Janataa24 NEWS DESK
Lokasabha 2024: ಮೋದಿ ರೋಡ್ ಶೋ ವೇಳೆ ವೇದಿಕೆ ಕುಸಿದು 9 ಮಂದಿಗೆ ಗಾಯ.

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳು ಶಕ್ತಿ ಪ್ರದರ್ಶನಕ್ಕೆ ಮುಂದಾಗುತ್ತಾರೆ ಅಂತಹ ಸಂದರ್ಭದಲ್ಲಿ ಕೊಂಚ ಯಾಮಾರಿದರೂ, ಅಲ್ಲಿ ಸೇರಿದ್ದ ಜನತೆಗೆ ಅಪಾಯ ಕಟ್ಟಿಟ್ಟ ಬುತ್ತಿ ಕೆಲವು ಕಡೆ ಕಾಲು ತುಳಿತಕ್ಕೆ ಸಿಕ್ಕಿ ಗಾಯಕೊಂಡರೇ ಹಲವು ಕಡೆ ವೇದಿಕೆ ಕುಸಿದು ಗಾಯಗೊಂಡಿದ್ದಾರೆ.
ಅದೇ ರೀತಿ ಮಾನ್ಯ ಪ್ರಧಾನಿ ಮೋದಿ (Modi)ಅವರು ನಿನ್ನೆ ಭಾನುವಾರ ಜಬಲ್ಪುರದಲ್ಲಿ ಬೃಹತ್ ರೋಡ್ ಶೋ ಮೂಲಕ ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರವನ್ನುಆರಂಭಿಸಿದರು.ರೋಡ್ ಶೋ ನಲ್ಲಿ ಸಾಕಷ್ಟು ಸಂಖ್ಯೆಯ ಜನರು ಬಂದಿದ್ದರು. ಕಾರ್ಯಕ್ರಮದಲ್ಲಿ ವೇದಿಕೆ ಕುಸಿದು ಸುಮಾರು ಏಳು ಜನ ಪೊಲೀಸ್ ಸಿಬ್ಬಂದಿ ಸೇರಿದಂತೆ 9 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ. ನಂತರ ಮಧ್ಯಪ್ರದೇಶದ ಸಚಿವ ರಾಕೇಶ್ ಸಿಂಗ್ ಆಸ್ವತ್ರೆಗೆ ಭೇಟಿ ನೀಡಿ. ಗಾಯಾಳುಗಳೆಲ್ಲ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ವೇಳೆ ರಾಂಪುರ-ಗೋರಖ್ಪುರ ರಸ್ತೆಯ ರಸ್ತೆ ಬದಿಯಲ್ಲಿ ಸ್ವಾಗತ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಪ್ರಧಾನಿಯವರ ವಾಹನವು ವೇದಿಕೆಯ ದಾಟಿ ಹೋದ ಕೂಡಲೇ, ಜನರು ಅವರನ್ನು ನೋಡಲು ವೇದಿಕೆಯ ಮೇಲೆ ಹತ್ತಿದರು. ಇದರಿಂದಾಗಿ ವೇದಿಕೆ ಕುಸಿದಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಎಚ್.ಆರ್.ಪಾಂಡೆ ಅವರು ಹೇಳಿದರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
Tumkur: ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೀರ್ತಿ ಮೇಲೆ ಬಿಜೆಪಿಯವರಿಂದ ಹಲ್ಲೆ.