕಂಪ್ಯೂಟರ್ ಜ್ಞಾನ ಇತರೆ ಟ್ಯೂಷನ್ ವ್ಯವಸ್ಥೆ ಕಲ್ಪಿಸಿ ಮಕ್ಕಳ ಭವಿಷ್ಯಕ್ಕೆ ಹೆಚ್ಚು ಹೊತ್ತು ನೀಡುತ್ತಿರುತ್ತಾರೆ. ಆದರೆ ಮಕ್ಕಳು ತಮ್ಮ ಜವಾಬ್ದಾರಿ ಮರೆತು ವಿವಿಧ ಚಟುವಟಿಕೆಗಳಿಗೆ ಬಲಿಯಾಗುತ್ತಿದ್ದಾರೆ.


ಇವಳೆ ಕಾಲೇಜು ಅಭಿವೃದ್ಧಿ ಅಧ್ಯಕ್ಷರಾದ ಪ್ರಮೋದ್ ಕುಮಾರ್. ಪುರಸಭೆ ಸದಸ್ಯರಾದ ರವಿ.ಕಾಲೇಜು ಅಭಿವೃದ್ಧಿ ಸದಸ್ಯರಾದ ರಿಜ್ವಾನ್ ಉಲ್ಲಾ. ಕಾಲೇಜು ಪ್ರಿನ್ಸಿಪಾಲರಾದಂತಹ ಬಸವಲಿಂಗಪ್ಪ ಹಾಗೂ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



ವರದಿ:- ಇಮ್ರಾನ್ ಉಲ್ಲಾ ಪಾವಗಡ

Leave a Reply

Your email address will not be published. Required fields are marked *