Janataa24 NEWS DESK
BJP-JDS : ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕಾರ್ಯಕರ್ತರ ಪೂರ್ವಭಾವಿ ಸಭೆ

ತುರುವೇಕೆರೆ: ಪಟ್ಟಣದಲ್ಲಿರುವ ವಿರಕ್ತ ಮಠ ಸಮುದಾಯ ಭವನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರುಗಳ ಜಂಟಿ ಪೂರ್ವಭಾವಿ ಸಭೆಯನ್ನ ಆಯೋಜನೆ ಮಾಡಲಾಗಿತ್ತು, ಇದೇ ವೇಳೆ ಶಾಸಕ ಎಂ ಟಿ ಕೃಷ್ಣಪ್ಪ ಮಾತನಾಡಿ ಕಳೆದ ಚುನಾವಣೆಯಲ್ಲಿ ನಮ್ಮ ದೇಶದ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ನಮ್ಮ ಜಿಲ್ಲೆಯಲ್ಲಿ ಸೋಲಿಸಿ ತಪ್ಪು ಮಾಡಿದ್ದೇವೆ, ಈ ಬಾರಿ ಆ ತಪ್ಪನ್ನು ನಾವುಗಳು ಮಾಡಬಾರದು, ಕೇಂದ್ರದಲ್ಲಿ ಎನ್ ಡಿ ಎ ಸರ್ಕಾರವಿದೆ ಮತ್ತೆ ಮೋದಿಯವರು ಪ್ರಧಾನಿ ಆದರೆ,
ವಿ ಸೋಮಣ್ಣನವರು ಸಂಸದರಾದರೆ ಕೇಂದ್ರದಿಂದ ಹೆಚ್ಚಿನ ಅನುದಾನ ತಂದು ಜಿಲ್ಲೆಯನ್ನು ಅಭಿವೃದ್ಧಿ ಕಡೆ ಕೊಂಡೊಯ್ಯುತ್ತಾರೆ, ವಿ ಸೋಮಣ್ಣನವರಿಗೆ ಅಭಿವೃದ್ಧಿ ಮಾಡುವಷ್ಟು ಸಾಮಾರ್ಥ್ಯ ಇದೆ .ಎಂದು ಅಲ್ಲೇ ವೇದಿಕೆಯಲ್ಲಿ ಕುಳಿತಿದ್ದ ಸೋಮಣ್ಣನವರಿಗೆ ನೀವು ಯಾವುದೇ ಕಾರಣಕ್ಕೂ ಗಾಬರಿ ಪಡಬೇಕಿಲ್ಲ, ನಿಮ್ಮೊಂದಿಗೆ ಯಾರೆ ಭಿನ್ನಾಭಿಪ್ರಾಯವಿದ್ದರೂ ಅವರೊಂದಿಗೆ ರಾಜಿ ಮಾಡಿಕೊಳ್ಳಿ, ರಾಜಕಾರಣ ಎಂದರೆ ರಾಜಿ ಮಾಡಿಕೊಳ್ಳುವುದೇ ಅಲ್ಲವೇ ಎಂದು ವಿ ಸೋಮಣ್ಣನವರಿಗೆ ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರುಗಳ ಮಾತಿನ ಚಕಮಕಿ ಮತ್ತು ತಳ್ಳಾಟ. ವಾಕ್ಸಮರದ ನಡುವೆ ಮಾಜಿ ಮತ್ತು ಹಾಲಿ ಶಾಸಕರು ಆಗಮಿಸಿ ಸಮಸ್ಯೆ ಶಮನ ಮಾಡಿದರು. ಯಾರು ವೇದಿಕೆಯಲ್ಲಿ ಗೊಂದಲ ಸೃಷ್ಟಿ ಮಾಡಬಾರದು ವಿ ಸೋಮಣ್ಣ ಕೈಸನ್ನೆಯಿಂದ ಮನವಿ.
ಇನ್ನೂ ತುರುವೇಕೆರೆ ತಾಲೂಕಿನ ನಿಕಟ ಪೂರ್ವ ಮಾಜಿ ಶಾಸಕರಾದ ಮಸಾಲ ಜಯರಾಮ್(Masala Jayaram) ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕಾರ್ಯಕರ್ತರು ಒಂದಾಗಿ ಒಮ್ಮತದಿಂದ ಈ ಚುನಾವಣೆಯಲ್ಲಿ ವಿ ಸೋಮಣ್ಣ ಅವರಿಗೆ ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಮೈತ್ರಿಯಾಗಿರುವ ನಾವಿಬ್ಬರೂ ಅವರಿಗೆ ನೀಡಲಿದ್ದೇವೆ, ಇದರ ಜೊತೆಗೆ ಈ ಲೋಕಸಭಾ ಚುನಾವಣೆಯಲ್ಲಿ ವಿ ಸೋಮಣ್ಣ ಗೆದ್ದು ಬಂದು ಸಂಸದರಾಗಿ ಕೆಲವೇ ತಿಂಗಳಲ್ಲಿ ಹಾಲಿ ತುರುವೇಕೆರೆ ಶಾಸಕರಾದ ಎಂ ಟಿ ಕೃಷ್ಣಪ್ಪನವರು ಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.
ನಂತರ ಮಾತನಾಡಿದ ತುಮಕೂರು ಜಿಲ್ಲೆಯ ಮೈತ್ರಿ ಅಭ್ಯರ್ಥಿ ವಿ ಸೋಮಣ್ಣ,(V Somanna) ದೇಶದಲ್ಲಿ ವಿಶ್ವನಾಯಕ ನರೇಂದ್ರ ಮೋದಿ ಪರವಾದ ಅಲೆ ಇದೆ, ಎನ್ ಡಿ ಎ ಮೈತ್ರಿಕೂಟಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಕಾಲಿಟ್ಟಿದ್ದಾರೆ ಈ ಲೋಕಸಭಾ ಚುನಾವಣೆಯಲ್ಲಿ ಸುಮಾರು 2 ಲಕ್ಷ ಮತಗಳ ಅಂತರದಿಂದ ನಾನು ಗೆಲುವನ್ನ ಸಾಧಿಸುತ್ತೇನೆ ಎಂದರು.
ಜೊತೆಗೆ ನಾನು ಈಗಾಗಲೇ ರಾಜಕೀಯವಾಗಿ ದಶಕಗಳ ಕಾಲ ಮಾಜಿ ಪ್ರಧಾನಿಯೊಂದಿಗೆ ಪಳಗಿದ್ದೇನೆ, ಹಾಗಾಗಿ ನಾನು ರೈತ ಪರ ಅಭಿವೃದ್ಧಿಯನ್ನು ಮಾಡಿ ತೀರುತ್ತೇನೆ ,ಮೋದಿಯವರ ಎಲ್ಲಾ ವರ್ಗದ ಜನಸಾಮಾನ್ಯರ ಮೇಲೆ ಇರುವ ಕಾಳಜಿಯನ್ನು ನೋಡಿ ಮುಂದಿನ ಪ್ರಧಾನಿಯಾಗಿ ಮತ್ತೆ ನರೇಂದ್ರ ಮೋದಿ ಅವರು ಆಯ್ಕೆಯಾಗಬೇಕು ಎಂದರು.
ಇದೆ ವೇಳೆ ಜಂಟಿ ಪೂರ್ವಭಾವಿ ಸಭೆಯಲ್ಲಿ ಸಾವಿರಾರು ಕಾರ್ಯಕರ್ತರು ಹಾಗೂ ನಾಯಕರುಗಳಾದ ಎಂ ಡಿ ಲಕ್ಷ್ಮಿ ನಾರಾಯಣ್, ತುಮಕೂರು ಜಿಲ್ಲೆಯ ಲೋಕಸಭಾ ಚುನಾವಣೆಯ ಮೈತ್ರಿ ಪಕ್ಷದ ಚುನಾವಣಾ ಉಸ್ತುವಾರಿಯಾದ ಕೆ, ಗೋಪಾಲಯ್ಯ, ನೆ ಲ ನರೇಂದ್ರಬಾಬು, ಸುರೇಶ್ ಗೌಡ, ವೆಂಕಟೇಶ್ ಕೃಷ್ಣಪ್ಪ, ವೆಂಕಟಪುರ ಯೋಗೀಶ್, ಕುಶಾಲ್ ಕುಮಾರ್, ಮಂಗಿ ಕುಪ್ಪೆ ಬಸವರಾಜ್, ಪ್ರಕಾಶ್, ಜಗದೀಶ್ ಬಾಬು, ಚಿದಾನಂದ್, ಎಡಗಿಹಳ್ಳಿ ವಿಶ್ವನಾಥ್, ಮುದಿಗೆರೆ ಕೆಂಪೇಗೌಡ , ಚಂದ್ರೇಶ್ ,ಕೊಂಡಜ್ಜಿ ವಿಶ್ವನಾಥ್, ಧನಪಾಲ್, ಚುಡಾಮಣಿ ,ಲೀಲಾವತಿ ಗಿಡ್ಡಯ್ಯ, ಇನ್ನು ಅನೇಕ ಮುಖಂಡರು ಈ ಸಭೆಯಲ್ಲಿ ಭಾಗಿಯಾಗಿದ್ದರು.
ವರದಿ : ಮಂಜುನಾಥ ತುರುವೇಕೆರೆ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
Bangalore South : ಬಿಜೆಪಿ ಭದ್ರಕೋಟೆಯಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸುಲಭವೇ..?