Document

Druva sarja: ಅಭಿಮಾನಿಗಳಲ್ಲಿ ವಿಶೇಷ ಮನವಿ ಕೋರಿದ ಆಕ್ಷನ್ ಪಿನ್ಸ್

Janataa24 NEWS DESK

Druva sarja: ಅಭಿಮಾನಿಗಳಲ್ಲಿ ವಿಶೇಷ ಮನವಿ ಕೋರಿದ ಆಕ್ಷನ್ ಪಿನ್ಸ್

ಸ್ಯಾಂಡಲ್‌ವುಡ್ ಆಕ್ಷನ್ ಪಿನ್ಸ್ ಎಂದೇ ಖ್ಯಾತಿಯಾದ ನಟ ಧ್ರುವ ಸರ್ಜಾ ಅವರು ಶೂಟಿಂಗ್‌ಗೆ ಬ್ರೇಕ್ ನೀಡಿ ‘ಭುವನಂ ಗಗನಂ’ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಚಿತ್ರದ ಟೀಸರ್ ರಿಲೀಸ್ ಮಾಡಿ ತಂಡಕ್ಕೆ ಶುಭಕೋರಿದ್ದಾರೆ.ಇದೇ ವೇಳೆ ಅಭಿಮಾನಿಗಳಿಗೆ ಧ್ರುವ ಸರ್ಜಾ ಮನವಿಯೊಂದನ್ನು ಮಾಡಿದ್ದಾರೆ.

JANATAA ACTION PRINCE

Turuvekere: ರಾಜಕುಮಾರ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣಾ ಶಿಬಿರಕ್ಕೇ ಭರ್ಜರಿ ರೆಸ್ಪಾನ್ಸ್.

ಪ್ರಮೋದ್, ಪೃಥ್ವಿ ಅಂಬರ್ ನಟನೆಯ ‘ಭುವನಂ ಗಗನಂ’(Bhuvanam Gaganam) ಚಿತ್ರದ ಟೀಸರ್ ಲಾಂಚ್ ಇವೆಂಟ್‌ಗೆ ಧ್ರುವ ಸರ್ಜಾ ಅತಿಥಿಯಾಗಿ ಆಗಮಿಸಿದ್ದರು. ನಾನು ಅವರ ಅಭಿಮಾನಿಗಳು ಎನ್ನಬೇಡಿ. ಪ್ರತಿ ಸಿನಿಮಾಗೂ ಪ್ರೀತಿ ತೋರಿಸಿ ಎಂದು ನಟ ಫ್ಯಾನ್ಸ್‌ಗೆ ಸಲಹೆ ನೀಡಿದ್ದಾರೆ

ಅಪ್ಪು ಸರ್ ಹುಟ್ಟುಹಬ್ಬ ಎಂದು ಧ್ರುವ ಸರ್ಜಾ, ಪುನೀತ್ ರಾಜ್ ಕುಮಾರ ಅವ‌ರನ್ನು ಸ್ಮರಿಸಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಫ್ಯಾನ್ಸ್ ವಾರ್ ಇತ್ತೀಚೆಗೆ ತುಸು ಹೆಚ್ಚಾಗಿದೆ. ಸ್ಟಾರ್ ನಟರ ಅಭಿಮಾನಿಗಳು ಇನ್ನೊಬ್ಬ ನಟನನ್ನು ಸಾಮಾಜಿಕ ಜಾಲತಾಣದಲ್ಲಿ ಹೀಯಾಳಿಸುವುದು, ಇನ್ನೊಬ್ಬ ನಟನ ಅಭಿಮಾನಿಗಳೊಟ್ಟಿಗೆ ಜಗಳ ಮಾಡುವುದು ಸಾಮಾನ್ಯ ಎಂಬಂತಾಗಿದೆ. ಇದಕ್ಕಿಂತಲೂ ಮುಂದೆ ಹೋಗಿ, ಇತರೆ ನಟನ ಸಿನಿಮಾವನ್ನೇ ತುಳಿಯುವ ಪ್ರಯತ್ನಗಳೂ ನಡೆದಿವೆ ಎಂದು ಮಾತನಾಡಿದ್ದಾರೆ

ನಾವೆಲ್ಲರೂ ಒಂದೇ ಎಂದಿದ್ದಾರೆ. ಯಾರ ಫ್ಯಾನ್ ಆದರೂ ಆಗಿರಿ ಆದರೆ ಕನ್ನಡ ಸಿನಿಮಾಗಳನ್ನು ತಪ್ಪದೇ ನೋಡಿರಿ ಎಂದು ಮನವಿ ಮಾಡಿದ್ದಾರೆ. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಬೆಂಬಲಿಸಿ ಎಂದು ಧ್ರುವ ಸರ್ಜಾ ಮನವಿ ಮಾಡಿದ್ದಾರೆ.

https://www.janataa24.com/tumkur-ಕ್ಷುಲ್ಲಕ-ಕಾರಣಕ್ಕೆ-ಹೆಂಡತ/

Subscribe YouTube
https://youtube.com/@janataa24?si=XsFcych2GMH0O6Gv

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

Document

Leave a Reply

Your email address will not be published. Required fields are marked *