Janataa24 NEWS DESK
Chitradurga : ಚಿತ್ರದುರ್ಗ ಎಂಪಿ ಟಿಕೆಟ್ ಭೋವಿ ಸಮಾಜಕ್ಕೆ ವಂಚಿಸಿದರೆ ಬಂಡಾಯ ಸ್ವರ್ಧೆ ಆರ್ ದಾಸಬೋವಿ.
ಪಾವಗಡ: ರಾಷ್ಟ್ರೀಯ ಸಿದ್ದರಾಮೇಶ್ವರ ಭೋವಿ ಯುವ ವೇದಿಕೆಯ ರಾಜ್ಯ ಉಪಾಧ್ಯಕ್ಷ ಆರ್.ದಾಸಭೋವಿ
ಟಿಕೆಟ್ ವಿಚಾರದಲ್ಲಿ ಸಮಾಜವನ್ನು ರಾಜ್ಯ ಕಾಂಗ್ರೆಸ್(State Congress) ನಿರ್ಲಕ್ಷ್ಯಿಸಿದರೆ ಪ್ರಸಕ್ತ ಸಾಲಿನ ಈ ಭಾಗದ ಚಿತ್ರದುರ್ಗ ಲೋಕಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧಿಸುವುದಾಗಿ ರಾಷ್ಟ್ರೀಯ ಶ್ರೀ ಸಿದ್ದರಾಮಶ್ವರ ಭೋವಿ (ಓಡ್)ಯುವ ವೇದಿಕೆಯ ರಾಜ್ಯ ಉಪಾಧ್ಯಕ್ಷ ಹಾಗೂ ತಾಲ್ಲೂಕು ಭೋವಿ ಸಮಾಜದ ಹಿರಿಯ ಮುಖಂಡರಾದ ತಾಲೂಕಿನ ವಡ್ಡರಹಟ್ಟಿಯ ಆರ್.ದಾಸಭೋವಿ ಅವರು ತಿಳಿಸಿದ್ದಾರೆ.
ಈ ಭಾಗದ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಭಾನುವಾರ ಸುದ್ದಿಗಾರರ ಜೊತೆ ತಾಲ್ಲೂಕು ಕಾಂಗ್ರೆಸ್‌ನ ಮುಖಂಡ ಆರ್.ದಾಸಭೋವಿ ಅವರು ಮಾತನಾಡಿ ಪಾವಗಡ ಸೇರಿದಂತೆ ಈ ಭಾಗದ ಚಿತ್ರದುರ್ಗ ಲೋಕಸಭೆ (Chitradurga Lokasabhe) ವ್ಯಾಪ್ತಿ ಎಸ್‌ಸಿ ಮೀಸಲು ಕ್ಷೇತ್ರವಾಗಿದೆ. ಮೀಸಲು ಕ್ಷೇತ್ರವಾದಗಿನಿಂದಲೂ ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ಪಕ್ಷ ಕಳೆದ 30ವರ್ಷಗಳಿಂದ ಒಂದು ಭಾರಿಯಾದರೂ ಈ ಭಾಗದಲ್ಲಿ ಭೋವಿ ಸಮಾಜಕ್ಕೆ ಅಧ್ಯತೆ ನೀಡಿಲ್ಲ.ಅಲ್ಲದೇ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ,ಚಿತ್ರದುರ್ಗ,ಕೋಲಾರ ಸೇರಿದಂತೆ 5 ಲೋಕಸಭಾ ಕ್ಷೇತ್ರಗಳು ಪರಿಶಿಷ್ಟ ಜಾತಿಗೆ (ಎಸ್‌ಸಿ)ಮೀಸಲಿವೆ.
ರಾಜ್ಯದಲ್ಲಿ ಸುಮಾರು 50 ಲಕ್ಷದಷ್ಟು ಭೋವಿ ಸಮುದಾಯದ ಮತಗಳಿವೆ.ಯಾವುದೇ ಮೀಸಲು ಕ್ಷೇತ್ರದಲ್ಲಿ ಭೋವಿ ಸಮಾಜಕ್ಕೆ ಅಧ್ಯತೆ ನೀಡದಿರುವುದು ವಿಪರ್ಯಾಸ. ಸಮಾಜದ ಹಾಲಿ ಹಾಗೂ ಮಾಜಿ ಸಚಿವರು ಹಾಗೂ ಶಾಸಕರು ಹಾಗೂ ಸಮಾಜದ ಹಿರಿಯ ಮುಖಂಡರು ಆನೇಕ ಬಾರಿ ಮನವಿ ಮಾಡಿದ್ದಾರೆ.ಆದರೆ ರಾಜ್ಯ ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸುತ್ತಿಲ್ಲ ಇದು ಅತ್ಯಂತ ನೋವು ತಂದಿದೆ.
ಚಿತ್ರದುರ್ಗ ಲೋಕಸಭೆ ಕ್ಷೇತ್ರಕ್ಕೆ ಭೋವಿ ಸಮಾಜದ ಸ್ಥಳೀಯ ಇಬ್ಬರು ಆಕಾಂಕ್ಷಿಗಳು ಟಿಕೆಟ್‌ಗಾಗಿ ಬೇಡಿಕೆಯಿಟ್ಟಿದ್ದರೂ ಕಾಂಗ್ರೆಸ್ ಮುಖಂಡರು ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ. ಇದು ರಾಜ್ಯದ ಭೋವಿ ಸಮಾಜಕ್ಕೆ ಬೇಸರ ತರುವಂತ ಸಂಗತಿಯಾಗಿದೆ. ಹೀಗಾಗಿ ಇನ್ನೂ ಅಭ್ಯರ್ಥಿಗಳ ಆಯ್ಕೆಯ ಅಂತಿಮ ತೀರ್ಮಾನಕ್ಕೆ ಕಾಲಾವಕಾಶವಿದೆ. ಹೈಕಮಾಂಡ್ ಚಿಂತನೆ ನಡೆಸಿ, ಈ ಭಾಗದಲ್ಲಿ ಭೋವಿ ಸಮಾಜಕ್ಕೆ ಅಧ್ಯತೆ ನೀಡಬೇಕು.ಕಡೆಗಾಣಿಸಿದರೆ ಭೋವಿ ಹಾಗೂ ಇತರೆ ಸಮಾಜದ ಬೆಂಬಲದೊಂದಿಗೆ ಈ ಭಾಗದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅವರು ಹೇಳಿದರು.
ವರದಿ: ಇಮ್ರಾನ್ ಉಲ್ಲಾ. ಪಾವಗಡ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
BJP-JDS : ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕಾರ್ಯಕರ್ತರ ಪೂರ್ವಭಾವಿ ಸಭೆ