Janataa24 NEWS DESK
ತಾಲೂಕಿಗೆ ಫೆ.8 ರಂದು ಸಂವಿಧಾನ ಜಾತ ಆಗಮನ
ಭವ್ಯ ಸ್ವಾಗತ ಕೋರಲು ತಾಲೂಕಿನಲ್ಲಿ ಸಕಲಸಿದ್ಧತೆ.
ಗುಬ್ಬಿ : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಯಾದ ಸಂವಿಧಾನವನ್ನು ಕುರಿತು ಗ್ರಾಮೀಣ ಭಾಗದ ಜನರಲ್ಲಿ ಅರಿವು ಮೂಡಿಸುವ ಇದೇ ತಿಂಗಳ ಫೆ 8ರಂದು ಸಂವಿಧಾನ ಜಾತ ತಾಲೂಕಿಗೆ ಬರಲಿದ್ದು 34 ಗ್ರಾಮ ಪಂಚಾಯಿತಿಗಳಲ್ಲೂ ಪ್ರವಾಸ ಮಾಡಲಿದೆ.

ಮುನ್ನೆಚರಿಕೆ ಕ್ರಮವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ದಲಿತ ಸಂಘಟನೆಗಳ ಹಾಗೂ ವಿವಿಧ ಸಂಘಟನೆಗಳ ಪೂರ್ವಭಾವಿ ಸಭೆ ನಡೆಸಲಾಯಿತು.
ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತಾಲೂಕಿನಲ್ಲಿ ಐದು ದಿನದ ಪ್ರವಾಸ ಸಂಪೂರ್ಣ ಯಶಸ್ವಿ ಗೆ ಸ್ಥಳೀಯ ಮುಖಂಡರು ವಿವಿಧ ಸಂಘಟನೆಗಳು ಯಶಸ್ವಿಗೆ ಸಹಕಾರ ನೀಡಬೇಕಿದೆ. ಸ್ಥಳೀಯವಾಗಿ ಹೆಚ್ಚಿನ ಪ್ರೋತ್ಸಾಹ ದೊರಕಬೇಕಾಗಿದೆ ಎಂದು ತಿಳಿಸಿದರು.
ಫೆ 8ರಂದು ಕುಣಿಗಲ್ ತಾಲೂಕಿನಿಂದ ಆಗಮಿಸುವ ಸಂವಿಧಾನ ಜಾಗೃತಿ ಜಾತಕೆ ಭವ್ಯ ಸ್ವಾಗತ ಕೋರಲು ಸಕಲ ಸಿದ್ಧತೆ ಮಾಡಲಾಗಿದೆ.
ಮಾನ್ಯ ಜನಪ್ರಿಯ ಶಾಸಕರಾದ ಎಸ್ ಆರ್ ಶ್ರೀನಿವಾಸ್ ರವರು ಜಾತಕೆ ಚಾಲನೆ ನೀಡಲಿದ್ದು ತಾಲೂಕಿನ ಎಲ್ಲಾ ಜನ ಪ್ರತಿನಿಧಿಗಳು ಅಧಿಕಾರಿ ವರ್ಗದವರು ಉಪಸ್ಥಿತರಿರುತ್ತಾರೆ ಎಂದು ತಾಲೂಕ ಪಂಚಾಯತಿ ಇ ಓ ಪರಮೇಶ್ ಕುಮಾರ್ ತಿಳಿಸಿದರು.
ಫೆ.8ರಂದು ಗುಬ್ಬಿ ಪಟ್ಟಣದ ನಂತರ ಜಿ ಹೊಸಳ್ಳಿ, ಕುನ್ನಾಲ,ಎಸ್ ಕೊಡಿಗೆಹಳ್ಳಿ,ಚಂಗಾವಿ, ಮಾವಿನಹಳ್ಳಿ,ಇಡಗೂರು, ತಲುಪಲಿದೆ.
ಫೆ 9 ರಂದು ಸಿ ಎಸ್ ಪುರ, ಹಿಂಡಿಸ್ಕೆರೆ, ಕಲ್ಲೂರು, ಪೆದ್ದನಹಳ್ಳಿ, ಕಡಬ, ಬ್ಯಾಡಗೆರೆ, ಕೊಪ್ಪ,ಅಡಗೂರು, ತಲುಪಲಿದೆ.
ಫೆ 10ರಂದು ಎಂಎಚ್ ಪಟ್ನಾ, ಇರಕಸಂದ್ರ, ಬಿದರೆ, ಅಮ್ಮನ ಘಟ್ಟ, ಬೆಲವತ್ತ, ನಿಟ್ಟೂರು, ತಲುಪಲಿದೆ.ಫೆ 11ರಂದು ಮಾರಶೆಟ್ಟಿಹಳ್ಳಿ, ದೊಡ್ಡಗುಣಿ, ಕೊಂಡ್ಲಿ,ತ್ಯಾಗಟೂರು, ಎಂ ಎನ್ ಕೋಟೆ, ಹೊಸಕೆರೆ, ಶಿವಪುರದಲ್ಲಿ ಉಳಿಯಲಿದೆ.
ಫೆ 12ರಂದು ಹಾಗಲವಾಡಿ, ಮಂಚಲದೊರೆ, ಅಂಕಸಂದ್ರ, ನಲ್ಲೂರು, ಚೇಳೂರು, ಗ್ರಾಮ ಪಂಚಾಯಿತಿಯಲ್ಲಿ ಜಾತ ಮುಕ್ತಾಯವಾಗಲಿದ್ದು ನಂತರ ತುರುವೇಕೆರೆ ತಾಲೂಕು ಜಾತ ತೆರಳಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ದಲಿತ ಮುಖಂಡರು ಕ್ರಾಂತಿ ಗೀತೆ ಹಾಡುವ ಮೂಲಕ ಕಾರ್ಯಕ್ರಮವನ್ನು ಹುರಿದುಂಬಿಸಿದರು.
ಪೂರ್ವಭಾವಿ ಸಭೆಯಲ್ಲಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ವೀಣಾ.
ತಾಲೂಕಿನ ಪ್ರಮುಖ ಮುಖಂಡರು, ಚುನಾಯಿತ ಜನಪ್ರತಿನಿಧಿಗಳು, ದಲಿತ ಮುಖಂಡರು ಹಾಜರಿದ್ದರು.
ವರದಿ
ಗುಬ್ಬಿ: ಶ್ರೀಕಾಂತ್