Janataa24 NEWS DESK

ಪಾವಗಡ: ತಾಲೂಕಿನ ರ್ಯಪ್ಟೆ ಮತ್ತು ನಾಗಲಮಡಿಕೆ ಗ್ರಾಮ ಪಂಚಾಯಿತಿ ಯಲ್ಲಿ ಬುಧವಾರ ಗ್ರಾ.ಪಂ ಮಟ್ಟದ ಜನಸಂಪರ್ಕ ಸಭೆ* ನಡೆಸಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ನಂತರ ಅಹವಾಲು ಸ್ವೀಕರಿಸಿ.ಮಾತನಾಡಿ . ಈಗಾಗಲೇ ರಾಪ್ಟೆ ಗ್ರಾಮದ ಸುತ್ತಲೂ ಸೊಲಾರ್ ಪಾರ್ಕ್ ನಿರ್ಮಾಣ ಮಾಡಲು ರೈತರಿಂದ ಜಮೀನು ಪಡೆದುಕೊಳ್ಳಲಾಗುತ್ತಿದೆ ಇನ್ನೋ ಕೇಲವ ದಿನಗಳಲ್ಲಿ ಈ ಭಾಗದ ಹತ್ತು ಸಾವಿರ ಎಕರೆ ಜಮೀನಿನಲ್ಲಿ ಸೊಲಾರ್ ವ್ಯವಸ್ಥೆಗೆ ಸರ್ಕಾರದ ಮಟ್ಟದಿಂದ ಕೇಂದ್ರಕ್ಕೆ ಪ್ರಸ್ತಾವನೆ ಮಾಡಲಾಗಿದೆ ಎಂದರು.

ಈ ಭಾಗದ ಅಭಿವೃದ್ಧಿಗೆ ನಮ್ಮ ತಂದೆ ಮಾಜಿ ಶಾಸಕರಾದ ವೆಂಕಟರಮಣಪ್ಪನವರ ಶ್ರಮ ಹೆಚ್ಚಿನದಾಗಿದೆ.
ನಾಗಲಮಡಿಕೆಯ ಸುಬ್ರಹ್ಮಣ್ಯಂ ಸ್ವಾಮಿ ದೇವಾಲಯದ ಅಭಿವೃದ್ಧಿ ಕುಂಟಿತಗೊಳ್ಳಲೂ ಸ್ಥಳೀಯರಿಂದಲೇ ಅಗಿದೆ. ಈ ದೇವಸ್ಥಾನಲ್ಲಿ ಎರಡು ಗುಂಪುಗಳಿಂದ ಮಾಡಿಕೊಂಡು ಹುಂಡಿಗಳ ಹಣ ಲಪಟಾಯಿಸಲು ಗೊಂದಲ ಶ್ರುಷ್ಟಿ ಮಾಡುತ್ತಿದ್ದಾರೆ.
ದೇವಸ್ಥಾನದ ಅವ್ಯವಸ್ಥೆಗೆ ಕಾರಣವಾಗಿದೆ ಈ ರೀತಿಯಲ್ಲಿ ಇದ್ದಲ್ಲಿ ಎಲ್ಲಿ ಅಭಿವೃದ್ಧಿಯಾಗಲು ಹೇಗೆ ಸಾಧ್ಯ. ಮುಂದಿನ ದಿನಗಳಲ್ಲಿ ಹೊಸ ಕಮಿಟಿ ನೇಮಿಸಿ ರಚಿಸಿ ಸಂಬಂಧಿಸಿದ ಸಚಿವರ ಜೊತೆ ಮಾತನಾಡುತ್ತೇನೆ

ಪಿಡಿಓಗಳ ಕೆಲಸ ಡಾಬಾಗಳಲ್ಲಿ ಕುಳಿತು ನಿರ್ವಹಿಸುತ್ತಾರೆ.
ತಾಲೂಕಿನಲ್ಲಿ ಹಲವು ಇಲಾಖೆಗಳಲ್ಲಿ ಬೀಡುಬಿಟ್ಟ ಅಧಿಕಾರಿಗಳನ್ನು ಮುಂದಿನ ಮಾರ್ಚ್ ಕೊನೆಯಲ್ಲಿ ಬದಾಲಾವಣೆ ಮಾಡಿದರೆ ಉತ್ತಮ ಆಡಳಿತ ನಾನು ನೀಡಬಹುದು ಎಂದರು.

ಪ್ರತಿಯೊಬ್ಬ ವ್ಯಕ್ತಿಗೂ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ತಾಲೂಕಿನ ವಿವಿಧ ಪಂಚಾಯತಿ ವ್ಯಾಪ್ತಿಯಲ್ಲಿ ವಾರಕ್ಕೆ ಎರಡು ದಿನ ಜನ ಸಂಪರ್ಕ ಸಭೆ ಮಾಡುತ್ತಿದ್ದು ಈ ಕಾರ್ಯಕ್ರಮ ದಲ್ಲಿ ತಾಲ್ಲೂಕಿನ ವಿವಿಧ ಇಲಾಖೆಯ ಯೋಜನೆ ಬಗ್ಗೆ ಜನರಿಗೆ ತಿಳಿಸುವ ಮೂಲಕ ಅರ್ಹ ಜನರಿಗೆ ಸರ್ಕಾರದ ಯೋಜನೆ ನೀಡಬೇಕು ಎಂಬುದೆ ನನ್ನ ಆಶಯವಾಗಿದೆ ಎಂದು ತಿಳಿಸಿದರು.

ರಾಜ್ಯದ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಯೋಜನೆಗಳು ಬಡವರ ಪರ ಇದ್ದು ಜನರು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಿದ್ದಾರೆ.
ಈ ಇದೆ ವೇಳೆ ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರಿಂದ ಸಾರ್ವಜನಿಕರ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯಿತು.ವಿವಿಧ ಇಲಾಖೆಗಳಿಂದ ಅರ್ಹ ಫಲಾನುಭವಿಗಳಿಗೆ ಹಲವು ಸವಲತ್ತುಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಡಿ.ಎನ್.ವರದರಾಜು ,ಕಾರ್ಯ ನಿರ್ವಾಹಣಾಧಿಕಾರಿ ಜಾನಿಕಿರಾಮ್. ಹಾಗೂ ರ್ಯಾಪ್ಟೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಂಜಿನಮ್ಮ ಉಪಾಧ್ಯಕ್ಷರಾದ ಲೀಲಾವತಿ. ಮುಖಂಡರಾದ ರಾಮಚಂದ್ರರೆಡ್ಡಿ ಲಕ್ಷ್ಮರೆಡ್ಡಿ ರಾಮನ್ಜಪ್ಪ ಪಿ ಡಿ ಓ ರಂಗದ ದಾಂ.ನಾಗಲಮಡಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪುರುಷೋತ್ತಮರೆಡ್ಡಿ . ಜೀಪ್ ಎ .ಡಬಲ್ .ಇ .ಸುರೇಶ್. ಲೋಕೋಪಯೋಗಿ ಇಲಾಖೆಯ ಅನಿಲ್ ಕುಮಾರ್. ಗ್ರಾಮಾಂತರ ಸಿಪಿಐ ಗಿರೀಶ್. ಬಿ ಯು ಇಂದ್ರನಮ್ಮ ಬಿ.ಆರ್. ಸಿ .ವೆಂಕಟೇಶ್. ಸಿ.ಡಿಪಿ.ಓ. ಸುನಿತಾ ಪಶು ವೈದ್ಯಾಧಿಕಾರಿ ವರಕೆರಪ್ಪ ನಾಗಲಮಡಿಕೆ ಪಿ.ಡಿ.ಒ .ಹನುಮಂತ ರಾಯಪ್ ಬಿಸಿಎಂ ಗೋಪಾಲ. ಸಮಾಜ ಕಲ್ಯಾಣ ಅಧಿಕಾರಿ ಮಲ್ಲಿಕಾರ್ಜುನ. ಎಸ್ ಟಿ ಅಧಿಕಾರಿ ಸಿದ್ದರಾಜು.ಹಾಗೂ ಸ್ಥಳೀಯರು. ಉಪಸ್ಥಿತರಿದ್ದರು.
ವರದಿ: ಇಮ್ರಾನ್ ಉಲ್ಲಾ.ಪಾವಗಡ