Janataa24 NEWS DESK

ದ.ಸಂ.ಸ. 50ರ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ, ತಮಟೆ ಬಡಿಯುವುದರ ಮೂಲಕ ಚಾಲನೆ ನೀಡಿದ ಸಹಕಾರ ಸಚಿವರಾದ ಕೆಎನ್ ರಾಜಣ್ಣ.

ತುಮಕೂರು: ತುಮಕೂರು ನಗರದಲ್ಲಿರುವ ಎಂಪ್ರೆಸ್ ಆಡಿಟೋರಿಯಂ ನಲ್ಲಿ ಇಂದು, ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ, 50ರ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಹಕಾರ ಸಚಿವರಾದ ಕೆಎನ್ ರಾಜಣ್ಣ ಅವರು ತಮಟೆ ಬಾರಿಸುವುದರ ಮೂಲಕ ಚಾಲನೆ ನೀಡಿದರು.

ಇನ್ನು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಂಚಾಲಕರಾದ ಕುಂದೂರು ತಿಮ್ಮಯ್ಯನವರು ವಹಿಸಿ, ಮುಖ್ಯ ಅತಿಥಿಗಳಾಗಿ ಎಲ್ ಹನುಮಂತಯ್ಯ, ಕೋಟಗಾನಹಳ್ಳಿ ರಾಮಯ್ಯ, ಸುಬ್ಬು ಹೊಲೆಯಾರ್, ಪ್ರೊಫೆಸರ್ ಕೆ, ದೊರೆರಾಜ್, ಬೆಲ್ಲದ ಮಡಗು ಕೃಷ್ಣಪ್ಪ ಇನ್ನೂ ದಲಿತ ಪರ ಸಂಘಟನೆಗಳ ಮುಖಂಡರುಗಳು,

ವಿವಿಧಪರ ಸಂಘಟನೆಗಳ ಮುಖಂಡರು ಜಿಲ್ಲೆ ಆದ್ಯಂತ ಬರುವ ಎಲ್ಲಾ ತಾಲೂಕಿನ ದಸಂಸ ಸಂಚಾಲಕರುಗಳು ಮುಖಂಡರುಗಳು ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವರದಿ: ಮಂಜುನಾಥ್ ತುರುವೇಕೆರೆ.