Bengaluru: ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದನೆ ನಟ ಶಿವರಾಜ್ ಕೆಆರ್ ಪೇಟೆ ವಿರುದ್ಧ ದೂರು ದಾಖಲ

ಬೆಂಗಳೂರು: ಮಹಿಳೆಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪದಡಿಯಲ್ಲಿ ನಟ ಶಿವರಾಜ್ ಕೆಆರ್ ಪೇಟೆ ರವರ ವಿರುದ್ಧ ಇದೀಗ ಸುಬ್ರಹ್ಮಣ್ಯ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾರ್ಚ್ 31 ರಂದು ಬೆಂಗಳೂರಿನಲ್ಲಿ ಶಾರದಾ ಬಾಯಿ ಎಂಬ ಮಹಿಳೆ ದೂರು ನೀಡಿದ್ದು ತನ್ನ ವಿರುದ್ಧ ಅವಾಚ್ಯ ಪದದಿಂದ ನಿಂದಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ
ಮಹಿಳೆಯನ್ನು ಯಾವಳೆ ನೀನು..? ಎಂದು ಕರೆದು ಅವಮಾನ ಮಾಡಿರುವ ಶಿವರಾಜ್ ಕೆಆರ್ ಪೇಟೆ ಮತ್ತವರ ಸ್ನೇಹಿತರನ್ನು ಠಾಣೆಗೆ ಕರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಿಳೆ ದೂರಿನಲ್ಲಿ ಕೋರಿರುತ್ತಾರೆ.
ದೂರಿನ ವಿವರ: ಶಾರದಾ ಬಾಯಿ ಎಂಬ ಮಹಿಳೆ ಕೆಲಸ ಮುಗಿಸಿಕೊಂಡು ಸಂಜೆ ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸ್ ಮರಳುತ್ತಿದ್ದಾಗ ಡಾ. ರಾಜಕುಮಾರ್ ರಸ್ತೆ ಹತ್ತನೇ ತಿರುವಿನ ಹಿಂಭಾಗ, ಪೆಟ್ರೋಲ್ ಬಂಕ್ ಬಳಿ ಶಿವರಾಜ್ ಕೆ.ಆರ್.ಪೇಟೆ ಅವರ ಕಾರು ಮಹಿಳೆಯ ಸ್ಕೂಟಿ ಗೆ ತಗುಲಿಸಿದ್ದು ನಂತರ ಕಾರಿನ ಗಾಜು ಇಳಿಸಿದಾಗ ನಟ ಶಿವರಾಜ್ ಕೆಆರ್ ಪೇಟೆ(Shivaraj KR Pete) ಎಂಬುದು ಗೊತ್ತಾಗಿದೆ.
ಕಾರಿನಲ್ಲಿದ್ದ ಶಿವರಾಜ ಕೆ ಆರ್ ಪೇಟೆ ಸ್ನೇಹಿತರು ಯಾವಳೆ ನೀನು..? ಅಲ್ಲಾಡಿಸಿಕೊಂಡು ಹೋಗ್ತೀಯಾ ಎಂಬ ನಿಂದನೆಯ ಶಬ್ದ ಬಳಸಿದ್ದಾರೆ.
ಶಾರದಾ ಬಾಯಿ ದೂರಿನನ್ವಯ ಎನ್.ಸಿ.ಆರ್. ದಾಖಲಿಸಿದ ಪೊಲೀಸರು ಶಿವರಾಜ್ ಕೆ ಆರ್ ಪೇಟೆ ಹಾಗೂ ಮಹಿಳೆಯನ್ನು ಠಾಣೆಗೆ ಕರೆಸಿ ಈ ಪ್ರಕರಣವನ್ನು ಬಗೆಹರಿಸಿ ರಾಜಿ ಮಾಡಿ ಕಳುಹಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿರುತ್ತದೆ.
https://www.janataa24.com/aap-massive-protest-at-freedom-park-against-arvi/
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
Subscribe YouTube