Document

800ವರ್ಷಗಳ ಪುರಾತನ ಶ್ರೀ ರಾಮನಿಗೆ ಪೂಜೆ ಸಲ್ಲಿಸಿದ- ಡಾ| ಪ್ರಕಾಶ್

Janataa24 NEWS DESK


ಅತ್ಯಂತ ಪುರಾತನವಾದ ಶ್ರೀ ರಾಮನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಿ ಜೆ ಪಿ ಪಕ್ಷದ ಬಾಗಲಕೋಟೆ ಲೋಕಸಭೆ ಚುನಾವಣಾ ಪ್ರಬಲ ಆಕಾಂಕ್ಷಿ ಡಾ! ಪ್ರಕಾಶ್ ಜೆ ಪರಪ್ಪ ದಂಪತಿ.

IMG 20240123 WA0016



ಬಾಗಲಕೋಟೆ: ನೂರಾರು ವರ್ಷಗಳ ಹೋರಾಟದ ಫಲವಾಗಿ ವಿಶ್ವಗುರು ಪ್ರಧಾನಿ ನರೇಂದ್ರ ಮೋದಿ ಯವರ ದಿಟ್ಟ ಅವಿರತ ಪ್ರಯತ್ನದಲ್ಲಿ ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ನ ಮಂದಿರ ಉದ್ಘಾಟನೆ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಟಾಪನೆ ಹಿನ್ನೆಲೆಯಲ್ಲಿ ಇಡೀ ದೇಶವೇ ರಾಮ ನಾಮ ಜಪ ಮಾಡುತ್ತಿದೆ.

IMG 20240123 WA0014



ವಿದೇಶಗಳಿಂದಲೂ ಕೂಡ ಶುಭಾಶಯಗಳು ಹರಿದು ಬರುತ್ತಿವೆ. ಐತಿಹಾಸಿಕ ಗೆಲುವಿನ ರೂವಾರಿ ಹರಿಕಾರ ಪ್ರಧಾನಿ ನರೇಂದ್ರ ಮೋದಿ ಯವರಿಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಇತ್ತ ಬಾಗಲಕೋಟೆಯ ಲೋಕಸಭೆ ಭಾರತೀಯ ಜನತಾ ಪಕ್ಷದ ಪ್ರಬಲ ಚುನಾವಣಾ ಟಿಕೆಟ್ ಆಕಾಂಕ್ಷಿ ಐ. ಎ. ಎಸ್. ಪಾಸಾಗಿ ಆರ್ಥಿಕ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ವೈದ್ಯಕೀಯ ವೃತ್ತಿಯಲ್ಲಿ ಎಂ. ಬಿ. ಬಿ. ಎಸ್. ಆಗಿರುವ ಡಾ! ಪ್ರಕಾಶ್ ಜೆ. ಪರಪ್ಪ ದಂಪತಿಗಳು ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮದಲ್ಲಿರುವ ಅತ್ಯಂತ ಪುರಾತನವಾದ ಸುಮಾರು 800 ವರ್ಷಕ್ಕೂ ಹಳೆಯದಾದ ಶ್ರೀ ರಾಮನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.



ಈ ದೇವಸ್ಥಾನದ ವಿಶೇಷ ಏನೆಂದರೆ ಪ್ರತಿ ವರ್ಷ ಯುಗಾದಿ ಹಬ್ಬದಂದು ಸೂರ್ಯನ ಪ್ರಥಮ ಕಿರಣಗಳು ಶ್ರೀ ರಾಮ ದೇವರ ಪಾದವನ್ನು ಸ್ಪರ್ಶಸುತ್ತವೆ.

IMG 20240123 WA0015



ವರದಿ: ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ

Document

Leave a Reply

Your email address will not be published. Required fields are marked *