Janataa24 NEWS DESK
ಬೀದಿ ನಾಟಕದ ಮುಖೇನ, ಸಾರ್ವಜನಿಕರಿಗೆ ವಿದ್ಯುತ್ ಅಪಘಾತ ತಡೆಯುವ ಅರಿವು ಸಪ್ತಾಹ.

ತುರುವೇಕೆರೆ: ಪಟ್ಟಣದ ಬಾಣಸಂದ್ರ ಸರ್ಕಲ್‌ನಲ್ಲಿ ಇಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಇವರ ವತಿಯಿಂದ, ಹಾಗೂ ತುರುವೇಕೆರೆ ಪಟ್ಟಣದಲ್ಲಿರುವ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಇವರ ವತಿಯಿಂದ,

ವಿದ್ಯುತ್ ಅಪಘಾತ ತಡೆಯುವ ಸಪ್ತಾಹ ಮತ್ತು ಸುರಕ್ಷತೆಯ ಬಗ್ಗೆ ಅರಿವು ಕಾರ್ಯಕ್ರಮಕ್ಕೆ, ತುರುವೇಕೆರೆ ತಾಲೂಕಿನ ಬೆಸ್ಕಾಂನ SO, ಎಂ ಸಿ ರಾಜಶೇಖರಯ್ಯ ಅವರು ತಮಟೆ ಬಡಿಯುವುದರ ಮೂಲಕ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.

ಇದೇ ವೇಳೆ ಧರಣಿ ಸಾಂಸ್ಕೃತಿಕ ಕಲಾ ಬಳಗ ,ಜಕ್ಕೂರು, ತಂಡದಿಂದ ಬೀದಿ ನಾಟಕ ಕಾರ್ಯಕ್ರಮ ಚಾಲನೆಯಾಗಿ, ಜಾನಪದ ಗೀತೆಗಳ ಹಾಡುವುದರ ಮೂಲಕ ವಿದ್ಯುತ್ ಅಪಘಾತ ತಡೆಯುವ ಬಗ್ಗೆ ಅರಿವನ್ನು ನಾಟಕದ ಮೂಲಕ ಸಾರ್ವಜನಿಕರಿಗೆ ಉಣಬಡಿಸಿದರು.

ಇನ್ನು ಈ ಅರಿವು ಸಪ್ತಾಹದಲ್ಲಿ A A O ಶ್ರೀನಿವಾಸ್, A E ಗಿರೀಶ್ ,ಎಸ್ ಓ ಕಾಂತರಾಜ್, ಮಾಯಸಂದ್ರ ಎಸ್ ಓ ನಾರಾಯಣಪ್ಪ, ದಂಡಿನ ಶಿವರ ಎಸ್ಓ ಸೋಮಶೇಖರ್, ಕೆ ಪಿ ಟಿ ಸಿ ಎಲ್ JE, ರಾಜೀವ್, ತಂಡಗ ಎಸ್ಒ ಉಮೇಶ್ವರಯ್ಯ, ತುರುವೇಕೆರೆ ನಗರ ಘಟಕ ದಸಂಸ ಸಂಘಟನಾ ಸಂಚಾಲಕರಾದ ಶಿವರಾಜು, ಇನ್ನು ಅನೇಕ ಸಾರ್ವಜನಿಕರು ಈ ಬೀದಿ ನಾಟಕವನ್ನು ವೀಕ್ಷಣೆ ಮಾಡಿ ಸಪ್ತಾಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ
ತುರುವೇಕೆರೆ: ಮಂಜುನಾಥ್