ಪ್ರತಿಭಟನೆಯ ನೆಪದಲ್ಲಿ ಸಮಾಜಕ್ಕೆ ಸುಳ್ಳು ಮಾಹಿತಿ, ನಾರಾಯಣಪ್ಪನಿಗೆ ಅನ್ಯಾಯ: ನಂಜೇಗೌಡ ಆರೋಪ.
Janataa24 NEWS DESK

ತುರುವೇಕೆರೆ: ತಾಲೂಕಿನ ತಾಳಕೆರೆ ಗ್ರಾಮದ ಸರ್ವೆ ನಂಬರ್ 25/39ರ 20 ಗುಂಟೆ ಸ್ವತ್ತಿನ ಮಾಲೀಕರಾದ ನಾರಾಯಪ್ಪನವರ ಜಮೀನಿಗೆ ಪಕ್ಕದ ಜಮೀನಿನ ಮಾಲೀಕರಾದ ಪ್ರಮೀಳಮ್ಮ ಮತ್ತು ಸಂಬಂಧಿಕರು ಏಕಾಏಕಿ ಅತಿಕ್ರಮ ಪ್ರವೇಶ ಮಾಡಿ ದೌರ್ಜನ್ಯ ಮತ್ತು ಅಪಾರ ನಷ್ಟ ಮಾಡಿದ್ದಾರೆ ಎಂದು ಹಿರಿಯ ಮುಖಂಡ ಬೈತರಹೊಸಹಳ್ಳಿ ನಂಜೇಗೌಡ ಗಂಭೀರವಾಗಿ ಆರೋಪಿಸಿದ್ದಾರೆ.
ತಾಲೂಕಿನ ಪುಟ್ಟ ಮಾದಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು 1994 ನೇ ಸಾಲಿನಲ್ಲಿ ತಾಳ್ಕೆರೆ ಗ್ರಾಮದ ಸರ್ವೆ ನಂಬರ್ 25/ 39ರಲ್ಲಿ 20 ಗುಂಟೆ ಜಮೀನು ನಾರಾಯಣಪ್ಪನವರಿಗೆ ಮಂಜೂರಾಗಿರುವುದು ಸತ್ಯದ ಸಂಗತಿ. ಸರ್ಕಾರಿ ಸ್ಕೆಚಿನಂತೆ ಅಂದಿನಿಂದ ಇಂದಿನವರೆಗೂ ನಾರಾಯಣಪ್ಪನವರು ಹಾಗೂ ಅವರ ಕುಟುಂಬ ಅನುಭವದಲ್ಲಿದ್ದಾರೆ. ಹೀಗಿರುವಾಗ ಪಕ್ಕದ ಜಮೀನಾದ ಸರ್ವೆ ನಂಬರ್ 25/8 ಒಂದು ಎಕರೆ ಬಾಬ್ತಿನ ಮಾಲೀಕರಾದ ಪ್ರಮೀಳಮ್ಮನವರು, ನಾರಾಯಣ್ಣಪ್ಪನವರ ಜಮೀನು ಸಹ ನಮಗೆ ಸೇರಿದ್ದು ಎಂದು ಹಲವು ವರ್ಷಗಳಿಂದ ವ್ಯಾಜ್ಯಗಳನ್ನು ಮಾಡುತ್ತಾ ನ್ಯಾಯಾಲಯದ ಮೊರೆ ಹೋಗುವ ಮೂಲಕ ನ್ಯಾಯಾಲಯದಲ್ಲಿ ನಾರಾಯಣಪ್ಪನವರ ವಿರುದ್ಧ ಸೋತಿದ್ದಾರೆ.
ಆರ್.ಎ.35/2021ರಲ್ಲಿ ನಾರಾಯಣಪ್ಪನವರು ಈ ಜಮೀನಿಗೆ ಸಂಬಂಧಿಸಿದಂತೆ ಎಲ್ಲಾ ನ್ಯಾಯಾಲಯದಲ್ಲಿ ತಮ್ಮ ಸ್ವಾಧೀನದ ಗೆಲುವನ್ನು ಪಡೆಯುತ್ತಾ,ಶಾಶ್ವತ ಮಾಲೀಕರು ಹಾಗೂ ಶಾಶ್ವತ ನಿರ್ಬಂಧದ ಹಕ್ಕನ್ನು ಪಡೆದವರಾಗಿದ್ದಾರೆ. ಪಕ್ಕದ ಜಮೀನಿನ ಪ್ರಮೀಳಮ್ಮನವರ ಈ ವಾಜ್ಯಗಳಿಗೆ ಸಂಬಂಧಿಸಿದಂತೆ ಹಲವು ಬಾರಿ ಸ್ಥಳೀಯ ಪೊಲೀಸ್ ಠಾಣೆಗೆ ದೂರನ್ನು ಸಹ ನೀಡಲಾಗಿತ್ತು, ಹಲವು ಬಾರಿ ಏಕಾಏಕಿ ಅತಿಕ್ರಮ ಪ್ರವೇಶಿಸಿ ನಾರಾಯಣಪ್ಪನವರ ಜಮೀನಿನ ಸ್ವಾದೀನವನ್ನು ಬಿಡಿಸಲು ದೌರ್ಜನ್ಯದ ಮೂಲಕ ಪ್ರಯತ್ನಪಟ್ಟಿದ್ದಾರೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗದ ಕಾರಣ, ಉದ್ದೇಶಪೂರ್ವಕವಾಗಿ ತಾಲೂಕು ಕಚೇರಿ ಆವರಣದ ಮುಂಭಾಗ ಬುಧವಾರ ಮೌನ ಪ್ರತಿಭಟನೆ ಮಾಡುವ ಮೂಲಕ ಸಮಾಜಕ್ಕೆ ಮತ್ತು ಮಾಧ್ಯಮಗಳಿಗೆ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ.
ಈಗಾಗಲೇ ಕಂದಾಯ ಇಲಾಖೆ, ಇಲಾಖೆಯ ಜೊತೆಗೂಡಿ,ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ನಾರಾಯಣಪ್ಪನವರ ಜಮೀನಿಗೆ ಸಂಬಂಧಿಸಿದಂತೆ ಇದುವರೆಗೂ ಸಂಬಂಧಪಟ್ಟಇಲಾಖೆಗಳು 7 ಬಾರಿ ಸರ್ವೇ ಮಾಡಲಾಗಿದೆ. ಅಂತಿಮವಾಗಿ ಸರ್ಕಾರಿ ಮಂಜೂರಾತಿ ನಕ್ಷೆಯಂತೆ ಅಳತೆ ಮಾಡಿ ಸರಿಯಾದ ಜಾಗವನ್ನು ತೋರಿಸಿ ದಿನಾಂಕ 21-02-2023ರಂದು ಜಂಟಿ ಸರ್ವೆ ಕಾರ್ಯಚರಣೆಯನ್ನು ಮಾಡಿ ಪ್ರಮೀಳಮ್ಮನವರ ಸಮ್ಮುಖದಲ್ಲಿ ಇಬ್ಬರ ವ್ಯಾಜ್ಯಗಳಿಗೆ ನೈಜ ತೀರ್ಮಾನ ಮಾಡಲಾಗಿದೆ.

ಹೀಗಿರುವಾಗ ಪ್ರಮೀಳಮ್ಮನವರ ಜಮೀನಿಗೂ ಹಾಗೂ ನಾರಾಯಣಪ್ಪನವರ ಜಮೀನಿಗೂ ಯಾವುದೇ ಸಂಬಂಧವಿಲ್ಲದಿದ್ದರೂ, ಮಾಲಿಕತ್ವದ ಸರ್ವೇ ನಂಬರ್ ನ ಜಾಗವನ್ನು ಬಿಟ್ಟು ಯಾರೊಂದು ಜಾಗವನ್ನು ತೋರಿಸಿದರೆ ಎಷ್ಟು ಸರಿ? ಸರ್ಕಾರಕ್ಕೆ ಹಾಗೂ ನ್ಯಾಯಾಲಯಕ್ಕೆ , ಸಮಾಜಕ್ಕೆ ಸುಳ್ಳು ಚೆಕ್ಕುಬಂದಿಯನ್ನು ನೀಡಿ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು, ಪ್ರತಿಭಟನೆಯ ನೆಪದಲ್ಲಿ ಸುಳ್ಳು ಮಾಹಿತಿ ನೀಡುವ ಮೂಲಕ ತಡದಿನವಾದ ಗುರುವಾರ ಬೆಳಗ್ಗೆ ಕೆಲ ಅಧಿಕಾರಿಗಳೊಂದಿಗೆ ರಸ್ತೆ ಇಲ್ಲ ರಸ್ತೆ ಬಿಡಿಸಿ ಕೊಡಿ ಎಂದು ಅಧಿಕಾರಿಗಳ ಮನವೊಲಿಸಿ ಸಂಬಂಧಿಕರ, ಸಂಘಟನೆಕಾರರ ಜೊತೆಗೂಡಿ ಏಕಾಏಕಿ ನಾರಾಯಣಪ್ಪನವರ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಸ್ವಾಧೀನ ಬಿಡಿಸುವ ಪಿತೂರಿಯನ್ನು ಮಾಡಿಕೊಂಡು ದೌರ್ಜನ್ಯ ಮತ್ತು ಅಪಾರ ನಷ್ಟವನ್ನು ಉಂಟು ಮಾಡಿದ್ದಾರೆ.


ಈ ಸಂಬಂಧ ತಡರಾತ್ರಿ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಎಲ್ಲಾ ದಾಖಲೆಗಳನ್ನು ಹಾಜರುಪಡಿಸಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ .ನಾವು ಕಾನೂನು ಬದ್ಧವಾಗಿ ಅನ್ಯಾಯಕ್ಕೊಳಗಾದ ಬಡಪಾಯಿ ನಾರಾಯಣಪ್ಪನವರ ಜೊತೆಗೂಡಿ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ ಅಲ್ಲದೆ ವ್ಯಾಜ್ಯಕ್ಕೆ ಸಂಬಂಧಪಟ್ಟ ಸತ್ಯಾನು ಸತ್ಯತೆಯನ್ನು ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಸ್ಥಳ ಪರಿಶೀಲಿಸಿ, ಇದುವರೆಗೂ ಆಗಿರುವ ಕಾನೂನು ಹೋರಾಟ ಮತ್ತು ನೈಜ ಮಾಲೀಕತ್ವದ ಸತ್ಯವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ ಬಡಪಾಯಿ ನಾರಾಯಣಪ್ಪನವರಿಗೆ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಬೇಕೆಂದು ಮಾನ್ಯ ಸರ್ಕಾರಕ್ಕೆ,ಜಿಲ್ಲಾಧಿಕಾರಿಗಳಿಗೆ ತಿಪಟೂರು ಉಪ ವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಸಮಸ್ಯೆ ಬಗೆಹರಿಯದಿದ್ದಾರೆ ಗ್ರಾಮಸ್ಥರೊಂದಿಗೆ ಜೊತೆಗೂಡಿ ನೊಂದ ನಾರಾಯಣಪ್ಪ ನವರ ಕುಟುಂಬದೊಂದಿಗೆ ನ್ಯಾಯಯುತ ಸಂಘಟನೆಗಳ ಜೊತೆಗೂಡಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ನಾವುಗಳು ಸಹ ಅಹೋ ರಾತ್ರಿ ಧರಣಿಯನ್ನು ನಡೆಸಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕುಟುಂಬಸ್ಥರಾದ ಆಶಾ, ರಶ್ಮಿ, ಗ್ರಾಮಸ್ಥರಾದ ಶಿವಕುಮಾರ್, ಗೋವಿಂದಯ್ಯ ಸೇರಿದಂತೆ ಮುಂತಾದವರು ಉಪಸಿತರಿದ್ದರು.
ವರದಿ
ತುರುವೇಕೆರೆ: ಮಂಜುನಾಥ್