Document

ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ ಇಂದಿಗೆ 50 ವರ್ಷ.

Janataa24 NEWS DESK

IMG 20240124 WA0009



ತುರುವೇಕೆರೆ: ಪಟ್ಟಣದಲ್ಲಿರುವ ಅಂಬೇಡ್ಕರ್ ಭವನದ ಆವರಣದಲ್ಲಿ ಇಂದು, ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಇಂದಿಗೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ತುರುವೇಕೆರೆ ತಾಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ಸಂಭ್ರಮಾಚರಣೆಯನ್ನು ಆಚರಿಸಲಾಯಿತು.

IMG 20240124 WA0010



ಇದೇ ವೇಳೆ ಮುಖಂಡರುಗಳಾದ ತಾಲೂಕು ಸಂಚಾಲಕ ಕೃಷ್ಣಸ್ವಾಮಿ, ಮುಖಂಡರುಗಳಾದ ಡಾ. ಚಂದ್ರು ಡೊಂಕಿಹಳ್ಳಿರಾಮಣ್ಣ, ಕುಣಿಕೇನಹಳ್ಳಿ ಜಗದೀಶ್ ಇನ್ನು ಹಲವಾರು ಮುಖಂಡರು ಮಾತನಾಡಿ, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಮತ್ತು ಪ್ರೊಫೆಸರ್ ಬಿ ಕೃಷ್ಣಪ್ಪನವರು ದಲಿತ ಸಂಘರ್ಷ ಸಮಿತಿ ಸ್ಥಾಪನೆಗಾಗಿ ಹೋರಾಟ ಮಾಡಿದ ನೆನಪುಗಳನ್ನು ನಮ್ಮ ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ.

IMG 20240124 WA0011



ಇದೇ ಸಂದರ್ಭದಲ್ಲಿ ದಲಿತ ಮುಖಂಡರುಗಳಾದ ತುರುವೇಕೆರೆ ನಗರ ಸಂಚಾಲಕ ಶಿವರಾಜು, ಬಿಗಿನೇಹಳ್ಳಿ ಪುಟ್ಟರಾಜು, ರಾಮಣ್ಣ, ಮಹಿಳಾ ತಾಲೂಕು ಸಂಚಾಲಕಿ ನಂದಿನಿ ,ಸಾವಿತ್ರಮ್ಮ, ಅನ್ನಪೂರ್ಣ ಇನ್ನು ಅನೇಕ ಮುಖಂಡರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.



ಇದೇ ವೇಳೆ ತಾಲೂಕಿನ ನೂರಾರು ಕಾರ್ಯಕರ್ತರುಗಳಿಗೆ ಸಿಹಿಯನ್ನು ಹಂಚಿ, ವಿವಿಧ ಕ್ರಾಂತಿ ಗಳನ್ನು ಹಾಡಿ ಸಂಭ್ರಮಿಸಿದರು.




ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

Document

Leave a Reply

Your email address will not be published. Required fields are marked *