Document

ಕಾರನಾಗನಹಟ್ಟಿ ಗ್ರಾಮಕ್ಕೆ ಸಾರಿಗೆ ಬಸ್ ಬಂತು: ಜನರ ಸಮಸ್ಯೆಗೆ ಸ್ಪಂದಿಸಿದ ಶಾಸಕ ಹೆಚ್.ವಿ.ವೆಂಕಟೇಶ್.

Janataa24 NEWS DESK

IMG 20240119 WA0012

ಪಾವಗಡ: ಕಾರನಾಗನಹಟ್ಟಿ ಗ್ರಾಮಕ್ಕೆ ಸಾರಿಗೆ ಬಸ್ ಬಂತು. ಶಾಲೆಯ ಮಕ್ಕಳ ಬಸ್ ವ್ಯವಸ್ಥೆಗೆ ತಕ್ಷಣವೇ ಸ್ಪಂದಿಸಿದ ಶಾಸಕ ಹೆಚ್.ವಿ.ವೆಂಕಟೇಶ್.



ಶಾಸಕರ ಜನ ಸಂಪರ್ಕ ಸಭೆಯಲ್ಲಿ ಕಾರನಾಗನಹಟ್ಟಿ ಗ್ರಾಮದ ಶಾಲಾ ಮಕ್ಕಳಿಂದ ಶಾಲೆಗೆ ಹೋಗುವ ವೇಳೆಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂಬುದಾಗಿ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ತಾಲೂಕಿನ ಕಾರನಾಗನಹಟ್ಟಿ ಗ್ರಾಮದ ಶಾಲಾ ಕಾಲೇಜು ವೇಳೆಗೆ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಸಿದ್ದು ಶುಕ್ರವಾರ ಗ್ರಾಮದ ಮಹಿಳೆಯರು ಹಾಗೂ ಸ್ಥಳೀಯರಿಂದ ಪೂಜೆ ಸಲ್ಲಿಸಿ ತೆಂಗಿನಕಾಯಿ ಹೊಡೆದು ಸಿಹಿ ಹಂಚಿಕೆ ಮಾಡುವ ಮೂಲಕ ಸ್ವಾಗತಿಸಿದ್ದು ವಿಶೇಷವಾಗಿತ್ತು.

IMG 20240119 WA0011



ಪಾವಗಡ ತಾಲ್ಲೂಕಿನ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಜನಸಂಪರ್ಕ ಸಭೆ ನಡೆಯುತ್ತಿರುವ ಸಂದರ್ಭದಲ್ಲಿ ಕಾಮನಹಟ್ಟಿ ಗ್ರಾಮದ ಶಾಲಾ ಮಕ್ಕಳು ಮಾನ್ಯ ಶಾಸಕರಾದ ಹೆಚ್ ವಿ ವೆಂಕಟೇಶ್ ರವರನ್ನು ಭೇಟಿ ಮಾಡಿ ತಮ್ಮೂರಿನ ಬಸ್ ಸಮಸ್ಯೆಯ ಬಗ್ಗೆ ಪ್ರಸ್ತಾಪ ಮಾಡಿದರು.ತಕ್ಷಣವೆ ಮಕ್ಕಳ ಮನವಿಗೆ ಸ್ಪಂದಿಸಿದ ಶಾಸಕರು ಸಭೆಯಲ್ಲಿದ್ದ KSRTC ಡಿಪೋ ವ್ಯವಸ್ಥಾಪಕರನ್ನು ಕರೆಸಿ ಎರಡು ದಿನಗಳಲ್ಲಿ ಕಾಮನಹಟ್ಟಿಗೆ ಬಸ್ ವ್ಯವಸ್ಥೆ ಕಲ್ಪಿಸಿ, ಮಕ್ಕಳ ಕಷ್ಟಕ್ಕೆ ಸ್ಪಂದಿಸಿಬೇಕೆಂದು ಸೂಚಿಸಿದರು.

IMG 20240119 WA0013



ಸ್ಥಳೀಯ ಯುವ ಮುಖಂಡ ಮಂಜುನಾಥ್ ಮಾತನಾಡಿ ನಮ್ಮ ವ್ಯಾಪ್ತಿಯಲ್ಲಿ ಜನ ಸಂಪರ್ಕ ಸಭೆ ಶಾಸಕರ ಗಮನಕ್ಕೆ ಶಾಲೆಯ ವೇಳೆ ಮಕ್ಕಳಿಗೆ ಶರಿಗೆ ವ್ಯವಸ್ಥೆ ಇಲ್ಲದೆ ಬಹಾಳಷ್ಟು ನಮಸ್ಯೆ ಯಾಗಿದೆ ಎಂಬುದಾಗಿ ಹೇಳಿದ ತಕ್ಷಣವೇ ಬಸ್ ವ್ಯವಸ್ಥೆ ಕಲ್ಪಸಿದ ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ನಮ್ಮ ಸುತ್ತುಮುತ್ತಲಿನ ಗ್ರಾಮದ ಜನರಿಂದ ಕೃತಜ್ಞತೆ ಸಲ್ಲಿಸುತ್ತಿದ್ದೆವೆ ಎಂದರು.



ವರದಿ: ಇಮ್ರಾನ್ ಉಲ್ಲಾ.ಪಾವಗಡ

Document

Leave a Reply

Your email address will not be published. Required fields are marked *